Slide
Slide
Slide
previous arrow
next arrow

ಹೈನುಗಾರರು ಧೃತಿಗೆಡಬೇಡಿ, ಹಾಲು ಒಕ್ಕೂಟ ಸದಾ ನಿಮ್ಮ ಬೆಂಬಲಕ್ಕಿದೆ: ಕೆಶಿನ್ಮನೆ

300x250 AD

ಶಿರಸಿ: ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಅನೇಕ ರೈತರ, ಹೈನುಗಾರರ, ಜನಸಾಮಾನ್ಯರ ಜೀವನವು ಕಷ್ಟಕ್ಕೆ ಈಡಾಗಿದೆ. ಹೈನುಗಾರರು ತಮ್ಮ ದಿನನಿತ್ಯದ ಕೆಲಸ ನಿರ್ವಹಿಸುವಾಗ ಆರೋಗ್ಯದ ಕಾಳಜಿ ವಹಿಸಬೇಕೆಂದು ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ಎಲ್ಲಾ ಪ್ರದೇಶದಲ್ಲಿ ಬಿಟ್ಟುಬಿಡದೇ ಮಳೆ ಸುರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಸಂಚಾರಕ್ಕೆ ವ್ಯತ್ಯಯವಾಗಿದೆ. ಹೈನುಗಾರರಿಗೂ ಸಹ ಜಿಲ್ಲೆಯಲ್ಲಿನ ತೀವ್ರ ಮಳೆಯಿಂದ ನಿತ್ಯದ ಕೆಲಸಕ್ಕೆ ತೊಡಕಾಗಿದೆ. ಸಿದ್ದಾಪುರದಲ್ಲಿ ಕೊಟ್ಟಿಗೆ ಮೇಲೆ ಮರಬಿದ್ದು ಹಸು ಮೃತಪಟ್ಟಿದ್ದು, ಇದು ನಿಜಕ್ಕೂ ದುಃಖದ ಸಂಗತಿ. ಮೃತಪಟ್ಟಿರುವ ಹಸುವಿನ ಯಜಮಾನ ಅಗತ್ಯ ದಾಖಲೆ ಒದಗಿಸಿದ್ದಲ್ಲಿ, ರೈತನಿಗೆ ಒಕ್ಕೂಟದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ದೊರಕಿಸಲಾಗುವುದು.

ಸ್ಥಳೀಯ ಹಾಲು ಉತ್ಪಾದಕ ಕೇಂದ್ರಕ್ಕೆ ಮಾಹಿತಿ ನೀಡಿ:

ಅದರಂತೆ ಯಾವುದೇ ಹೈನುಗಾರರು ಜಾನುವಾರು ಮೃತಪಟ್ಟಲ್ಲಿ ತಕ್ಷಣವೇ ಸ್ಥಳೀಯರ ಸಹಕಾರದಿಂದ ಸ್ಥಳ ಪಂಚನಾಮೆ ಮಾಡಿಸಿ, ಸ್ಥಳೀಯ ಹಾಲು ಉತ್ಪಾದಕ ಕೇಂದ್ರದ ಕಾರ್ಯದರ್ಶಿಯ ಗಮನಕ್ಕೆ ತರಬೇಕು. ಆಗ ಮಾತ್ರ ಒಕ್ಕೂಟದಿಂದ ದೊರೆಯುವ ಸೌಲಭ್ಯಕ್ಕೆ ಅನುಕೂಲವಾಗುತ್ತದೆ. ಜೊತೆಗೆ ಹಳ್ಳಿಯ ರೈತರು ಜಾನುವಾರುಗಳಿಗೆ ಬೆಟ್ಟಗಳಿಂದ ಹಸಿಮೇವು ತರುವಾಗ ತಮ್ಮ ಆರೋಗ್ಯದ ಕಾಳಜಿ ವಹಿಸಬೇಕು ಹಾಗು ಮಳೆ ಕಡಿಮೆಯಾಗುವರೆಗೆ ಗುಡ್ಡಗಳಿಗೆ ಮೇಯಲು ಜಾನುವಾರುಗಳನ್ನು ಬಿಡುವುದು ಸೂಕ್ತವಲ್ಲ. ಯಾವುದೇ ವಿಷಯದಲ್ಲಿ ಹೈನುಗಾರರು ಧೃತಿಗೆಡುವ ಅವಶ್ಯಕತೆಯಿಲ್ಲ. ಧಾರವಾಡ ಹಾಲು ಒಕ್ಕೂಟ ಮತ್ತು ಒಕ್ಕೂಟದ ಎಲ್ಲ ನಿರ್ದೇಶಕರುಗಳು ಹೈನುಗಾರರ ಬೆಂಬಲಕ್ಕೆ ಸದಾ ಇರುವುದಾಗಿ ಅವರು ತಿಳಿಸಿದ್ದಾರೆ.

300x250 AD

ಮೃತರಿಗೆ ಸರಕಾರ ಸೂಕ್ತ ಪರಿಹಾರ ನೀಡಲಿ:

ಅಂಕೋಲಾದ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದಲ್ಲಿ ಆರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಮೃತರಾದವರಿಗೆ ಸದ್ಗತಿ ದೊರೆಯಲಿ ಮತ್ತು ಮೃತರ ಕುಟುಂಬಕ್ಕೆ ಭಗವಂತ ದುಃಖ ಸಹಿಸುವ ಶಕ್ತಿಯನ್ನು ನೀಡಲಿ. ಜೊತೆಗೆ ರಾಜ್ಯ ಸರಕಾರ ನೆರೆ ಸಂತ್ರಸ್ತರಿಗೆ ಕೂಡಲೇ ಹೆಚ್ಚಿನ ಪ್ರಮಾಣದಲ್ಲಿ ಸೂಕ್ತ ಪರಿಹಾರವನ್ನು ನೀಡಬೇಕೆಂದು ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top