Slide
Slide
Slide
previous arrow
next arrow

ಗೋಕರ್ಣ ಮಹಾಬಲೇಶ್ವರ ಸನ್ನಿಧಿಯಲ್ಲಿ ಪೂಜೆ ವಿವಾದ: ಪ್ರತಿಭಟನೆ

300x250 AD

ಗೋಕರ್ಣ : ಶ್ರೀ ಕ್ಷೇತ್ರ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿರುವ ನಂದಿಗೆ ತೀರ್ಥ ಪ್ರಸಾದ ಉಪಾಧಿ ನೀಡುವ ಕಾರ್ಯ ಹಲವು ಶತಮಾನಗಳಿಂದ ಎರಡು ಕುಟುಂಬಗಳಿಗೆ ವಹಿಸಲಾಗಿದ್ದು, ಆದರೆ ಕಳೆದ ಕೆಲವು ವರ್ಷಗಳಿಂದ ಒಂದೇ ಕುಟುಂಬದವರು ವರ್ಷವಿಡೀ ತಾವೇ ಕರ್ತವ್ಯ ನಿರ್ವಹಿಸಿ ಇನ್ನೊಂದು ಮನೆತನಕ್ಕೆ ಅವಕಾಶ ನೀಡದಿರುವುದಕ್ಕೆ ಗುರುವಾರ ದೇವಸ್ಥಾನದ ಆವರಣದಲ್ಲಿ ಪ್ರತಿಭಟನೆ ನಡೆದವು.

ಶಂಕರ ಗೋಪಿ ಮನೆತನ ಹಾಗೂ ಜಂಬೆ ಬಾಲಕೃಷ್ಣ ಮನೆತನದವರು ಆರು, ಆರು ತಿಂಗಳು ಮಹಾಬಲೇಶ್ವರ ಗರ್ಭಗುಡಿಯ ನಂದಿವಿಗ್ರಹ ಪೂಜೆ ಹಾಗೂ ತೀರ್ಥ ಪ್ರಸಾದಗಳನ್ನು ಭಕ್ತರಿಗೆ ವಿತರಿಸುತ್ತಿದ್ದರು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶ್ರೀ ಮಹಾಬಲೇಶ್ವರ ದೇವಸ್ಥಾನವನ್ನು ಶ್ರೀ ರಾಮಚಂದ್ರಾಪುರ ಮಠಕ್ಕೆ ವಹಿಸಿತ್ತು. ಅದಾದ ನಂತರವೂ ಶಂಕರ ಗೋಪಿ ಮನೆತನದವರು ತಮ್ಮ ಜವಾಬ್ದಾರಿಯನ್ನು ಮುಂದುವರೆಸಿಕೊಂಡು ಬಂದಿದ್ದರು. ಯಾವಾಗ ಕೋರ್ಟಿನಲ್ಲಿ ರಾಮಚಂದ್ರಾಪುರ ಮಠಕ್ಕೆ ಹಿನ್ನಡೆಯಾಯಿತೋ ಆಗ ಶಂಕರ ಗೋಪಿ ಕುಟುಂಬ ಸೇರಿದಂತೆ ಈ ಹಿಂದೆ ಅಧಿಕಾರ ಚಲಾಯಿಸುತ್ತಿದ್ದ ಕೆಲವರ ಅಧಿಕಾರ ಕಿತ್ತು, ಆರು ತಿಂಗಳು ಮಾಡುತ್ತಿದ್ದ ಶಂಕರ ಗೋಪಿ ಅವರಿಗೆ ಅವಕಾಶ ಇಲ್ಲದಂತೆ ಮಾಡಲಾಯಿತು ಎಂದು ಸ್ವತಃ ಶಂಕರ ಗೋಪಿ ಅವರೇ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ರಾಮಚಂದ್ರಾಪುರ ಮಠದಿಂದ ದೇವಸ್ಥಾನವನ್ನು ಬಿಡುಗಡೆಗೊಳಿಸಿ ಅದನ್ನು ನ್ಯಾಯಾಲಯ ಸರಕಾರಕ್ಕೆ ವಹಿಸಿದಾಗ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ, ಉಪವಿಭಾಗಾಧಿಕಾರಿಯಾಗಿ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದರು. ತಮ್ಮ ಪಾಳಿ ಪ್ರಕಾರ ಬರುವ ಜವಾಬ್ದಾರಿಯನ್ನು ಶಂಕರ ಗೋಪಿ ಮನೆತನದವರು ಮಾಡಲು ಮುಂದಾದಾಗ ಅವರಿಗೆ ಮಾಡಲು ಬಿಡದೇ ಈ ಹಿಂದಿನವರೇ ಮುಂದುವರೆಸಿಕೊಂಡು ಬರುವಂತೆ ಮಾಡಲಾಯಿತು. ಹೀಗಾಗಿ ಶಂಕರ ಗೋಪಿ ಕುಟುಂಬದವರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದರು. ಅವರಿಗೆ ಅವಕಾಶ ನೀಡಿರಲಿಲ್ಲ. ಪ್ರತಿವರ್ಷ ಮನವಿ ಸಲ್ಲಿಸುತ್ತಲೇ ಬಂದಿದ್ದರೂ ಇದುವರೆಗೂ ನ್ಯಾಯ ಸಿಗಲಿಲ್ಲ ಎನ್ನುವ ಆಕ್ರೋಶದಲ್ಲಿ ಗುರುವಾರ ಶಂಕರ ಗೋಪಿ ಮನೆತನದವರು ಸಾಮಾಜಿಕ ಕಾರ್ಯಕರ್ತರು, ಉಪಾಧಿವಂತರು ಸೇರಿ ದೇವಸ್ಥಾನದ ಒಳಗಡೆ ಪ್ರತಿಭಟನೆ ನಡೆಸಿದರು.

300x250 AD

ಮುಂದಾಗಬಹುದಾದ ಅನಾಹುತವನ್ನು ಅರಿತ ಪೊಲೀಸರು ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಅವರಿಗೆ ಮಾಹಿತಿ ನೀಡಿದರು. ನಂತರ ಅವರು ಬಂದು ಸಭೆ ನಡೆಸಿದರು. ತಮ್ಮ ಅಭಿಪ್ರಾಯವನ್ನು ಶಂಕರ ಗೋಪಿ ಮನೆತನದವರು ದಾಖಲೆ ಸಮೇತ ಹೇಳುತ್ತಿದ್ದಂತೆಯೇ ಪದೇ ಪದೇ ಉಪವಿಭಾಗಾಧಿಕಾರಿಗಳು ನೀವು ಸುಳ್ಳು ಮಾಹಿತಿ ನೀಡುತ್ತಿದ್ದಿರಿ ಎಂದು ಹೇಳಿದಾಗ ಘರ್ಷಣೆಗೆ ಕಾರಣವಾಯಿತು.

ಹೀಗಾಗಿ ಸಭೆಯಲ್ಲಿದ್ದ ಬಹುತೇಕರನ್ನು ಹೊರ ಹಾಕುವಂತೆ ಉಪವಿಭಾಗಾಧಿಕಾರಿ ಪೊಲೀಸರಿಗೆ ಸೂಚಿಸಿದರು. ಅದರಂತೆ ಬಲವಂತವಾಗಿ ಪೊಲೀಸರು ವರ್ತಿಸಿ ಹಲವರನ್ನು ಹೊರ ಹಾಕಿದರು. ಇದು ಇನ್ನೊಂದು ಘರ್ಷಣೆಗೆ ಕಾರಣವಾಯಿತು. ಮಾಧ್ಯಮದವರನ್ನು ಕೂಡ ಪೊಲೀಸರು ತಳ್ಳುವ ಮೂಲಕ ತಮ್ಮ ವಿಕೃತಿಯನ್ನು ಮೆರೆದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಸುಬ್ರಹ್ಮಣ್ಯ ಹೆಗಡೆ, ರವಿ ಅಡಿ ಹಾಗೂ ಎರಡು ಕುಟುಂಬಸ್ಥರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top