ಹೊನ್ನಾವರ; ಯುವಕರು ಕ್ರೀಡೆಯ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿಯೂ ಒಗ್ಗೂಡಿ ಉತ್ತಮ ಕಾರ್ಯ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಉದ್ದಿಮೆದಾರರಾದ ಮಂಜುನಾಥ ನಾಯ್ಕ ಅಂಕೋಲಾ ಯುವ ಸಮುದಾಯಕ್ಕೆ ಕರೆ ನೀಡಿದರು.
ತಾಲೂಕಿನ ಸಾಲ್ಕೋಡ್ ಪ್ರಾಥಮಿಕ ಶಾಲಾ ಆವರಣದಲ್ಲಿ ಗೆಳೆಯರ ಬಳಗ ಸಾಲ್ಕೋಡ್ ಇವರು ಆಯೋಜಿಸಿದ ಜಿಲ್ಲಾಮಟ್ಟದ ಕೌಂಟಿ ಕ್ರಿಕೆಟ್ ಪಂದ್ಯಾವಳಿಯ ಕ್ರೀಡಾಂಗಣ ಉದ್ಘಾಟಿಸಿದ ಮಾತನಾಡಿದ ಅವರು, ಯುವಕರು ದೇಶದ ಶಕ್ತಿಯಾಗಿದ್ದು, ಸಮಾಜ ಸಂಘಟಿತವಾಗಲು ಇವರ ಪಾತ್ರ ಬಹುಮುಖ್ಯವಾಗಿದೆ. ಕ್ರೀಡೆಯು ದೈಹಿಕವಾಗಿ ಸದೃಡ ಮಾಡುವ ಜೊತೆಗೆ ಮನೊರಂಜನೆ ನೀಡುವುದರಿಂದ ಪ್ರತಿಯೋರ್ವರ ಮೇಲೂ ಒಳ್ಳೆಯ ಪರಿಣಾಮ ಬೀರಲಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಲ್ಕೋಡ್ ಗ್ರಾ.ಪಂ. ಅಧ್ಯಕ್ಷೆ ಯಮುನಾ ನಾಯ್ಕ ಕಾರ್ಯಕ್ರಮಕ್ಕೆ ಶುಭಕೋರಿದರು.
ಗ್ರಾ.ಪಂ. ಉಪಾಧ್ಯಕ್ಷ ಬಾಲಚಂದ್ರ ನಾಯ್ಕ, ಸದಸ್ಯ ಸಚೀನ ನಾಯ್ಕ ಉದ್ದಿಮೆದಾರರಾದ ಸಂದೇಶ ಶೆಟ್ಟಿ,ಎಸ್.ಡಿ.ಎಂ.ಸಿ. ಅಧ್ಯಕ್ಷ ಗಜಾನನ ನಾಯ್ಕ, ಕಾರ್ಯಕ್ರಮದ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೂರಜ್ ನಾಯ್ಕ ಸೋನಿ ಮಾತನಾಡಿ ಕಳೆದ ೨೦ ವರ್ಷದಿಂದ ಸಾಮಾಜಿಕ ಕಾರ್ಯ ಮಾಡುತ್ತಾ ಬಂದಿದ್ದರೂ ಒಂದೇ ಒಂದು ದಿನ ಕ್ಷೇತ್ರದ ಎಂ.ಎಲ್.ಎ ಮಾಡಿಲ್ಲ. ಆದರೆ ಜನತೆಯು ಪ್ರೀತಿ ತೋರಿಸುತ್ತಾರೆ. ಅಧಿಕಾರ ಇಲ್ಲದಾಗಲೂ ಹಲವು ಸಮಾಜಮುಖಿ ಕಾರ್ಯ ಮಾಡಿದ್ದು, ಅಧಿಕಾರಕ್ಕೆ ಬಂದರೆ ಹಲವು ಕಾರ್ಯ ಮಾಡುವ ಭರವಸೆಯನ್ನು ಜನತೆ ಇಟ್ಟಿದ್ದಾರೆ. ಕ್ರೀಡಾಕೂಟ ಯಶ್ವಸಿಯಾಗಲಿ ಎಂದು ಶುಭಕೋರಿದರು.
ಕ್ರೀಡಾಕೂಟದ ಮಧ್ಯೆ ಶಾಸಕ ದಿನಕರ ಶೆಟ್ಟಿ, ಕೆ.ಡಿ.ಸಿಸಿ ಬ್ಯಾಂಕ್ ನಿರ್ದೆಶಕರಾದ ಶಿವಾನಂದ ಹೆಗಡೆ ಕಡತೋಕಾ ಆಗಮಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ಗ್ರಾ.ಪಂ.ಸದಸ್ಯ ಪಾರ್ತೂನ್ ಅಂತೋನ್ ಮೆಂಡಿಸ್, ಗೆಳೆಯರ ಬಳಗ ಸಂಘಟನೆಯ ಅಧ್ಯಕ್ಷ ವಸಂತ ನಾಯ್ಕ, ಕ್ರೀಡಾಪಟುಗಳು ಹಾಜರಿದ್ದರು.