Slide
Slide
Slide
previous arrow
next arrow

ಕಾಸರಕೋಡ ಟೊಂಕಾದಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ಬಂದರು ಸರ್ವೆ

300x250 AD

ಪ್ರತಿಭಟನೆಗೆ ಮುಂದಾದ ಮೀನುಗಾರರು ಪೋಲೀಸ್ ವಶಕ್ಕೆ; ಹಲವರಿಗೆ ಗಾಯ

ಹೊನ್ನಾವರ: ತಾಲೂಕಿನ ಕಾಸರಕೋಡ ವಾಣಿಜ್ಯ ಬಂದರು ಪ್ರದೇಶ ವ್ಯಾಪ್ತಿಯಲ್ಲಿ ಬುಧವಾರ ಹೈ ಟೈಡ್ ಲೈನ್ ಸರ್ವೆಗೆ ಮುಂದಾದ ಹಿನ್ನೆಲೆಯಲ್ಲಿ ಮೀನುಗಾರರು ಮತ್ತು ಪೋಲೀಸರ ನಡುವೆ ತಳ್ಳಾಟ ನೂಕಾಟಗಳು ನಡೆದು, ಘಟನೆಯಲ್ಲಿ 20ಕ್ಕೂ ಹೆಚ್ಚು ಮೀನುಗಾರರಿಗೆ ಮತ್ತು 6ಕ್ಕೂ ಹೆಚ್ಚು ಪೋಲಿಸರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿತ್ತು. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು 20 ಮೀನುಗಾರರ ವಿರುದ್ದ ಪ್ರಕರಣ ದಾಖಲಾಗಿದ್ದು, 18 ಜನರನ್ನು ಬಂಧಿಸಲಾಗಿತ್ತು. ಗುರುವಾರವು ಕೂಡ ಪೋಲಿಸ್ ಬಿಗಿ ಬಂದೋಬಸ್ತ ಮೂಲಕ ಸರ್ವೆಕಾರ್ಯ ನಡೆದಿದೆ.

ಕಾಸರಕೋಡ ಟೊಂಕಾಗೆ ಪ್ರೈವೇಟ್ ಬಂದರಿಗಾಗಿ ಭೂ ಪ್ರದೇಶವನ್ನು ಗುರುತಿಸಲು ಕಂದಾಯ ಇಲಾಖೆಯ ಅಧಿಕಾರಿಗಳು ಬೆಳಿಗ್ಗೆ 11 ಗಂಟೆಯಿಂದ ಸರ್ವೇ ಕಾರ್ಯ ಪ್ರಾರಂಭವಾಗಿತ್ತು. ತಾಲೂಕಿನ ಕಾಸರಕೋಡ್ ವಾಣಿಜ್ಯ ಬಂದರು ಪ್ರದೇಶ ವ್ಯಾಪ್ತಿಯಲ್ಲಿ ಬುಧವಾರ ಹೈ ಟೈಡ್ ಲೈನ್ ಸರ್ವೆಗೆ ಮುಂದಾದ ಹಿನ್ನೆಲೆ ಮೀನುಗಾರರು ಪ್ರತಿಭಟನೆ ನಡೆಸಿದ್ದರು. ಸಹಾಯಕ ಆಯುಕ್ತೆ ಡಾ.ನಯನಾ ಅವರ ನೇತೃತ್ವದಲ್ಲಿ ಹೈಟೈಡ್ ಲೈನ್ ಸರ್ವೆಗೆ ಸಜ್ಜಾಗಿದ್ದರು. ವಿಷಯ ತಿಳಿದು ನೂರಾರು ಸಂಖ್ಯೆಯಲ್ಲಿ ಮೀನುಗಾರರು ಜಮಾವಣೆಗೊಂಡಿದ್ದರು. ಪರಿಸ್ಥಿತಿ ಉದ್ವಿಗ್ನವಾಗಿದ್ದರಿಂದ, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸಿಪಿಐ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಪೊಲೀಸ್ ನಿಯೋಜನೆಯಾಗಿತ್ತು. ಇದೇ ವೇಳೆ ಸಹಾಯಕ ಆಯುಕ್ತೆ ಡಾ.ನಯನಾ ಸರ್ವೆ ಕಾರ್ಯ ನಡೆಸಲು ಅನುವು ಮಾಡಿಕೊಡುವಂತೆ ಮೀನುಗಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಮೀನುಗಾರರರು ಅಧಿಕಾರಿಗಳ ಮಾತಿಗೆ ಜಗ್ಗದೆ ಇದ್ದಾಗ ವಾದ ವಿವಾದ ನಡೆದಿತ್ತು.

300x250 AD

ಈ ಜಾಗದಲ್ಲಿ ಹೈ ಟೈಡ್ ಲೈನ್ ಸರ್ವೆ ಮಾಡುತ್ತೇವೆ. ನಿಮಗೆ ಯಾವುದೇ ರೀತಿ ಮೋಸವಾಗುವುದಿಲ್ಲ. ಸರ್ಕಾರದ ಆದೇಶದ ಪ್ರಕಾರವಾಗಿ ನಾವು ಇಲ್ಲಿ ಸರ್ವೆಗೆ ಬಂದಿದ್ದೇವೆ. ಅವಕಾಶ ಮಾಡಿಕೊಡಿ ಎಂದು ಎಸಿ ಡಾ.ನಯನ ಮೀನುಗಾರರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಆದರೆ ಮೀನುಗಾರರು ಸರ್ವೇ ಮಾಡಲು ಸೂಕ್ತ ದಾಖಲಾತಿ, ಆದೇಶ ಪ್ರತಿಯೊಂದಿಗೆ ಬನ್ನಿ ಎಂದು ಪಟ್ಟು ಹಿಡಿದಿದ್ದರು. ಕೆಲಕಾಲ ಮೀನುಗಾರರು ಎಸಿಯವರ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಕೊನೆಗೂ ತಾವು ಸರ್ವೇ ಕಾರ್ಯ ನಡೆಸಿಯೇ ನಡೆಸುತ್ತೇವೆ ಎಂದು ಎಸಿಯವರು ಹೇಳಿದ್ದರು. ಮೀನುಗಾರರು ಜಾಗದಿಂದ ತೆರಳದೇ ಸ್ಥಳದಲ್ಲೇ ಮೊಕ್ಕಾಂ ಹೂಡಿ ಪ್ರತಿಭಟನೆ ಮುಂದುವರೆಸಿದ್ದರು. ಸಹಾಯಕ ಆಯುಕ್ತೆ ಡಾ ನಯನಾ ಅವರು ಪ್ರತಿಭಟನಾ ಸ್ಥಳದಿಂದ ನಿರ್ಗಮಿಸಿದ್ದರು. ನಂತರ ಪೋಲಿಸ್ ಬಿಗಿ ಬಂದೋಬಸ್ತ್ ಮೂಲಕ ಸರ್ವೆ ಕಾರ್ಯ ನಡೆಯುತ್ತಿದೆ.

Share This
300x250 AD
300x250 AD
300x250 AD
Back to top