ಹೊನ್ನಾವರ: ತಾಲೂಕಿನ ಮೂಡಗಣಪತಿ ಸಭಾಂಗಣದಲ್ಲಿ ಡಿ. 27, 28ರಂದು ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಹೇಳಿದರು.
ಅವರು ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 27ರಂದು ಬೆಳಗ್ಗೆ 8.30ಕ್ಕೆ ಹೊನ್ನಾವರ ತಹಶೀಲ್ದಾರ್ ರವಿರಾಜ ದೀಕ್ಷಿತ ರಾಷ್ಟ್ರ ಮತ್ತು ತಾಲ್ಲೂಕಾ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಸುರೇಶ ನಾಯ್ಕ ನಾಡ ಧ್ವಜಾರೋಹಣ ನೆರವೇರಿಸುವರು. 9 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ ಉದ್ಘಾಟಿಸುವರು. 10.30ಕ್ಕೆ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಸಮ್ಮೇಳನ ಉದ್ಘಾಟಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಆಶಯ ನುಡಿಯನ್ನಾಡುವರು. ಪುಸ್ತಕಗಳನ್ನು ಸಚಿವ ಮಂಕಾಳ ವೈದ್ಯ ಬಿಡುಗಡೆ ಮಾಡಿದರೆ, ಕಸಾಪ ರಾಜ್ಯಾಧ್ಯಕ್ಷ ನಾಡೋಜ. ಡಾ. ಮಹೇಶ ಜೋಶಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಶಾಸಕ ದಿನಕರ ಶೆಟ್ಟಿ ದ್ವಾರಗಳನ್ನು, ಶಾಸಕ ಸತೀಶ ಸೈಲ್ ಮುಸ್ತಕ ಮಳಿಗೆ ಉದ್ಘಾಟಿಸುವರು. ಸಮ್ಮೇಳನಾಧ್ಯಕ್ಷ ಡಾ.ಶ್ರೀಪಾದ ಶೆಟ್ಟಿ ಅವರ ಮಾತು, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಶಾಂತಾರಾಮ ನಾಯಕ ಅವರಿಂದ ಧ್ವಜ ಹಸ್ತಾಂತರ ನಡೆಯಲಿದೆ ಎಂದರು.
ಉದ್ಘಾಟನೆಯಲ್ಲಿ ಸಂಸದ ಅನಂತಕುಮಾರ ಹೆಗಡೆ, ಶಾಸಕರುಗಳಾದ ಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ, ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ವಿ.ಸಂಕನೂರ, ಗಣಪತಿ ಉಳ್ವೇಕರ, ಶಾಂತಾರಾಮ ಸಿದ್ದಿ, ಸಾಹಿತಿಗಳಾದ ಡಾ.ಎನ್.ಆರ್.ನಾಯಕ, ಡಾ. ಸೈಯದ್ ಝಮೀರುಲ್ಲಾ ಷರೀಫ್, ರೋಹಿದಾಸ ನಾಯಕ ಮೊದಲಾದವರು ಉಪಸ್ಥಿತರಿರುವರು. ಮಧ್ಯಾಹ್ನ 2.30ಕ್ಕೆ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿ, ವಿಕಾಸ, ರಾಜನೀತಿ ಗೋಷ್ಠಿಯಿದ್ದು, ಹೋರಾಟಗಾರ ರಾಜೀವ ಗಾಂವಕರ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಪತ್ರಕರ್ತ ಟಿ.ಬಿ.ಹರಿಕಾಂತ ಆಶಯ ನುಡಿಯಾಡುವರು. ಅಭಿವೃದ್ಧಿ ಕುರಿತಾಗಿ ನಾಗಪತಿ ಹೆಗಡೆ ಹುಳಗೋಳ, ವಿಕಾಸದ ಕುರಿತಾಗಿ ಗಂಗಾಧರ ಕೊಳಗಿ, ರಾಜನೀತಿ ಕುರಿತಾಗಿ ಯಮುನಾ ಗಾಂವಕರ ಮಾತನಾಡುವರು. ಸಂಜೆ 4 ಗಂಟೆಗೆ ಕವಿ-ಕಾವ್ಯ ಸಮಯ ಗೋಷ್ಠಿಯಿದ್ದು, ಸಿಂಧುಚAದ್ರ ಹೆಗಡೆ ಅಧ್ಯಕ್ಷತೆ ವಹಿಸಲಿದ್ದು, ರಾಜು ಹೆಗಡೆ ಆಶಯ ನುಡಿಯನ್ನಾಡುವರು. ಜಿಲ್ಲೆಯ ವಿವಿಧ ಕವಿಗಳು ಪಾಲ್ಗೊಳ್ಳುವರು. 5.30ಕ್ಕೆ ಶರಾವತಿ ಸುತ್ತ ವಿಶೇಷ ಉಪನ್ಯಾಸವಿದ್ದು, ಹಿರಿಯ ಪತ್ರಕರ್ತ ಜಿ.ಯು.ಭಟ್ ಅಧ್ಯಕ್ಷತೆ ವಹಿಸುವರು. ಹೊನ್ನಾವರದ ಇತಿಹಾಸದಲ್ಲಿ ರಾಣಿ ಚೆನ್ನಾಭೈರಾದೇವಿ ಕುರಿತು ಡಾ. ಗಜಾನನ ನಾಯ್ಕ, ಹೊನ್ನಾವರದ ಪರಿಸರ, ಸಂಸ್ಕೃತಿ ಕುರಿತಾಗಿ ಡಾ. ಎಸ್.ಡಿ.ಹೆಗಡೆ ಮಾತನಾಡುವರು. 6 ಗಂಟೆಯಿ0ದ ಶಿಕ್ಷಕ ಕಲಾವಿದರಿಂದ ಯಕ್ಷಗಾನ, ಡಾ.ಅಪ್ಪೆಗೆರೆ ತಿಮ್ಮರಾಜು ಅವರಿಂದ ಜನಪದ ಗೀತ ಗಾಯನ, ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವಿದೆ ಎಂದರು.
ಡಿ. 28ರಂದು 9.30ಕ್ಕೆ ಚುಟುಕ-ಮುಕ್ತಕ-ಗಮಕ ಗೋಷ್ಠಿ ನಡೆಯಲಿದ್ದು, ಸಾಹಿತಿ ವನರಾಗ ಶರ್ಮ ಅಧ್ಯಕ್ಷತೆ ವಹಿಸುವರು. ರವೀಂದ್ರ ಭಟ್ ಸೂರಿ ಆಶಯನುಡಿಯಾಡುವರು. ಜಿಲ್ಲೆಯ ವಿವಿಧ ಸಾಹಿತಿಗಳು ಪಾಲ್ಗೊಳ್ಳುವರು. ಮುಕ್ತಾ ಶಂಕರ ಯಲ್ಲಾಪುರ ಅವರಿಂದ ಗಮಕ ಗಾಯನವಿದ್ದು, ಜಿ.ಎಸ್.ಹೆಗಡೆ ಅವರಿಂದ ವ್ಯಾಖ್ಯಾನವಿದೆ. 11 ಗಂಟೆಗೆ ಶತಮಾನೋತ್ಸವದ ಸ್ಮರಣೆಯಲ್ಲಿ ಜಿಲ್ಲೆಯ ಮಹನೀಯರು ಕಾರ್ಯಕ್ರಮವಿದ್ದು, ಪತ್ರಕರ್ತ, ಸಾಹಿತಿ ಅಶೋಕ ಹಾಸ್ಯಗಾರ ಅಧ್ಯಕ್ಷತೆ ವಹಿಸುವರು. ಸುಧಾ ಭಂಡಾರಿ ಆಶಯನುಡಿಯಾಡುವರು. ಸಹಕಾರಿ ಧುರೀಣ ಶ್ರೀಪಾದ ಹೆಗಡೆ ಕಡವೆ, ಸಹಕಾರ ಕಾಂತ್ರಿ ಕುರಿತು ಸುಬ್ರಾಯ ಮತ್ತಿಹಳ್ಳಿ, ಸಾಹಿತಿ ಗಂಗಾಧರ ಚಿತ್ತಾಲ, ಬದುಕು-ಬರಹ ಕುರಿತು ಮಹೇಶ ನಾಯಕ, ಸಾಹಿತಿ ಸು.ರಂ.ಯಕ್ಕು0ಡಿ: ಸಾಹಿತ್ಯಿಕ ಸಾಧನೆ ಕುರಿತು ಹೊನ್ನಪ್ಪಯ್ಯ ಗುನಗ, ಸಾಹಿತಿ ಜಿ.ವಿ.ಭಟ್: ಕಾವ್ಯಲೋಕ ಕುರಿತು ನಾಗರಾಜ ಹೆಗಡೆ ಮಾತಾಡುವರು. ಮಧ್ಯಾಹ್ನ 2 ಗಂಟೆಗೆ ಕನ್ನಡ-ಕನ್ನಡಿಗ-ಕರ್ನಾಟಕ ಚರ್ಚಾಂಗಣ ಕಾರ್ಯಕ್ರಮವಿದ್ದು, ವಿಮರ್ಶಕ ಡಾ.ಎಂ.ಜಿ.ಹೆಗಡೆ ಅಧ್ಯಕ್ಷತೆ ವಹಿಸುವರು. ನ್ಯಾಯವಾದಿ ನಾಗರಾಜ ನಾಯಕ ಆಶಾಯನುಡಿಯಾಡುವರು. ಮಧ್ಯಾಹ್ನ 3.30ಕ್ಕೆ ಸಮ್ಮೇಳನಾಧ್ಯಕ್ಷರ ಸಾಹಿತ್ಯಾವಲೋಕನ- ಸಂವಾಸವಿದ್ದು, ಸಮ್ಮೇಳನಾಧ್ಯಕ್ಷರ ಸಾಹಿತ್ಯದ ಕುರಿತು ಪ್ರೊ. ಆರ್.ಎಸ್.ನಾಯಕ, ಬದುಕಿನ ಕುರಿತು ಪ್ರಸಾಂತ ಹೆಗಡೆ ಮಾತನಾಡುವರು. ಬಳಿಕ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಪುರಸ್ಕರಿಸಲಾಗುತ್ತದೆ ಎಂದು ತಿಳಿಸಿದರು.
ಸಂಜೆ 5 ಗಂಟೆಗೆ ಸಮಾರೋಪ ನಡೆಯಲಿದ್ದು, ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಅಧ್ಯಕ್ಷತೆ ವಹಿಸುವರು. ಡಾ.ಜಗದೀಶ ಕೊಪ್ಪ ಸಮಾರೋಪ ನುಡಿಯನ್ನಾಡುವರು. ಸಮ್ಮೇಳನಾಧ್ಯಕ್ಷ ಡಾ. ಶ್ರೀಪಾದ ಶೆಟ್ಟಿ, ಶಾಸಕ ಆರ್.ವಿ.ದೇಶಪಾಂಡೆ, ಆರ್.ಎನ್.ನಾಯ್ಕ, ಸುಮುಖಾನಂದ ಜಲವಳ್ಳಿ, ಶಿವಾನಂದ ಹೆಗಡೆ ಕಡತೋಕ ಮೊದಲಾದವರು ಉಪಸ್ಥಿತರಿರುವರು. 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ವಿಶ್ವೇಶ್ವರ ಭಟ್ ನೇತೃತ್ವದಲ್ಲಿ ಸುಗಮ ಸಂಗೀತ, ಗುರುಬಳಕ ಸಂಗೀತ ಸಿರಿ ಅಧ್ಯಾಪಕರಿಂದ ಕನ್ನಡ ಗೀತ ಗಾಯನ, ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮವಿದೆ ಎಂದು ಹೇಳಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಜಾಜ್ ಫರ್ನಾಂಡಿಸ್, ಹೊನ್ನಾವರ ತಾಲೂಕಾ ಅಧ್ಯಕ್ಷ ಎಸ್.ಎಚ್.ಗೌಡ, ಡಾ.ಮಹೇಶ ಗೋಳಿಕಟ್ಟೆ, ಖೈರುನ್ನಿಸಾ ಶೇಖ್, ಬಾಬು ಶೇಖ್, ಟಿ.ಬಿ.ಹರಿಕಾಂತ ಪತ್ರಕಾಗೋಷ್ಟಿಯಲ್ಲಿದ್ದರು.