ಜೋಯಿಡಾ : ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಉತ್ತರಕನ್ನಡ, ತಾಲೂಕಾಡಳಿತ ಜೋಯಿಡಾ ಇದರ ಸಹಯೋಗದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ- 2024ರ ದೃಷ್ಟಿಯಿಂದ ಮತದಾನ ಪ್ರಕ್ರಿಯೆ ಹೇಗೆ ನಡೆಯುತ್ತದೆ, ವಿವಿ ಪ್ಯಾಟ್ ಸತ್ಯದ ಕೈಗನ್ನಡಿ, ಚಲಾಯಿಸಿದ ಮತಕ್ಕೆ ಮರು ಖಾತ್ರಿ, 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನ ಮಾಡಬೇಕು ಎಂಬ ಮತದಾನದ ಕುರಿತು ಮಾಹಿತಿಯನ್ನು ನಂದಿಗದ್ದೆ ಮತದಾನ ಕೇಂದ್ರದಲ್ಲಿ ಚುನಾವಣಾ ಪ್ರಾತ್ಯಕ್ಷಿಕೆ ಮೂಲಕ ನೀಡಲಾಯಿತು.
ಈ ಸಂದರ್ಭದಲ್ಲಿ ಜೋಯಿಡಾ ಲೋಕೋಪಯೋಗಿ ಇಲಾಖೆಯ ಜೆಇಇ ಅಮಿತ ನಾಯಕ್, ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್, ಗ್ರಾಮ ಪಂಚಾಯತ ಕಾರ್ಯದರ್ಶಿ ಗಜಾನನ ಸಾವರ್ಕರ್, ಸಿಬ್ಬಂದಿ ವರ್ಗ, ಮುಖ್ಯ ಶಿಕ್ಷಕರಾದ ಜನಾರ್ಧನ ಹೆಗಡೆ, ಮತಗಟ್ಟೆ ಅಧಿಕಾರಿ ಭುವನೇಶ್ವರ ಮೇಸ್ತ, ಶಿಕ್ಷಕರಾದ ಹನುಮಂತ ಕೊರಗರ, ಶೋಭಾ, ಹೇಮಾ ಸೇರಿದಂತೆ ಮತದಾರರು ಚುನಾವಣಾ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು.