ಹೊನ್ನಾವರ : 25 ವರ್ಷದ ನಂತರ ಹೊನ್ನಾವರದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಕಾಟಾಚಾರಕ್ಕೆ ಕಾರ್ಯಕ್ರಮ ಮಾಡಬೇಡಿ ಯಾವ ಕೊರತೆಯೂ ಆಗದಂತೆ ಅಚ್ಚುಕಟ್ಟಾಗಿ ಮಾಡಿ, ಆಗಮಿಸಿದ ಸಾಹಿತಿಗಳಿಗೆ ಗೌರವಕೋಡಿ, ಇದಕ್ಕೆ ಪೂರಕವಾದ ಸಹಾಯ ಸಹಕಾರ ಮಾಡಲು ಸಿದ್ದನಿದ್ದೆನೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ಅವರು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಡಿಸೆಂಬರ 27 ಮತ್ತು 28ರಂದು ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ 23 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ನಮ್ಮ ಸಹಕಾರ ಯಾವತ್ತೂ ಇದೆ. ಕಾರ್ಯಕ್ರಮ ಚೆನ್ನಾಗಿ ಆಗಲಿ, ಬಂದಂತಹ ಸಾಹಿತಿಗಗಳಿಗೆ, ಉಳಿದವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಿ, ಕಾರ್ಯಕ್ರಮದ ಎರಡು ದಿನ ನಿಮ್ಮೊಟ್ಟಿಗೆ ಇರುವ ಆಶೆ ನನಗೂ ಇದೆ. ಸಮ್ಮೇಳನಕ್ಕೆ ಬಂದವರು ಉತ್ತಮ ಆಯೋಜನೆ ಮಾಡಿದ್ದಾರೆ ಅನ್ನುವ ಹಾಗೆ, ಇಲ್ಲಿಯ ಕಾರ್ಯಕ್ರಮ ನೆನಪಲ್ಲಿ ಇರುವಂತೆ ಆಯೋಜನೆ ಮಾಡಿ ಎಂದು ಹೇಳಿದರು.
ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್.ವಾಸರೆ ಮಾತನಾಡಿ 25 ವರ್ಷಗಳ ನಂತರ ಹೊನ್ನಾವರದಲ್ಲಿ ಹಿರಿಯ ಸಾಹಿತಿ ಶ್ರೀಪಾದ ಶೆಟ್ಟಿಯವರ ಸಮ್ಮೇಳನಾದ್ಯಕ್ಷತೆಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ, ಹೊನ್ನಾವರದಲ್ಲಿ ಸಂಸ್ಕೃತಿ ಜನಪದ ಸಾಹಿತ್ಯ ಎಲ್ಲವು ಇದೆ ಅದರಿಂದ ನಮ್ಮ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯುತದೆ ಎನ್ನುವ ವಿಶ್ವಾಸವಿದೆ, ಕನ್ನಡ ಸಾಹಿತ್ಯ ಪರಿಷತ್ತು ವಾರ್ಷಿಕವಾಗಿ ಸಮ್ಮೇಳನ ನಡೆಸಿಕೊಂಡು ಬಂದಿರುವ ಪರಂಪರೆ, ಈ ವರ್ಷ ಸರ್ಕಾರದ ಕೆಲವೊಂದು ಕಾರಣಗಳಿಂದಾಗಿ ಅನುದಾನದ ಸಮಸ್ಯೆ ಇರುವುದರಿಂದ ತಾಲೂಕಾ ಸಮ್ಮೇಳನಕ್ಕೆ ಹೆಚ್ಚಿಗೆ ಮಹತ್ವಕೋಡದೆ ಅನುದಾನದ ಬರವಸೆ ಇಲ್ಲವಾದರು ಜಿಲ್ಲಾ ಸಮ್ಮೇಳನವನ್ನು ಹೊನ್ನಾವರದಲ್ಲಿ ಇಟ್ಟುಕೋಂಡಿದ್ದೆವೆ ಎಂದರು.
ಹಿರಿಯ ಪತ್ರಕರ್ತ ಜಿ ಯು ಭಟ್ಟ ಮಾತನಾಡಿ ಪಂಪ ರನ್ನರ ಕಾಲದಿಂದ ಹೊನ್ನಾವರದಲ್ಲಿ ಸಾಹಿತ್ಯದ ಕಂಪಿದೆ. ಈ ಕಾರ್ಯಕ್ರಮಕ್ಕೆ ಮಂಕಾಳ ವೈದ್ಯರು ಗೌರವ ಅಧ್ಯಕ್ಷರಗಿದ್ದಾರೆ. ಹಾಗಾಗಿ ಕಾರ್ಯಕ್ರಮ ಯಶಸ್ಸು ಆಗುತ್ತದೆ. ಮಂಕಾಳ ವೈದ್ಯರಿಗೆ ಗಳಿಸಿದ್ದನ್ನು ಹಂಚಿ ಕೊಳ್ಳುವ ಗುಣವಿದೆ. ಈ ಕಾರ್ಯಕ್ರಮ ಸಚಿವರಿಗೂ ಯಶಸ್ಸು ಸಿಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ರವಿರಾಜ ದಿಕ್ಷಿತ, ತಾಲೂಕಾ ಪಂಚಾಯತ ಕಾರ್ಯನಿರ್ವಣಾಧಿಕಾರಿ ಸುರೇಶ ನಾಯ್ಕ, ಹಿರಿಯ ಪರ್ತ್ರಕರ್ತ ಜಿ. ಯು. ಭಟ್ಟ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ, ತಾಲೂಕಾಧ್ಯಕ್ಷ ಎಸ್. ಎಚ್. ಗೌಡ, ಎಸ್. ಎಮ್. ಹೆಗಡೆ, ಆರ್ ಟಿ ನಾಯ್ಕ, ಎಲ್. ಎಮ್. ಹೆಗಡೆ, ಹಿರಿ-ಕಿರಿಯ ಸಾಹಿತಿಗಳು, ಕಸಾಪ ಸದಸ್ಯರು, ಜನಪ್ರತಿನಿದಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮುಂತಾದವರು ಇದ್ದರು. ಕಾರ್ಯದರ್ಶಿ ಪಿ ಆರ್ ನಾಯ್ಕ ಸ್ವಾಗತಿಸಿದರು.