ಯಲ್ಲಾಪುರ: ಇಲ್ಲಿನ ತಹಸೀಲ್ದಾರ ಕಚೇರಿಯಲ್ಲಿ ನೂತನ “ಕರ್ನಾಟಕ ಒನ್ ಆನ್ ಲೈನ್ ಗ್ರಾಹಕ ಸೇವಾ ಕೇಂದ್ರ”ವನ್ನು ಶಾಸಕ ಶಿವರಾಮ ಹೆಬ್ಬಾರ್ ಸೋಮವಾರ ಉದ್ಘಾಟಿಸಿ,ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಆದೇಶ ಪತ್ರವನ್ನು ವಿತರಿಸಿದರು. ತಹಸೀಲ್ದಾರ ಗುರುರಾಜ.ಎಂ, ಜಿ. ಪಂ ಮಾಜಿ ಸದಸ್ಯ ವಿಜಯ ಮಿರಾಶಿ, ಪ.ಪಂ ಸದಸ್ಯ ಸತೀಶ ನಾಯ್ಕ ಇತರರಿದ್ದರು.