ಶಿರಸಿ: ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ತೀರಸ್ಕರಿಸಲು ಆಗ್ರಹಿಸಿ ಜಿಲ್ಲಾ ಮಟ್ಟದ ಕಸ್ತೂರಿ ರಂಗನ್ ವಿರೋಧ ಬೃಹತ್ ರ್ಯಾಲಿ ಡಿಸೆಂಬರ್ 2 ರಂದು ಶಿರಸಿಯಲ್ಲಿ ಸಂಘಟಿಸಲು ತೀರ್ಮಾನಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ಇಂದು ಮಂಗಳವಾರ ಶಿರಸಿ ತಾಲೂಕಿನ, ಮಾರಿಕಾಂಬ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಕಸ್ತೂರಿ ರಂಗನ್ ವರದಿ ಮಾಹಿತಿಯ ಬೃಹತ್ ಕಾರ್ಯಗಾರವನ್ನ ಉದ್ದೇಶಿಸಿ ಮಾತನಾಡುತ್ತಾ ಮೇಲಿನಂತೆ ಅವರು ಹೇಳಿದರು.
ಕಸ್ತೂರಿ ರಂಗನ್ ಜ್ಯಾರಿಯಿಂದ ಮಲೆನಾಡು ಮತ್ತು ಕರಾವಳಿ ಭಾಗದ ನೈಜ ಜನರ ಜೀವನಕ್ಕೆ ಸಮಸ್ಯೆಯಾಗುವುದಲ್ಲದೇ, ಮೂಲಭೂತ ಸೌಕರ್ಯದಿಂದ ವಂಚಿತರಾಗುವರು. ಉತ್ತರ ಕನ್ನಡ ಜಿಲ್ಲೆಯಿಂದ ಕಸ್ತೂರಿ ರಂಗನ್ ವರದಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುವ ಹಿನ್ನೆಲೆಯಲ್ಲಿ ಒಂದು ಲಕ್ಷ ಕುಟುಂಬಗಳಿಂದ ಕೇಂದ್ರ ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಜಿಲ್ಲೆಯ ಪ್ರತಿಯೊಂದು ಕುಟುಂಬದವರು ಆಕ್ಷೇಪಣೆ ಸಲ್ಲಿಸಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ ಸ್ವಾಗತಿಸಿದರು, ಸಭೆಯನ್ನು ಉದ್ದೇಶಿಸಿ ಸರೋಜಿನಿ ಭಟ್ಟ, ಎಮ್ ಕೆ ನಾಯ್ಕ ಕಂಡ್ರಾಜಿ, ಚಂದ್ರು ಶಾನಭಾಗ ಬಂಡಲ, ರಾಜು ನರೇಬೈಲ್ ಮುಂತಾದವರು ಮಾತನಾಡಿದರು. ವೇದಿಕೆಯ ಮೇಲೆ ನೆಹರೂ ನಾಯ್ಕ ಬಿಳೂರು, ಪರಮೇಶ್ವರ ಮಡಿವಾಳ, ಶಿವಾನಂದ ಪೂಜಾರಿ, ರಾಮು ಗೌಡ, ಶಿವಾನಂದ ಪೂಜಾರಿ ಜಡ್ಡಿಗದ್ದೆ, ತಿಮ್ಮ ಗೌಡ, ಲಕ್ಷö್ಮಣ ಮರಾಠಿ, ಸೀತಾರಾಮ ನಾಯ್ಕ, ರಾಮಚಂದ್ರ ದೇವಾಡಿಗ, ಶಂಭು ಮರಾಠಿ, ಈರಪ್ಪ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಜನರ ಬದುಕನ್ನ ಬಲಿ ಕೊಡದಿರಿ:
ನೈಸರ್ಗಿಕ, ಪರಿಸರ ಅರಣ್ಯವಾಸಿಗಳು ನೈಜ್ಯತೆಯ ಬದುಕಿನ ಜೀವನವನ್ನ ನಡೆಸುತ್ತಿದ್ದು, ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯಿಂದ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜನರ ಬದುಕನ್ನ ಬಲಿ ಕೊಡದಿರಿ ಎಂದು ಸಭೆಯನ್ನ ಉದ್ದೇಶಿಸಿದ ಪ್ರಮುಖರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.