ಹೊನ್ನಾವರ : ಹಲವಾರು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಕಬಡ್ಡಿ ಸಂಸ್ಥೆ ಹುಟ್ಟಿಕೊಂಡಿತ್ತು. ಎರಡು ಬಣಗಳು ನಮ್ಮದೇ ಅಧಿಕೃತ ಸಂಘಟನೆಯೆಂದು ಹೇಳಿಕೊಂಡಿತ್ತು. ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕರು ಉತ್ತರ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನೊಂದಾವಣಿ ರದ್ದು ಪಡಿಸಿ ಆದೇಶ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಮತ್ತು ಉತ್ತರ ಕನ್ನಡ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಎಂಬ ಸಂಘಟನೆಯು ಜಿಲ್ಲಾ ಸಹಕಾರಿ ಸಂಘಗಳ ಇಲಾಖೆಯಲ್ಲಿ ಅಧಿಕೃತ ನೋಂದಣಿ ಆಗಿತ್ತು. ಈ ಕುರಿತಂತೆ ಉತ್ತರ ಕನ್ನಡ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಮೊದಲು ನೊಂದಾವಣಿಗೊಂಡಿದ್ದು, ನಂತರ ನೊಂದಾವಣೆಗೊಂಡ ಉತ್ತರ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವಿರುದ್ದ, ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕರ ಬಳಿ ನಂತರ ನೋಂದಾವಣಿಗೊಂಡಿದ್ದ ಸಂಘದ ವಿರುದ್ದ ಮಾನ್ಯತೆ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು.
ಸಹಕಾರಿ ಸಂಘಗಳ ಕಲಂ 7 ಅಡಿಯಲ್ಲಿ ನಂತರ ನೊಂದಾವಣಿಗೊಂಡ ಸಂಘದ ಮಾನ್ಯತೆ ರದ್ದುಗೊಳಿಸಿಬೇಕಂದು, ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕರು ಉತ್ತರ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನೊಂದಾವಣಿಯನ್ನು ದಿನಾಂಕ 8-11-2023ರ ಆದೇಶದಲ್ಲಿ ರದ್ದು ಗೊಳಿಸಿದ್ದಾರೆ.
ಈ ಮೂಲಕ ಉತ್ತರ ಕನ್ನಡ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಲವಾರು ವರ್ಷಗಳಿಂದ ನೆಡಸಿದ ಕಾನೂನು ಹೋರಾಟಕ್ಕೆ ಈಗ ಜಯ ಸಿಕ್ಕಿದ್ದು, ಉತ್ತರ ಕನ್ನಡ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅದಿಕೃತ ಸಂಸ್ಥೆ ಎಂದು ಸಹಕಾರಿ ಸಂಘಗಳ ಉಪ ನಿಬಂಧಕರ ತಿರ್ಫು ಒತ್ತಿ ಹೇಳಿದೆ.
ಉತ್ತರ ಕನ್ನಡ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಪರವಾಗಿ ಅಧ್ಯಕ್ಷರಾಗಿರುವ ಮಂಜುನಾಥ ಎಲ್ ನಾಯ್ಕ, ಕಾರ್ಯದರ್ಶಿಯಾದ ಅನಿಲಕುಮಾರ, ಉಪಾಧ್ಯಕ್ಷರಾದ ವಾಸು ನಾಯ್ಕ ಭಟ್ಕಳ, ಸಂಘಟನಾ ಕಾರ್ಯದರ್ಶಿಯಾದ ಗಜು ಆರ್ ನಾಯ್ಕ ಅಂಕೋಲಾ ಇವರು ಸಂಘದ ಪರವಾಗಿ ಉಪ ನಿಬಂಧಕರ ಬಳಿ ಪ್ರತಿನಿದಿಸಿದ್ದರು.
ಉತ್ತರ ಕನ್ನಡ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಪರವಾಗಿ ಹೈ ಕೊರ್ಟ ನ್ಯಾಯವಾದಿ ನಾಗೇಂದ್ರ ನಾಯ್ಕ ಭಟ್ಕಳ ಹಾಗೂ ನ್ಯಾಯವಾದಿ ನವನೀತ ಬಿ ಹಿಂಗಾಣಿ ಮಂಗಳೂರು ಕಾನುನು ಸಲಹೆ ಸಹಕಾರ ನೀಡಿದ್ದರು.