ಕಾರವಾರ: ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ಧಾರವಾಡ ವಲಯ (ಧಾರವಾಡ, ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆ) ಕಚೇರಿ ವತಿಯಿಂದ ಬಂಜಾರ ಸಂಪ್ರದಾಯಿಕ ಕಸೂತಿ ಮತ್ತು ಪೂರಕ ಹೊಲಿಗೆ ತರಬೇತಿಯನ್ನು ಕೈಗೊಳ್ಳಲು ನುರಿತ ಅರ್ಹ ನೋಂದಾಯಿತಾ ಸಂಘ- ಸಂಸ್ಥೆಗಳು ಧಾರವಾಡ ವಲಯ ಭೇಟಿ ನೀಡಿ, ನಿಗಮ ನಿಗದಿಪಡಿಸಿರುವ ನಿಯಮಾನುಸಾರ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ನ.4ರ ಒಳಗಾಗಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಧಾರವಾಡ ಜಿಲ್ಲಾ ಬಂಜಾರ ಭವನ, ಇ. ಪಿ. ಎಫ್ ಕಚೇರಿ ಪಕ್ಕ, ನವನಗರ, ಹುಬ್ಬಳ್ಳಿ- 580025 ದೂ.ಸಂಖ್ಯೆ: Tel:+91083862221021, Tel:+919945211221 ಸಂಪರ್ಕಿಸುವಂತೆ ಕರ್ನಾಟಕ ತಂಡಾ ಅಭಿವೃದ್ಧಿ ನಿಗಮ ನಿಯಮಿತದ ಅಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.