Slide
Slide
Slide
previous arrow
next arrow

ಪುನೀತ್ ವ್ಯಕ್ತಿತ್ವ ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವಂತದ್ದು: ಶಾಸಕ ಸೈಲ್

300x250 AD

ಅಂಕೋಲಾ: ಕರ್ನಾಟಕ ರತ್ನ ಪುನೀತ ರಾಜಕುಮಾರ ಅವರ 2ನೇ ವರ್ಷದ ಪುಣ್ಯತಿಥಿಯ ನಿಮಿತ್ತ ಪುನೀತ ರಾಜಕುಮಾರ ಅಭಿಮಾನಿ ಬಳಗದ ವತಿಯಿಂದ ಪುನೀತ ಪುತ್ಥಳಿಗೆ ಶಾಸಕ ಸತೀಶ ಸೈಲ್ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು.

ನಂತರ ಸತೀಶ ಸೈಲ್ ಮಾತನಾಡಿ, ಇಂತಹ ಅಪರೂಪದ ವ್ಯಕ್ತಿಗಳು ಸಿಗುವುದು ಕಷ್ಟಕರವಾಗಿದ್ದು, ಇಂತಹ ಮೇರು ವ್ಯಕ್ತಿತ್ವದ ವ್ಯಕ್ತಿಯನ್ನು ಕಳೆದುಕೊಂಡು ಇಂದಿಗೂ ರಾಜ್ಯದಲ್ಲಿ ಒಂದುರೀತಿಯ ಶೋಕಾಚರಣೆಯಂತಿದೆ. ಇಂತಹ ಮೇರು ವ್ಯಕ್ತಿತ್ವದ ವ್ಯಕ್ತಿಗಳ ಅಗತ್ಯವಿದೆ ಎಂದರು.

ಪುನೀತ ರಾಜಕುಮಾರ ಅಭಿಮಾನಿ ಬಳಗದ ಗೌರವಾಧ್ಯಕ್ಷ ಶ್ರೀಪಾದ ನಾಯ್ಕ ಪುನೀತ ರಾಜಕುಮಾರ ಅವರು ನಿಧನರಾಗಿ 2 ವರ್ಷ ಗತಿಸಿದರೂ ಕೂಡ ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ. ಅವರು ಮಾಡಿದ ಸಾಮಾಜಿಕ ಕಾರ್ಯ ಅವರ ಸಾವಿನ ನಂತರವೂ ಮುಂದುವರೆದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಇಂತಹ ಒಬ್ಬ ವ್ಯಕ್ತಿಯನ್ನು ಇತ್ತೀಚಿನ ದಿನಗಳಲ್ಲಿ ಕಾಣುವುದು ಅಸಾಧ್ಯ ಎನ್ನುವ ಪರಿಸ್ಥಿತಿ ಇದೆ ಎಂದರು. ಪುನೀತ ರಾಜಕುಮಾರ ಅಭಿಮಾನಿ ಬಳಗದ ಅಧ್ಯಕ್ಷ ನಾಗರಾಜ ಮಂಜಗುಣಿ ಮಾತನಾಡಿ, ಅವರ ಜನ್ಮದಿನಾಚರಣೆಯನ್ನು ಸರಳವಾಗಿ ಆಚರಿಸುತ್ತಿದ್ದೇವೆ. ಆದರೆ ಅವರ ಜನ್ಮದಿನ ಮತ್ತು ಮಂಜಗುಣಿಯಲ್ಲಿ ಪ್ರತಿಷ್ಠಾಪಿಸಲಾದ ಅವರ ಪುತ್ಥಳಿ ಅನಾವರಣದ ಸಮಯದಲ್ಲಿ ದೊಡ್ಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

300x250 AD

ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಪ್ರಶಾಂತ ವಿ.ನಾಯ್ಕ, ಪ್ರಮುಖರಾದ ಪಾಂಡುರ0ಗ ಗೌಡ, ಮಹಾಬಲೇಶ್ವರ ನಾಯ್ಕ, ಅಶೋಕ ಡಿ.ನಾಯ್ಕ, ಅನಿಲ ಜಾನು ನಾಯ್ಕ, ಗಣೇಶ ವಿ.ನಾಯ್ಕ, ಅನಿಲ ಎಂ.ನಾಯ್ಕ, ಬೊಮ್ಮಯ್ಯ ಎನ್.ನಾಯ್ಕ, ಸಚಿನ ನಾಯ್ಕ, ಚಂದ್ರಕಾ0ತ ಹರಿಕಂತ್ರ, ಜಿ.ಆರ್.ತಾಂಡೇಲ್, ಪಾಂಡುರ0ಗ ಆಗೇರ, ರವಿ ಎನ್. ನಾಯ್ಕ ಸಂತೋಷ ವಿ.ನಾಯ್ಕ, ಬೊಮ್ಮಯ್ಯ ಎನ್. ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top