ಯಲ್ಲಾಪುರ: ಟೀಡ್ ಟ್ರಸ್ಟ್ ಹಾಗೂ ಚೇತನಾ ಮಹಿಳಾ ಸ್ವ- ಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಒಕ್ಕೂಟದ ಸದಸ್ಯರ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ ಪಟ್ಟಣದ ಗ್ರಾಮೀಣ ಸಂಪನ್ಮೂಲ ಕೇಂದ್ರ ಟೀಡ್ ಟ್ರಸ್ಟ್ನಲ್ಲಿ ನಡೆಯಿತು.
ಈ ತರಬೇತಿ ಕಾರ್ಯಾಗಾರದ ಪ್ರಾಸ್ತಾವಿಕವಾಗಿ ಟೀಡ್ ಟ್ರಸ್ಟ್ನ ವ್ಯವಸ್ಥಾಪಕಿ ಮೋಹಿನಿ ಪೂಜಾರಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಮೈಸೂರಿನ ಮಾನುಷಿ ಪೌಂಡೇಶನ್‌ನ ಪ್ರಮೀಳಾ ಆರ್, ಭಾಗವಹಿಸಿದ್ದರು. ತರಬೇತಿಯಲ್ಲಿ ಒಟ್ಟು 45 ಜನ ಸದಸ್ಯರು ಬಾಗವಹಿಸಿ ನಾಯಕತ್ವದ ಗುಣ ಲಕ್ಷಣಗಳು, ಲಿಂಗ, ಲಿಂಗತ್ವದ ಬಗ್ಗೆ, ಮಹಿಳೆಯರ ಸಬಲೀಕರಣ ಆಗುವುದು ಹೇಗೆ, ಮಹಿಳೆಯರ ಕಾನೂನು ಮತ್ತು ಹಕ್ಕುಗಳು ಬಗ್ಗೆ ವಿವಿಧ ಗುಂಪು ಚರ್ಚೆ, ಚಟುವಟಿಕೆಗಳ ಮೂಲಕ ಮಾಹಿತಿ ಪಡೆದುಕೊಂಡರು.
ರೇಖಾ ಘಾಡಿ ಪ್ರಾರ್ಥಿಸಿದರು. ಬಮ್ಮು ತೋರತ್ ಸ್ವಾಗತಿಸಿದರು. ಲಲಿತಾ ಮರಾಟಿ ವಂದಿಸಿದರು.