Slide
Slide
Slide
previous arrow
next arrow

ಪಟಾಕಿ ದಾಸ್ತಾನು ಕೇಂದ್ರಗಳಿಗೆ ಅಧಿಕಾರಿಗಳ ಭೇಟಿ

300x250 AD

ಅಂಕೋಲಾ: ರಾಜ್ಯದಲ್ಲಿ ಪಟಾಕಿ ಮಾರಾಟಕ್ಕೆ ಸಂಬ0ಧಿಸಿದ0ತೆ ರಾಜ್ಯ ಸರಕಾರ ಕಟ್ಟು ನಿಟ್ಟಿನ ಕ್ರಮಕ್ಕೆ ಆದೇಶ ನೀಡಿದ ಹಿನ್ನೇಲೆಯಲ್ಲಿ ತಾಲೂಕಾ ಆಡಳಿತ, ಪೊಲೀಸ್ ಇಲಾಖೆ, ಅಗ್ನಿಶಾಮಕದಳ, ಹೆಸ್ಕಾಂ ಅಧಿಕಾರಿಗಳು ಪಟಾಕಿ ದಾಸ್ತಾನು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಹಶೀಲ್ದಾರ ಅಶೋಕ ಭಟ್ಟ ನೇತೃತ್ವದಲ್ಲಿ, ಡಿವೈಎಸ್‌ಪಿ ವೆಲಂಟನ್ ಡಿಸೋಜ ಸಿಪಿಐ ಸಂತೋಷ ಶೆಟ್ಟಿ, ಹೆಸ್ಕಾಂ ಇಲಾಖೆಯ ಪ್ರವೀಣ ನಾಯ್ಕ ಅಧಿಕಾರಿಗಳ ತಂಡ ಪಟಾಕಿ ಮಾರಾಟಗಾರರ ಅಂಗಡಿಗಳಿಗೆ ಬೇಟಿ ನೀಡಿದ್ದಾರೆ ಈ ಸಂದರ್ಭದಲ್ಲಿ ಅಧಿಕೃತ ಪರವಾನಿಗೆದಾರರು ಮಾತ್ರ ನಿಗದಿತ ಸ್ಥಳ ಮತ್ತು ಸಮಯದಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ಒದಗಿಸಿಕೊಡಲು ಪರಿಶೀಲನೆ ನಡೆಸಿದ್ದಾರೆ.

300x250 AD

ತಾಲೂಕಿನ ಪಟ್ಟಣ ಮತ್ತು ಗ್ರಾಮೀಣ ಪ್ರದೇಶ ಸೇರಿದಂತೆ 5 ಜನ ಅಧಿಕೃತ ಪರವಾನಿಗೆ ಹೊಂದಿದ್ದು, ಅಂತವರ ಅಂಗಡಿಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ತಪಾಸಣೆ ನಡೆಸಿ ಹೆಚ್ಚಿನ ಜಾಗ್ರತೆ ವಹಿಸಬೇಕು. ದಾಸ್ತಾನು ಸ್ಥಳದಲ್ಲಿ ಅಗ್ನಿ ನಂದಕ ಸಾಧನ ಅಳವಡಿಸಿ ಸುರಕ್ಷತಾ ನಿಯಮಗಳನ್ನು ಪಾಲಿಸಲು ಅವರಿಗೆ ಸೂಚಿಸಿದ್ದಾರೆ.

Share This
300x250 AD
300x250 AD
300x250 AD
Back to top