ನವದೆಹಲಿ: ಭಾರತದ ಆಯುಷ್ ಶೆಟ್ಟಿ ಮತ್ತು ತಾರಾ ಶಾ ಅವರು ಅಮೆರಿಕದಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಬಾಲಕಿಯರ ಸಿಂಗಲ್ಸ್ನಲ್ಲಿ ತಾರಾ ಶಾ 23-21, 21-16 ರಿಂದ ಕೆನಡಾದ ಅಲೆನಾ ಯು ಅವರನ್ನು ಮಣಿಸಿದರು. ಬಾಲಕರ ಸಿಂಗಲ್ಸ್ನಲ್ಲಿ ಆಯುಷ್ ಶೆಟ್ಟಿ 21-14, 13-21, 21-19 ರಿಂದ ಇಂಡೊನೇಷ್ಯಾದ ಮೊಹಮ್ಮದ್ ರೆಜಾ ಅಲ್ ಫಜ್ರಿ ಅವರನ್ನು ಮಣಿಸಿದರು.
ಪುರುಷರ ಡಬಲ್ಸ್ನಲ್ಲಿ ನಿಕೋಲಸ್ ರಾಜ್ ಮತ್ತು ತುಷಾರ್ ಸುವೀರ್ ಜೋಡಿ 21-10, 21-16ರಿಂದ ಸ್ಪೇನ್ನ ಡೇನಿಯಲ್ ಫ್ರಾಂಕೊ ಮತ್ತು ರೋಡ್ರಿಗೋ ಸಂಜುರ್ಜೊ ಅವರನ್ನು, ದಿವ್ಯಂ ಅರೋರಾ ಮತ್ತು ಮಯಾಂಕ್ ರಾಣಾ ಜೋಡಿ 21-19, 21-15 ರಿಂದ ಎಸ್ಟೋನಿಯಾದ ಆಂಡ್ರೆ ಸ್ಮಿತ್ ಮತ್ತು ಹ್ಯೂಗೋ ಥೀಮಾಸ್ ಅವರನ್ನು ಮಣಿಸಿತು.
ಮಿಕ್ಸೆಡ್ ಡಬಲ್ಸ್ನಲ್ಲಿ ಭಾರತದ ಸಾತ್ವಿಕ್ ರೆಡ್ಡಿ ಕಾನಪುರಂ ಮತ್ತು ವೈಷ್ಣವಿ ಖಡ್ಕೇಕರ್ 19-21, 21-10, 21-7 ರಿಂದ ಸಿಂಗಪುರದ ಜೋಡಿಯನ್ನು ಹಿಮ್ಮೆಟ್ಟಿಸಿದರು. ಮತ್ತೊಂದು ಭಾರತದ ಜೋಡಿ ಸಮರವೀರ್ ಮತ್ತು ರಾಧಿಕಾ ಶರ್ಮಾ 21-19, 21-18 ರಿಂದ ಮಲೇಷ್ಯಾದ ಆಟಗಾರರನ್ನು ಮಣಿಸಿದರು.
ಮಹಿಳೆಯರ ಸಿಂಗಲ್ಸ್ನಲ್ಲಿ ಉನ್ನತಿ ಹೂಡಾ, ಪುರುಷರ ಸಿಂಗಲ್ಸ್ನಲ್ಲಿ ತುಷಾರ್ ಸುವೀರ್ ನಿರಾಸೆ ಅನುಭವಿಸಿದರೆ, ಡಬಲ್ಸ್ನಲ್ಲಿ ವೆನ್ನಾಲ ಕಲಗೋಟ್ಲ- ಶ್ರೀಯಾಂಶಿ ವಾಲಿಶೆಟ್ಟಿ ಜೋಡಿ ಮತ್ತು ತನ್ವಿ ಶರ್ಮಾ- ರಾಧಿಕಾ ಶರ್ಮಾ ಜೋಡಿ ಮುಗ್ಗರಿಸಿತು.