Slide
Slide
Slide
previous arrow
next arrow

ಹಿಂದೂ ಸಮಾಜ ಭಜರಂಗಿಯ0ತೆ ಶೌರ್ಯದಿಂದ ಎದ್ದು ನಿಲ್ಲಬೇಕು: ಗಂಗಾಧರ ಹೆಗಡೆ

300x250 AD

ಕುಮಟಾ: ರಾಮನ ಸೇವೆಗೆ ನಿಂತವನು ಭಜರಂಗಿ. ದೇಶದ ಸೇವೆಗೆ ನಿಂತವರು ಭಜರಂಗಿಗಳು. ಹೀಗಾಗಿ ಹಿಂದೂ ಸಮಾಜ ಭಜರಂಗಿಯ0ತೆ ಶೌರ್ಯದಿಂದ ಎದ್ದು ನಿಲ್ಲುವ ಕಾರ್ಯವಾಗಬೇಕು ಎಂದು ಭಜರಂಗದಳದ ಪ್ರಾಂತ ಉಪಾಧ್ಯಕ್ಷ ಗಂಗಾಧರ ಹೆಗಡೆ ಕರೆ ನೀಡಿದರು.

ಪಟ್ಟಣಕ್ಕೆ ಆಗಮಿಸಿದ ಶೌರ್ಯ ರಥಯಾತ್ರೆಯ ಸಂದರ್ಭದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದ ಭಜರಂಗದಳದ ಪ್ರಾಂತ ಉಪಾಧ್ಯಕ್ಷ ಗಂಗಾಧರ ಹೆಗಡೆ ಅವರು, ರಾಮಜನ್ಮ ಭೂಮಿಯಲ್ಲಿ ದೇವಾಲಯದ ಬೀಗ ತೆಗೆಯುವಂತೆ ಹಿಂದುಗಳು ಒಗ್ಗಟ್ಟಾಗಿ ಹೋರಾಡಿದ ಸಂದರ್ಭದಲ್ಲಿ ಜಯ ನಮ್ಮದಾಯಿತು. ಹಿಂದೂ ಸಮಾಜ ಒಗ್ಗಟ್ಟಾಗಿ ಏನು ಮಾಡಿದರೂ ಜಯ ನಮ್ಮದಾಗಿದೆ. ಇದಕ್ಕೆ ಹತ್ತಾರು ಘಟನೆಗಳೇ ಸಾಕ್ಷಿಯಾಗಿದೆ. ಹಿಂದೂ ಸಾಧು ಸಂತರನ್ನು ಗುಂಡಿಟ್ಟು ಕೊಲ್ಲುವ ಕಾರ್ಯ ನಡೆಯಿತು. ಸರಯೂ ನದಿಯಲ್ಲಿ ಹೆಣಗಳು ಕಾಣದಂತೆ ಮರಳಿನ ಚೀಲ ಕಟ್ಟಲಾಯಿತು. ಸರಯೂ ನದಿ ರಕ್ತಸಿಕ್ತವಾಗಿತ್ತು. ಇವುಗಳ ಕಲ್ಪನೆ ಇಂದಿನ ಜನರ ಅರಿವಿಗೆ ಬರಬೇಕಾಗಿದೆ. ಅನ್ಯ ಸಮಾಜದವರು ಮತಾಂತರ ಕಾರ್ಯಗಳಿಗೆ ಮುಂದಾದಾಗ, ಲವ್ ಜಿಹಾದ್ ನಂತಹ ಪ್ರಕರಣಗಳು ನಡೆದಾಗ, ಗೋವಿನ ರಕ್ಷಣೆಗೆ ಈಗಲೂ ವಿಶ್ವಹಿಂದೂ ಪರಿಷತ್ತಿಗೆ ಕರೆ ಬರುತ್ತದೆ.

ಇದು ಪರಿಷತ್ತಿನ ಮೇಲಿನ ನಂಬಿಕೆಯಿ0ದ ಎಂದು ಹೇಳಿದ ಅವರು, ರಾಮಜಾನಕಿ ರಥಯಾತ್ರೆಗೆ ಸರಕಾರ ರಕ್ಷಣೆ ನೀಡದ ಸಂದರ್ಭದಲ್ಲಿಯೂ ಭಜರಂಗದಳದವರು ಅದನ್ನು ಮಾಡಿ ತೋರಿಸಿದವರು. ಹೀಗಾಗಿ ಹೋರಾಟಕ್ಕಾಗಿಯೇ ಹುಟ್ಟಿಕೊಂಡ ಸಂಘಟನೆ ಭಜರಂಗದಳ ಎಂದರೆ ತಪ್ಪಾಗಲಾರದು. ಗೋ ಮಾತೆ ಕಷ್ಟದಲ್ಲಿದೆ, ಭೂಮಾತೆ ಕಣ್ಣೀರು ಹಾಕುತ್ತಿದ್ದಾಳೆ. ಮನೆ ಮಗಳು ಇಲ್ಲವಾಗುತ್ತಿದ್ದಾಳೆ ಎಂದು ಖೇಧ ವ್ಯಕ್ತಪಡಿಸಿದ ಅವರು. ಯುದ್ಧ ಈಗಾಗಲೇ ಪ್ರಾರಂಭವಾಗಿದ್ದು, ನಮ್ಮ ಮನೆಯಲ್ಲಿ ಸ್ವದೇಶಿ ವಸ್ತುಗಳನ್ನು ಅಳವಡಿಸಿಕೊಳ್ಳಬೇಕು. ಈ ಮೂಲಕ ವಿದೇಶೀಯ ಭಾವವನ್ನು ಹೊರದಬ್ಬುವ ಕಾರ್ಯವಾಗಲಿ ಎಂದರು. ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಎಲ್ಲರೂ ಭಾಗವಹಿಸಬೇಕು. ಹಳ್ಳಿ ಹಳ್ಳಿಗಳಲ್ಲಿ ಭಜರಂಗಿಗಳು ಹುಟ್ಟಿ ಬರಬೇಕು ಎಂದು ಅವರು ಆಶಿಸಿದರು.

300x250 AD

ಈ ರಥ ಯಾತ್ರೆಯ ಸಂದರ್ಭದಲ್ಲಿ ರಥ ಪ್ರಮುಖ ಅಮಿತ್ ಶೇಟ್, ವಿಶ್ವಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷ ವಿ.ಜಿ ಶೆಟ್ಟಿ, ತಾಲೂಕಾಧ್ಯಕ್ಷ ರೋಹಿದಾಸ ಗಾವಡಿ, ಹಾಗೂ ಇತರರು ಇದ್ದರು. ಶಾಸಕ ದಿನಕರ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಂಡಲಾಧ್ಯಕ್ಷ ಹೇಂಮAತಕುಮಾರ್ ಗಾಂವ್ಕರ್, ಡಾ. ಜಿ.ಜಿ ಹೆಗಡೆ, ಎಂ.ಎA ಹೆಗಡೆ, ವಿಶ್ವನಾಥ ನಾಯ್ಕ, ಜಿ.ಎಸ್ ಗುನಗ ಇತರರು ರಥವನ್ನು ಸ್ವಾಗತಿಸಿದರು. ರಾಮು ಅಡಿ ಕಾರ್ಯಕ್ರಮ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top