ಸಿದ್ದಾಪುರ: ಕೋಲಸಿರ್ಸಿ ಗ್ರಾಮ ಪಂಚಾಯತ, ಧನ್ವಂತರಿ ಆಯುವೇದ ಮಹಾವಿದ್ಯಾಲಯ, ತಾಲೂಕಿನ ವಿವಿಧ ಸಂಘ- ಸಂಸ್ಥೆಗಳು, ಸಾರ್ವಜನಿಕರು ಹಾಗೂ ಬಿಜೆಪಿ ಕಾರ್ಯಕರ್ತರು, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ನೇತೃತ್ವದಲ್ಲಿ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವ ನಾರಾಯಣಸ್ವಾಮಿ ಪಾಲ್ಗೊಂಡು ಸ್ವಚ್ಛತಾ ಕಾರ್ಯ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅ.1ರಂದು ದೇಶದೆಲ್ಲೆಡೆ ಪರಿಸರದ ಉಳಿವಿನ ದೃಷ್ಟಿಯಿಂದ ಸ್ವಚ್ಛತಾ ಅಭಿಯಾನ ನಡೆಸಬೇಕು ಎನ್ನುವ ಕರೆ ಕೊಟ್ಟ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ದೇಶದ ಪ್ರಧಾನಿಯಾದ ಕ್ಷಣದಲ್ಲೇ ನಾನು ಈ ದೇಶದ ಸೇವಕ ಎಂದ ಮೋದಿಯವರು ಪರಿಸರದ ಉಳಿವಿಗೆ,ಅದರ ರಕ್ಷಣೆಗೆ ಹಿಂದಿನಿAದಲೂ ಹೆಚ್ಚಿನ ಗಮನ ನೀಡುತ್ತ ಬಂದಿದ್ದಾರೆ.ಚ0ದ್ರಯಾನ, ಆರ್ಥಿಕ ಅಭಿವೃದ್ಧಿ ಮೂಲಕ ವಿಶ್ವದಲ್ಲಿ ನಮ್ಮ ದೇಶದ ಶಕ್ತಿಯನ್ನು ತೋರಿಸಿದ್ದಾರೆ. ಮಹಿಳಾ ಮೀಸಲಾತಿಯನ್ನು ತರುವದರ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ. ಪರಿಸರದ ಉಳಿವು ಜನಾಂದೋಲನವಾಗುವ ಉದ್ದೇಶ ಅವರದ್ದು. ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವದು ನಮ್ಮ ಧ್ಯೇಯವಾಗಬೇಕು. ಆ ಮೂಲಕ ಪ್ರಕೃತಿಯನ್ನು ಉಳಿಸಿಕೊಂಡು ಹವಾಮಾನ ವೈಪರೀತ್ಯ, ಅಧಿಕ ತಾಪಮಾನ ಮುಂತಾದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಮುಂದಾಗಬೇಕು ಎಂದರು.
ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಶಶಿಭೂಷಣ ಹೆಗಡೆ, ಕೋಲಸಿರ್ಸಿ ಗ್ರಾಪಂ ಅಧ್ಯಕ್ಷೆ ಹೇಮಾವತಿ ಗೌಡರ್, ಸದಸ್ಯ ಕೆ.ಆರ್.ವಿನಾಯಕ, ಕೆ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತಿ, ಪ್ರಮುಖರಾದ ರವಿ ಹೆಗಡೆ ಹೂವಿನಮನೆ, ಗುರುರಾಜ ಶಾನಭಾಗ, ಮಂಜುನಾಥ ಭಟ್, ಸುರೇಶ ಬಾಲಿಕೊಪ್ಪ, ತಿಮ್ಮಪ್ಪ ಎಂ.ಕೆ., ಮಾರುತಿ ನಾಯ್ಕ, ತೋಟಪ್ಪ ನಾಯ್ಕ, ಆಯುರ್ವೇದ ಕಾಲೇಜಿನ ಪ್ರಾಚಾರ್ಯೆ ರೂಪಾ ಭಟ್ ಹಾಗೂ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಯೋಗ ತರಬೇತಿ ಕೇಂದ್ರದ ಸದಸ್ಯೆಯರು, ವಿವಿಧ ಮಹಿಳಾ ಸಂಘಗಳ ಸದಸ್ಯೆಯರು, ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು ಅಭಿಯಾನದಲ್ಲಿ ಪಾಲ್ಗೊಂಡರು.