ಗೋಕರ್ಣ: ಶಿಷ್ಯರ ಆತ್ಮೋದ್ಧಾರ ಗುರುಗಳ ಕಾರ್ಯ; ಗುರುಸೇವೆ ಶಿಷ್ಯನ ಕರ್ತವ್ಯ. ಗುರು- ಶಿಷ್ಯರ ಬಾಂಧವ್ಯ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಪರಮಪೂಜ್ಯರು ಶನಿವಾರ ಮಂಗಳೂರು ಮಂಡಲದ ಕೇಪು, ವಿಟ್ಲ, ಕಲ್ಲಡ್ಕ ಮತ್ತು ಕುಂದಾಪುರ ವಲಯಗಳ ವತಿಯಿಂದ ಶ್ರೀಗುರುಭಿಕ್ಷಾಸೇವೆ ಸ್ವೀಕರಿಸಿ ಶ್ರೀಸಂದೇಶ ನೀಡಿದರು.
ದೇಹಗಳ ಸಂಬಂಧ ದೇಹದ ಸೌಂದರ್ಯ ಕುಂದಿದಾಗ ಶಿಥಿಲಗೊಳ್ಳುತ್ತದ. ಮನಸ್ಸುಗಳ ನಡುವಿನ ಸಂಬಂಧ ಜೀವ ಇರುವವರೆಗೂ ಇರುತ್ತದೆ. ಆತ್ಮಗಳ ನಡುವಿನ ಸಂಬಂಧ ಶಾಶ್ವತ. ಗುರು- ಶಿಷ್ಯರ ಸಂಬಂಧ ಏರ್ಪಡುವುದು ಇಂಥ ಆತ್ಮಗಳ ಸ್ತರದಲ್ಲಿ ಎಂದು ವಿಶ್ಲೇಷಿಸಿರು.
ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್, ಮಂಗಳೂರು ಮಂಡಲದ ಅಧ್ಯಕ್ಷ ಉದಯಶಂಕರ ನೀರ್ಪಾಜೆ, ಕಾರ್ಯದರ್ಶಿ ರಮೇಶ್ ಭಟ್ ಸರವು, ಉಪಾಧ್ಯಕ್ಷ ರಾಜಶೇಖರ ಕಾಕುಂಜೆ, ಕೋಶಾಧ್ಯಕ್ಷ ಮಹೇಶ್ವರ ಭಟ್ ಕೆ, ಸಂಘಟನಾ ಕಾರ್ಯದರ್ಶಿ ಕೃಷ್ಣಮೂರ್ತಿ ಕಮ್ಮಜೆ, ವೈದಿಕ ಪ್ರಧಾನ ಅಮೈ ಶಿವಪ್ರಸಾದ ಭಟ್, ಮಾತೃಪ್ರಧಾನರಾದ ಮಲ್ಲಿಕಾ ಜಿ.ಕೆ.ಭಟ್, ಶಿಷ್ಯಮಾಧ್ಯಮ ಪ್ರಧಾನ ಪ್ರದೀಪ್ ಕೊಣಾಜೆ, ವಿದ್ಯಾರ್ಥಿ ಪ್ರಧಾನ ಭಾರ್ಗವಿ ಕುಂದಾಪುರ, ಯುವ ಪ್ರಧಾನ ಕೃಷ್ಣ ಪ್ರಮೋದ, ಮುಷ್ಟಿಭಿಕ್ಷೆ ಪ್ರಧಾನ ಈಶ್ವರ ಭಟ್ ವಾರಣಾಸಿ, ಬಿಂಧುಸಿಂಧು ಪ್ರಧಾನ ಗೀತಾದೇವಿ ಸಿ, ನಿಕಟಪೂರ್ವ ಅಧ್ಯಕ್ಷ ಗಣೇಶ ಮೋಹನ ಕಾಶಿಮಠ, ಕಾರ್ಯದರ್ಶಿ ಶ್ರೀಕೃಷ್ಣ ಶರ್ಮಾ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯುಎಸ್ಜಿ ಭಟ್, ಕಾರ್ಯಾಲಯ ಕಾರ್ಯದರ್ಶಿ ಜಿ.ವಿ.ಹೆಗಡೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.