ಕಾರವಾರ: ಭಾರತೀಯ ಕೋಸ್ಟ್ಗಾರ್ಡನ್ನ ಡಿಜಿಟಲ್ ಕೋಸ್ಟ್ಗಾರ್ಡನ್ನಾಗಿ ರೂಪಿಸಲಾಗಿದೆ ಎಂದು ಕೋಸ್ಟ್ಗಾರ್ಡ್ ಪಶ್ಚಿಮ ವಲಯ ಕಮಾಂಡರ್, ಐಜಿಪಿ ಮನೋಜ್ ಬಾಡ್ಕರ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರಾವಳಿ ಸಂಪರ್ಕ ವ್ಯವಸ್ಥೆಯನ್ನ ಬಲಗೊಳಿಸಲಾಗಿದ್ದು, ಕರಾವಳಿಯ ಪ್ರತಿ 7500 ಕಿಲೋ ಮೀಟರ್ ತಟದಲ್ಲಿ ರಾಡರ್ ಸ್ಟೇಶನ್ ಹಾಗೂ 35 ನಾಟಿಕಲ್ ಮೈಲುದೂರದಲ್ಲಿ ಕ್ಯಾಮೆರಾ ಕಾಣ್ಗಾವಲು ಇಡಲು ವ್ಯವಸ್ಥೆ ಮಾಡಲಾಗಿದೆ. ಕಾರವಾರದಲ್ಲಿ ರಾಡರ್ ಸ್ಟೇಶನ್ ನಿರ್ಮಿಸಲಾಗಿದ್ದು, ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ.
ಕಡಲತೀರದಲ್ಲಿ ರಕ್ಷಣೆಗೆ 16 ಲೈಟ್ ಯುಟಿಲಿಟಿ ಹೆಲಿಕ್ಯಾಪ್ಟರನ್ನ ಕೇಳಲಾಗಿದೆ. 8 ಲೈಟ್ ಯುಟಿಲಿಟಿ ಹೆಲಿಕ್ಯಾಪ್ಟರನ್ನ ಸರ್ಕಾರ ಮಂಜೂರು ಮಾಡಿದ್ದು, ಇನ್ನೂ 8 ಲೈಟ್ ಯುಟಿಲಿಟಿ ಹೆಲಿಕ್ಯಾಪ್ಟರ್ ಬರಬೇಕಿದೆ ಎಂದು ಬಾಡ್ಕರ್ ತಿಳಿಸಿದರು.