ಗೋಕರ್ಣ: ಇಲ್ಲಿನ ಶ್ರೀಕ್ಷೇತ್ರ ಗೋಕರ್ಣ ಅನುವಂಶಿಯ ಉಪಾಧಿವಂತ ಮಂಡಳದ ಮಹಾಸಂರಕ್ಷಕರಾಗಲು ಶೃಂಗೇರಿ ಶ್ರೀಶಾರದಾ ಪೀಠದ ಪೀಠಧಿಪತಿ ಭಾರತಿತೀರ್ಥ ಮಹಾಸ್ವಾಮೀಜಿ ಮತ್ತು ವಿಧುಶೇಖರ ಭಾರತಿತೀರ್ಥ ಮಹಾಸ್ವಾಮೀಜಿ ಸಮ್ಮತಿ ಸೂಚಿಸಿ ಅನುಗ್ರಹಿಸಿದ್ದಾರೆ.
ಶ್ರೀಕ್ಷೇತ್ರ ಗೋಕರ್ಣದ ಇತಿಹಾಸ ಹಾಗೂ ವೈದಿಕ ಉಪಾದಿವಂತ ಅನುವಂಶಿಯ ಪರಂಪರೆಯನ್ನು ನಿರ್ವಹಿಸಲು ಹಾಗೂ ಶ್ರೀಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿಯತ್ತ ಕೊಂಡೊಯ್ಯಲು ಸಂಸ್ಥೆಗೆ ಅಗತ್ಯವಿರುವ ಮಾರ್ಗದರ್ಶನ ವನ್ನು ಸಹ ಕಾಲಕಾಲಕ್ಕೆ ನೀಡುವ ಲಿಖಿತ ಪತ್ರವನ್ನು ಶ್ರೀ ಮಠದಿಂದ ನೀಡಲಾಗಿದೆ. ಶ್ರೀ ಮಠದ ಆಡಳಿತಧಿಕಾರಿಗಳಾದ ವಿ.ಆರ್.ಗೌರಿಶಂಕರ ಅವರು ನೀಡಿದ ಆದೇಶ ಪತ್ರವನ್ನು ಸಂಸ್ಥೆ ಅಧ್ಯಕ್ಷ ರಾಜಗೋಪಾಲ ಅಡಿ ಗುರೂಜಿ ಮತ್ತು ಸದಸ್ಯರಾದ ಪ್ರಸನ್ನ ಕೃಷ್ಣ ಜೋಗಭಟ್ ಮತ್ತು ರವಿ ಡಿ.ಜೋಗಭಟ್ ಶೃಂಗೇರಿಯಲ್ಲಿ ಸ್ವೀಕರಿಸಿ ಉಭಯ ಶ್ರೀಗಳ ಕೃಪಾಶಿರ್ವಾದ ಪಡೆದರು.
ಈ ಬಗ್ಗೆ ಆನುವಂಶೀಯ ಉಪಾದಿವಂತ ಮಂಡಳ ಇದರ ಹಿರಿಯ ವಿದ್ವಾಂಸರು ನಿವೃತ್ತ ಧಾರ್ಮಿಕ ಸಲಹೆಗಾರರು ಧಾರ್ಮಿಕ ದತ್ತಿ ಇಲಾಖೆ ಬೆಂಗಳೂರು, ಗಣಪತಿ ಶಾಸ್ತ್ರಿಗಳು ವಾತುಲ ಆಗಮ ವಿದ್ವಾಂಸರು ಘನಾಂತ ವಿದ್ವಾಂಸರು, ಪಶುಪತಿ ದೇವಸ್ಥಾನ ಕಟ್ಮಂಡು ನೇಪಾಳ ಇದರ ನಿವೃತ್ತ ಮುಖ್ಯ ಅರ್ಚಕರು ಆದ ವೇ. ವೇ. ಕೃಷ್ಣ ಜೋಗಭಟ್, ಅಗ್ನಿಹೋತ್ರ ಪರಂಪರೆಯ ಋಗ್ವೇದ ವಿದ್ವಾನ್ ಗಜಾನನ ದೀಕ್ಷಿತ ಇವರು, ಮಹಾಬಲೇಶ್ವರ ದೇವ ಗೋಕರ್ಣ ಇದರ ಪ್ರಧಾನ ಅರ್ಚಕರಾದ ವಿದ್ವಾನ್ ಗುರುಮೂರ್ತಿ ಹಿರೇ ಇವರು, ಋಗ್ವೇದ ಎಂಫಿಲ್ ಪಡೆದ ಮತ್ತು ಅದ್ವೈತ ವೇದಾಂತ ವಾತುಲಾ ಆಗಮ ವಿದ್ವಾಂಸರಾದ ತ್ರಿಯಂಬಕ ಅಡಿ ಗುರುಲಿಂಗ ಇವರು, ಖ್ಯಾತ ತಾತಾಚಾರ್ಯ ಮಠಪರಂಪರೆಯ ಮನೆತನದಹಾಗೂ ಗೋಕರ್ಣ ಭಾಗದ ಹಿರಿಯ ಜನಪ್ರಿಯ ವೈದ್ಯರಾದ ಡಾ: ಮಹಾಬಲ ಶಾಸ್ತ್ರೀ, ಹಾಗೂ ಡುಂಡಿರಾಜ್ ಶಾಸ್ತ್ರೀ, ಗೋಪಿ ಮನೆತನದ ಶಂಕರ ಗೋಪಿ ವೆಂಕಟರಮಣ ಧಾರೇಶ್ವರ, ಆನುವಂಶಿಯ ಉಪಾದಿವಂತ ಮಂಡಳದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರೂ ಈ ಬಗ್ಗೆ ಮಾಧ್ಯಮದೊಂದಿಗೆ ಸಂತಸ ವನ್ನು ವ್ಯಕ್ತಪಡಿಸಿದ್ದಾರೆ.