ಕಾರವಾರ: ಮೀನು ಕೃಷಿಗೆ ಉತ್ತೇಜನ ನೀಡಿದರೆ ಕರಾವಳಿ ಭಾಗದ ಜೀವಾಳ ಚಟುವಟಿಕೆಯಾಗಿರುವ ಮೀನುಗಾರಿಕೆ ಕ್ಷೇತ್ರ ಉತ್ತಮ ಅಭಿವೃದ್ಧಿ ಹೊಂದಲು ಅವಕಾಶವಾಗುತ್ತದೆ ಎಂದು ಪ್ರೊಬೆಷನರಿ ಐಎಎಸ್ ಅಧಿಕಾರಿ ಜುಬಿನ್ ಮೋಹಪಾತ್ರ ಹೇಳಿದ್ದರು.
ನಗರದ ಮೀನುಗಾರಿಕೆ ಇಲಾಖೆಯ ಸಭಾಭಾವನದಲ್ಲಿ ಕೇಂದ್ರೀಯ ಸಮುದ್ರ ಮೀನುಗಾರಿಕೆ ಇಲಾಖೆಯ ವತಿಯಿಂದ ಆಯೋಜಿಸಲಾದ ರಾಷ್ಟೀಯ ಮೀನು ಕೃಷಿಕರ ದಿನಾಚರಣೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನೆಲ್ಲದಲ್ಲಿನ ಕೃಷಿ ಚಟುವಟಿಕೆ ಹೇಗೆ ಲಾಭದಾಯಕವಾಗಿ ಕೋಟ್ಯಂತರ ಜನರ ಆಧಾರವಾಗುತ್ತಿದೆಯೋ ಅದೇ ಮಾದರಿಯಲ್ಲಿ ನೀರಿನಲ್ಲಿಯೂ ಕೃಷಿ ಮಾಡಲು ಸಾಧ್ಯ ಎಂಬುದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದ್ದರು. ಹಾಗೆಯೇ ಮೀನುಗಾರಿಕೆ ಕೃಷಿಯು ಕಡಿಮೆ ಆಧಾಯದಿಂದ ಹೆಚ್ಚಿನ ಲಾಭ ಪಡೆಯಲು ಸಹಾಯಕವಾಗಿದೆ ಎಂದರು.
ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀನಿನ ಜೊತೆಗೆ ನೀಲ್ಲೇಕಲ್ಲುಗಳ ಯಶಸ್ವಿ ಪಂಜರ ಕೃಷಿ ನಡೆಸಿರುವ ಮೀನುಗಾರರದ ಪ್ರವೀಣ ಮಹಾಬಲ್ಲೆಶ್ವರ ಹರಿಕಂತ್ರ, ಧಾರೇಶ್ವರ, ಶಿವಾನಂದ ಗಣಪು ಹರಿಕಂತ್ರ ಹೊರಭಾಗ, ಹಾಗೆಯೇ ಸಮಗ್ರ ಬಹುರೂಪ ಜಲಕೃಷಿ ಕೈಗೊಂಡ ಮೀನುಗಾರರ ಗುಂಪಿನ ಮುಖಂಡರುಗಳಾದ ಸುರೇಶ ಕಾರ್ವಿ ಬೈಂದೂರು, ವಿನಾಯಕ ಕನ್ನಾ ಹರಿಕಂತ್ರ ಹೊನ್ನಾವರ, ಪಾಂಡುರ0ಗ ಶಿವಪ್ಪ ಹರಿಕಂತ್ರ ಕುಮಟಾ, ಮಹೇಶ್ ಗುಡ್ ಕಾಗಾಲ, ಕಿರಣ ಮಹಾಬಲ್ಲೆಶ್ವರ ಹಿಣಿ, ಮಂಜುನಾಥ್ ಗಣಪತಿ ತಾಂಡೇಲ, ಗುರು ಕೆ ನಾಯ್ಕ ನಂದನಗದ್ದಾ, ಮಹೇಶ್ ಸೋಮಾ ತಾರಿ ಅವರನ್ನು ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಬಬಿನ್ ಬೋಪಣ್ಣ, ಸಿಎಂಎಫ್‌ಆರ್‌ಐ ಪ್ರಧಾನ ವಿಜ್ಞಾನಿ ಡಾ.ರೋಹಿತ, ಹಿರಿಯ ವಿಜ್ಞಾನಿಗಳಾದ ನಾರಾಯಣ ವೈದ್ಯ, ಪ್ರವೀಣ ದುಬೆ, ತಾಂತ್ರಿಕ ಅಧಿಕಾರಿ ಸೋನಾಲಿ ಮದ್ದೋಲ್ಕರ, ಜಿ.ಬಿ.ಪುರುಷೋತ್ತಮ ಉಪಸ್ಥಿತರಿದ್ದರು.