ಶಿರಸಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮದ್ಯವರ್ಜನ ಶಿಬಿರ ಹಾಗೂ ವಿಶ್ವ ತಂಬಾಕು ವಿರೋಧಿ ದಿನಾಚರಣೆಯನ್ನು ನಗರದ ಮಾರುತಿ ದೇವಸ್ಥಾನದ ವಾಯುನಂದನ ಸಭಾಭವನದಲ್ಲಿ ಭಾನುವಾರ ನಡೆಯಿತು.
ಲೋಕಧ್ವನಿ ಸುದ್ದಿ ಸಂಪಾದಕಿ ವಿನುತಾ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಯೊಬ್ಬ ಮನುಷ್ಯನಿಗೂ ಚಟ ಎನ್ನುವ ಮಾನಸಿಕ ಸ್ಥಿತಿ ಇದ್ದೇ ಇರುತ್ತದೆ. ಆದರೆ ಅದು ಯಾವತ್ತಿಗೂ ಅತಿಯಾಗಬಾರದು. ಉತ್ತಮವಾಗಿದ್ದೇ ಇರಲಿ ಕೆಟ್ಟದ್ದೇ ಇರಲಿ ಅದು ಅತಿಯಾದಗ ಚಟ ಎಂದೆನಿಸಿಕೊಳ್ಳುತ್ತದೆ ಎಂದರು.
ದಾನ ಮಾಡುವ ಚಟವಿದ್ದರೂ ಅಷ್ಟೇ, ಹಣ ಮಾಡುವ ಚಟವಾದರೂ ಅಷ್ಟೇ. ಅದು ಅತಿಯಾದಾಗ ಅವರ ಕುಟುಂಬವನ್ನೇ ಬೀದಿಗೆ ತಂದು ನಿಲ್ಲಿಸುತ್ತದೆ. ಅಂತೆಯೇ ಈ ತಂಬಾಕು ಸೇವನೆ ಹಾಗೂ ಕುಡಿತದ ಚಟಗಳೂ ಕೂಡಾ. ನಮಗೆಲ್ಲ ಇರುವ ಚಟಗಳು ಇನ್ನೊಬ್ಬರಿಗೆ ನೋವಾಗುವಂತಿದ್ದರೆ ಅದರಿಂದ ದೂರವಿರಬೇಕು. ಯಾವ ಚಟವೂ ಹೆಚ್ಚು ಕಡಿಮೆ ಎನ್ನುವುದಿರುವುದಿಲ್ಲ ಎಲ್ಲವೂ ಮಿತಿ ಮೀರಿದರೆ ಅಪಾಯ, ಸಂಸಾರವೇ ಒಡೆಯುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸಹ ಚಟಕ್ಕೆ ದಾಸರಾಗದೇ ಉತ್ತಮ ಜೀವನ ನಡೆಸುವುದಕ್ಕೆ ಧಗ್ರಾಯೋದಂತ ಸಂಘಗಳು ಮುಂದಾಗಿದ್ದು ಶ್ಲಾಘನೀಯ. ಅದೆಷ್ಟೋ ಸಾವಿರಾರು ಕುಟುಂಬಕ್ಕೆ ಇಂದು ಹೊಸ ಜೀವನವನ್ನು ಕಲ್ಪಿಸಿದ್ದಾರೆ ಎಂದರು.
ಧಗ್ರಾಯೋ ಅಖಿಲ ಕರ್ನಾಟಕಜನಜಾಗ್ರತಿ ವೇದಿಕೆ ನಿಕಟಪೂರ್ವ ಜಿಲ್ಲಾಧ್ಯಕ್ಷ ವಿವೇಕ ರಾಯ್ಕರ್ ನಿರ್ವಹಿಸಿದರು.
ವೇದಿಕೆಯ ಮೇಲೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜು ಶೆಟ್ಟಿ, ಗೌರಿ ನಾಯ್ಕ, ನಿರ್ಮಲಾ ಶೆಟ್ಟಿ, ಧಗ್ರಾಯೋಜನಾಧಿಕಾರಿ ಬಸವನಗೌಡಾ ಪಾಟೀಲ್ ಇದ್ದರು.