ಜೊಯಿಡಾ: ತಾಲೂಕಿನ ಗಣೇಶಗುಡಿಯ ಬಾಡಗುಂದದ ವಿಜಿಲಿಂಗ್ ವುಡ್ ರೆಸಾರ್ಟ್ನಲ್ಲಿ ದೇಶದಲ್ಲಿಯೇ ಅತಿ ಉದ್ದದ ರೋಪ್ ವೇ ಅನ್ನು ನಿರ್ಮಾಣ ಮಾಡಲಾಗಿದ್ದು, ಇದು ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಿದೆ.
ಉದ್ಯಮಿ ವಿನಾಯಕ ಜಾಧವ ಇವರು ತಮ್ಮ ರೆಸಾರ್ಟ್ನಲ್ಲಿ ರೋಪ್ ವೇ ನಿರ್ಮಾಣ ಮಾಡಿದ್ದು, 400 ಮೀ.ಗಿಂತಲೂ ಉದ್ದವಿದೆ, ಭಾರತದಲ್ಲಿ ಹಿಮಾಚಲ ಪ್ರದೇಶದ ಕುರ್ಪಿಯಲ್ಲಿ ಈ ಹಿಂದೆ 110 ಮೀ. ಉದ್ದದ ರೋಪ್ ವೇ ಅನ್ನು ಮಾಡಲಾಗಿದ್ದು ಇದು ಭಾರತದಲ್ಲಿಯೇ ಅತಿ ಉದ್ದದ ರೋಪ್ ವೇ ಆಗಿದೆ. ಕಾಳಿ ನದಿ ಪಕ್ಕದಲ್ಲಿಯೇ ರೋಪ್ ವೇ ಅನ್ನು ನಿರ್ಮಾಣ ಮಾಡಲಾಗಿದ್ದು, ಇದರಿಂದ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.
ಹಚ್ಚ ಹಸಿರಿನ ಪರಿಸರದ ಮಧ್ಯೆ ವಿಜಿಲಿಂಗ್ ವುಡ್ ರೆಸಾರ್ಟ್ ಇದ್ದು, ರಾಜ್ಯ ಮತ್ತು ಹೊರ ರಾಜ್ಯಗಳಿಂದ ಹೆಚ್ಚಿನ ಪ್ರವಾಸಿಗರು ವಿಜಿಲಿಂಗ್ ವುಡ್ ರೆಸಾರ್ಟ್ಗೆ ಭೇಟಿ ನೀಡಿ ರೋಪ್ ವೇನ ಅನುಭವವನ್ನು ಪಡೆದುಕೊಳ್ಳುತ್ತಿದ್ದಾರೆ.