ಶಿರಸಿ: ಇಲ್ಲಿನ ಮರಾಠಿಕೊಪ್ಪದ ಸುಭಾಷನಗರದಲ್ಲಿರುವ ಅಜಿತ ಮನೋಚೇತನಾ ಕೇಂದ್ರದಲ್ಲಿ ಪ್ರತಿ ತಿಂಗಳು ನಡೆಯುವ “ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ” ವನ್ನು ಮೇ. 14,ರವಿವಾರದಂದು ಏರ್ಪಡಿಸಲಾಗಿದೆ.
ಬೆಳಿಗ್ಗೆ 10-00 ಘಂಟೆಯಿಂದ ಮಧ್ಯಾಹ್ನ 2.00 ಘಂಟೆಯವರೆಗೆ ನಡೆಯುವ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹುಬ್ಬಳ್ಳಿಯ ಖ್ಯಾತ ಮನೋವೈದ್ಯರಾದ ಡಾ. ಎಸ್.ಸಿ.ಕುಲಕರ್ಣಿ ಪಾಲ್ಗೊಂಡು ಸಲಹೆ, ಚಿಕಿತ್ಸೆ ನೀಡಲಿದ್ದಾರೆ. ಕಾರಣ ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ಅಧ್ಯಕ್ಷ ಸುಧೀರ ಭಟ್ ಹಾಗೂ ಕಾರ್ಯದರ್ಶಿ ಅನಂತ ಹೆಗಡೆ ಆಶೀಸರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.