ನವದೆಹಲಿ: ಶ್ಲೋಕಗಳ ಪಠಣ ಮತ್ತು ಗಟ್ಟಿಯಾದ ಡ್ರಮ್‌ಬಿಟ್‌ಗಳ ಮಧ್ಯೆ ಕೇದಾರನಾಥ ಧಾಮದ ಬಾಗಿಲುಗಳು ಯಾತ್ರಾರ್ಥಿಗಳಿಗೆ ಇಂದು ತೆರೆಯಲ್ಪಟ್ಟವು. ಕೇದಾರನಾಥ ದೇವಸ್ಥಾನದ ಪ್ರಧಾನ ಅರ್ಚಕ ಜಗದ್ಗುರು ರಾವಲ್ ಭೀಮಾ ಶಂಕರ ಲಿಂಗ ಶಿವಾಚಾರ್ಯರು ದ್ವಾರಗಳನ್ನು ತೆರೆದರು.
ಕೇದಾರನಾಥ ದೇವಾಲಯವು ಶಿವನಿಗೆ ಸಮರ್ಪಿತವಾಗಿರುವ ದೇಶದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ದೇವಾಲಯವು ತೆರೆದಿರುವ ಆರು ತಿಂಗಳ ಅವಧಿಯಲ್ಲಿ ದೇಶಾದ್ಯಂತದ ಜನರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಮಹಾದ್ವಾರವನ್ನು ವೀಕ್ಷಿಸಲು ಸಾವಿರಾರು ಭಕ್ತರು ದೇವಾಲಯದಲ್ಲಿ ಜಮಾಯಿಸಿ ದೇಗುಲವನ್ನು ಪ್ರವೇಶಿಸಲು ಕಾಯುತ್ತಿದ್ದರು.
ಬಾಗಿಲು ಭಕ್ತರಿಗೆ ತೆರೆಯುವುದಕ್ಕೂ ಮುನ್ನ ಬಾಬಾ ಕೇದಾರನಾಥರ ಪಂಚಮುಖಿ ವಿಗ್ರಹ ಡೋಲಿ ನಿನ್ನೆ ದೇಗುಲವನ್ನು ತಲುಪಿತು. ಈ ವಿಶೇಷ ಸಂದರ್ಭಕ್ಕಾಗಿ ಶಿವನ ಸಾನಿಧ್ಯವನ್ನು 20 ಕ್ವಿಂಟಾಲ್ ಹೂವಿನಿಂದ ಅಲಂಕರಿಸಲಾಗಿತ್ತು. ಮೊದಲು ಪೂರ್ವದ ಬಾಗಿಲು ತೆರೆಯಲಾಯಿತು ಮತ್ತು ನಂತರ ಪಶ್ಚಿಮ ಭಾಗದ ಬಾಗಿಲು ತೆರೆಯಲಾಯಿತು.
ಏ.22ರಂದು ಅಕ್ಷಯ ತೃತೀಯದಂದು ಗಂಗೋತ್ರಿ ಮತ್ತು ಯಮುನೋತ್ರಿಯ ದ್ವಾರ ತೆರೆಯುವುದರೊಂದಿಗೆ ಚಾರ್ ಧಾಮ್ ಯಾತ್ರೆಯು ಪ್ರಾರಂಭವಾಗಿದೆ.