ಬೆಂಗಳೂರು: ಜನರ ಮನ, ಮನೆ ತಲುಪಲು ಬಿಜೆಪಿ ಸಜ್ಜಾಗಿದ್ದು, ಮಾರ್ಚ್ 1 ರಿಂದ ರಾಜ್ಯಾದ್ಯಂತ ನಾಲ್ಕು ವಿವಿಧ ದಿಕ್ಕುಗಳಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಆರಂಭವಾಗಲಿದೆ.
ಈ ಯಾತ್ರೆಯಲ್ಲಿ ರಾಜ್ಯ ಹಾಗೂ ಕೇಂದ್ರದ ಹಿರಿಯ ನಾಯಕರು ಇರಲಿದ್ದಾರೆ. ಹಿರಿಯ ನಾಯಕರ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ಮಾಡಿಕೊಂಡು 150 ಕ್ಕೂ ಹೆಚ್ಚು ರೋಡ್ ಶೋ ಮಾಡಲಾಗುತ್ತದೆ. ಎಂಟು ಸಾವಿರ ಕಿ.ಮೀ. ದೂರ ಕ್ರಮಿಸುವ ನಿರೀಕ್ಷೆಯನ್ನು ಇಡಲಾಗಿದೆ. ಮಾರ್ಚ್ 1 ರಿಂದ ಆರಂಭವಾಗುವ ಯಾತ್ರೆ ಮಾರ್ಚ್ 20 ರಂದು ಮುಗಿಯಲಿದೆ. ಮಾರ್ಚ್ 25 ರಂದು ದಾವಣಗೆರೆಗೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿದ್ದಾರೆ.
ಯಾತ್ರೆಗಾಗಿ ವಿಶೇಷ ಬಸ್
30 ಅಡಿ ಎತ್ತರದ ಹಾಗೂ ಎಂಟು ಅಡಿ ಅಗಲದ ಬಸ್‌ನ್ನು ಯಾತ್ರೆಗಾಗಿ ವಿನ್ಯಾಸ ಮಾಡಲಾಗುತ್ತಿದೆ. ಇಲ್ಲಿ ಎಸಿ ವ್ಯವಸ್ಥೆ ಇರುತ್ತದೆ. ನಾಯಕರು ಬಸ್ ಮೇಲೆ ನಿಂತು ಭಾಷಣ ಮಾಡಬಹುದಾಗಿದೆ. ಮೊಬೈಲ್ ಚಾರ್ಜಿಂಗ್, ಹೋಮ್ ಥಿಯೇಟರ್, ಆಡಿಯೋ ಸಿಸ್ಟಮ್, ಕ್ಯಾಮೆರಾ, ಎಲ್‌ಇಡಿ ವ್ಯವಸ್ಥೆಯೂ ಇದೆ.