ಶಿರಸಿ: ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆ, ಸೋಂದಾ ಇದರ ಅಡಿಯಲ್ಲಿ ನಡೆಯುತ್ತಿರುವ ಇಸಳೂರಿನ ಶ್ರೀನಿಕೇತನ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸಿ.ಬಿ.ಎಸ್.ಈ ಶಾಲೆಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಹಲವಾರು ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಸಾಧನೆ ಗೈದಿದ್ದಾರೆ.
ಹಿರಿಯರ ವಿಭಾಗದಲ್ಲಿ 10 ನೇ ತರಗತಿಯ ಪ್ರೀತಮ್ ಪಾಟೀಲ್ ಉದ್ದಜಿಗಿತದಲ್ಲಿ ಪ್ರಥಮ, 9 ನೇ ತರಗತಿಯ ಮಂಥನ್ 400 ಮೀಟರ್ ಓಟದಲ್ಲಿ ಪ್ರಥಮ, 9 ನೇ ತರಗತಿಯ ಸಿಂಚನಾ ಗುಂಡುಎಸೆತದಲ್ಲಿ ಪ್ರಥಮ, ಚಕ್ರ ಎಸೆತದಲ್ಲಿ ದ್ವಿತೀಯ, 9ನೇ ತರಗತಿಯ ಅನಘಾ ಹೆಗಡೆ ಗುಂಡು ಎಸೆತದಲ್ಲಿ ದ್ವಿತೀಯ, ಚಕ್ರ ಎಸೆತದಲ್ಲಿ ತೃತೀಯ, 9 ನೇ ತರಗತಿಯ ಅದಿತಿ ಜೋಶಿ ಉದ್ದಜಿಗಿತದಲ್ಲಿ ದ್ವಿತೀಯ, 10 ನೇ ತರಗತಿಯ ದಿಯಾ ಯು. 400 ಮೀಟರ್ ಓಟದಲ್ಲಿ ತೃತೀಯ, 10 ನೇ ತರಗತಿಯ ವಿನೀಶ್ ಗುಂಡು ಎಸೆತದಲ್ಲಿ ತೃತೀಯ, 9 ನೇ ತರಗತಿಯ ವಿದ್ಯಾರ್ಥಿ ಅಖಿಲ್ ಕಂಚುಗಾರ್ 100 ಮೀಟರ್ ಓಟದಲ್ಲಿ ತೃತೀಯ, ಬಾಲಕರ ರಿಲೇ ಪ್ರಥಮ ಸ್ಥಾನ ಗಳಿಸಿದ್ದಾರೆ.
ಕಿರಿಯರ ವಿಭಾಗದಲ್ಲಿ 8 ನೇ ತರಗತಿಯ ಶೌರ್ಯ ಉದ್ದ ಜಿಗಿತದಲ್ಲಿ ಪ್ರಥಮ, 100 ಮೀಟರ್ ಓಟದಲ್ಲಿ ದ್ವಿತೀಯ, 8 ನೇ ತರಗತಿಯ ಅಪೂರ್ವಾ ಭಟ್ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಚಾರ್ಯರು, ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.