ಶಿರಸಿ: ನಗರದ ಪಶ್ಚಿಮ ಕ್ಲಸ್ಟರ್ನ ಸುಮಾರು 75 ವರ್ಷಗಳ ಹಳೆಯ ಪುಟ್ಟನಮನೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡದ ಜೀರ್ಣೋದ್ಧಾರವು ಗ್ರಾಮ ಪಂಚಾಯತ ಹುತ್ಗಾರ ಹಾಗೂ ತಾಲೂಕಾ ಪಂಚಾಯತದವರ ಸಂಪೂರ್ಣ ಸಹಕಾರದಿಂದ ನೆರವೇರಿದೆ.
ತಾಲೂಕಾ ಪಂಚಾಯತ ಸದಸ್ಯ ರವಿ ಹೆಗಡೆ ಹಳದೋಟ, ಹುತ್ಗಾರ ಪಂಚಾಯತದ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳಾದಿಯಾಗಿ ವಿಶೇಷ ಜವಾಬ್ದಾರಿ ವಹಿಸಿ ಮುಂಚೂಣಿಯಲ್ಲಿ ನಿಂತು ಶಾಲಾ ನೆಲಕ್ಕೆ ಟೈಲ್ಸ, ಪಂಪ್, ಪೇಂಟ್, ವಿದ್ಯುತ್ ಎಲ್ಲಾ ವ್ಯವಸ್ಥೆ ಮಾಡಿಕೊಟ್ಟ ಹುತ್ಗಾರ ಗ್ರಾ.ಪಂಚಾಯತ ಉಪಾಧ್ಯಕ್ಷ ಶೇಖರ ಮಡಿವಾಳ,ಸಹಕರಿಸಿದ ಎಲ್ಲರಿಗೂ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ,ಶಿಕ್ಷಕೇತರ ಸಿಬ್ಬಂದಿಗಳು ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ.