ಶಿರಸಿ: ತಾಲೂಕಿನ ಕಾಯಗುಡ್ಡೆ ಗ್ರಾಮದಲ್ಲಿ ಉತ್ತರ ಕನ್ನಡ ಜಿಲ್ಲಾ ರೈತ ಸಂಘ ರಿ.ಶಿರಸಿ ತಾಲೂಕ ರೈತ ಸಂಘದಿಂದ ರೈತ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ರೈತ ಗೀತೆ ಹಾಡುವ ಮೂಲಕ ರೈತರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಾಯಗುಡ್ಡೆ ಗ್ರಾಮದ ಹಿರಿಯ ರೈತರಾದ ಧರ್ಮ ಬಸಪ್ಪ ನಾಯ್ಕ್,ಇಂದ್ರಪ್ಪ ಬಿ ನಾಯ್ಕ್,ಹನುಮಂತ್ತ ಎಲ್ ನಾಯ್ಕ್,ಮಾಸ್ತ್ಯಪ್ಪ ಕೆ. ನಾಯ್ಕ್,ಕನ್ನಪ್ಪ ಎಲ್ ನಾಯ್ಕ್,ಗಣಪತಿ ವಾ. ನಾಯ್ಕ್,ಲೋಕಪ್ಪ ಡಿ. ನಾಯ್ಕ್,ಪಕ್ಕೀರ ಆರ್. ನಾಯ್ಕ್ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.
ಮುಖ್ಯ ಅಥಿತಿಯಾಗಿ ಕೆರೆಯಪ್ಪ ನಾಯ್ಕ್ ಬೇಡ್ಕಣಿ ಮಾತನಾಡುತ್ತಾ, ರೈತ ದಿನಾಚಾರಣೆಯನ್ನು ರೈತರಾದ ನಾವು ಒಂದಾಗಿ ಆಚಾರಣೆ ಮಾಡಬೇಕು ದೇಶದ ರೈತರೆಲ್ಲಾ ಒಂದಾಗಿ ಸಂಘಟಿತರಾದರೆ ರೈತರ ಜೀವನ ಹಸನಾಗುತ್ತದೆ.ಸರಕಾರಗಳು ತಮ್ಮ ಸ್ವಾರ್ತಕ್ಕೆ ಆಡಳಿತ ನಡೆಸುತ್ತಿವೆ ಹೊರತು ಜನರಿಗಾಗಿ ಬಹುಸಂಖ್ಯಾತ ರೈತರ ಪರವಾಗಿ ಇಲ್ಲಾ.ರೈತರು ಇಂದ್ದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೂ ಪರಿಹಾರ ಪಡೆಯಲು ನಾವೆಲ್ಲ ರೈತ ಸಂಘದ ಮೂಲಕ ಸಂಘಟಿತಾರಾಗಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸಿ.ಎಫ್. ನಾಯ್ಕ್ ಮಾಳಂಜಿ ಮಾತನಾಡುತ್ತಾ ರೈತ ಸಂಘಗಳು ಸಂಘಟಿತರಾಗಿ ರೈತರ ಪರವಾಗಿ ಸದಾ ಇರಬೇಕು. ಪ್ರತಿ ಗ್ರಾಮದಲ್ಲಿ ರೈತ ಸಂಘ ಮಾಡಿ ಜಾಗ್ರತ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಿರಸಿ ತಾಲೂಕ ರೈತ ಸಂಘದ ಅಧ್ಯಕ್ಷರಾದ ರಾಜೇಂದ್ರ ಎಂ ನಾಯ್ಕ್ ಕಾಯಗುಡ್ಡೆ ಮಾತನಾಡುತ್ತಾ ರೈತರ ದಿನಾಚಾರಣೆಯನ್ನು ನಾವು ನೀವು ಎಲ್ಲರು ಸೇರಿ ಮಾಡುತ್ತಿರುವುದು ಮರೆಯಲಾರದ ಸಮಯ. ರೈತರ ಸಮಸ್ಯೆಗಳಿಗೆ ರೈತರೇ ಹೋರಾಡಿಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಬೇಕಾಗಿದೆ ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮದಲ್ಲೂ ರೈತ ಸಂಘ ಮಾಡಲು ನಿಮ್ಮ ಸಹಕಾರ ಬೇಕೆಂದರು.ರೈತರ ಪರವಾಗಿ ನಾವು ಸದಾ ಹೋರಾಡುತ್ತೇವೆ ಹಾಗೆ ರೈತರು ಏಕ ಬೆಳೆಯನ್ನು ಬಿಟ್ಟು ಬಹುಬೇಳೆಯನ್ನು ಮಾಡಿ ಜೀವನ ಮಟ್ಟ ಸುಧಾರಿಸಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿಉಪಸ್ಥಿತರಿದ್ದ ಬಂಕನಾಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರೀಶ್ ಎಂ. ನಾಯ್ಕ ಮಾತನಾಡುತ್ತಾ ರೈತ ದಿನಾಚಾರಣೆಯ ಶುಭಾಶಯ ಕೋರುತ್ತಾ ರೈತರದ ನಾವೆಲ್ಲಾ ರೈತ ಸಂಘಟನೆ ಬಲಪಡಿಸಿ ರೈತರಿಗಾಗಿ ಹೋರಾಡುತ್ತ ಒಂದಾಗಿ ಇರೋಣ ಎಂದರು.
ಸಭಾ ಅಧ್ಯಕ್ಷತೆಯನ್ನು ಎಸ್.ಎಫ್. ನಾಯ್ಕ್ ಕಾಯಗುಡ್ಡೆ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಜಿಲ್ಲಾ ರೈತ ಸಂಘ ಉಪಾಧ್ಯಕ್ಷ ಶಿವಾನಂದ ನಾಯ್ಕ್ ಇಟಗಿ, ಜಿಲ್ಲಾ ರೈತ ಸಂಘ ಸಂಚಾಲಕ ಜಿ.ಬಿ.ನಾಯ್ಕ್ ಬೇಡ್ಕಣಿ, ಜಿಲ್ಲಾ ರೈತ ಸಂಘ ಮಹಿಳಾ ಅಧ್ಯಕ್ಷೆ ಸುಮಂಗಲ ಕೆ. ನಾಯ್ಕ್, ಜಿಲ್ಲಾ ರೈತ ಸಂಘ ಸದಸ್ಯ ಧೀರನ ನಾಯ್ಕ್ ಮರಗುಂಡಿ, ಅರಣ್ಯ ಸಮಿತಿ ಹೋರಾಟಗಾರ ಎಂ.ಆರ್.ನಾಯ್ಕ್ ಕಂಡ್ರಾಜಿ, ಶಿರಸಿ ತಾಲೂಕ ರೈತ ಸಂಘ ಉಪಾಧ್ಯಕ್ಷ ಮಂಜುನಾಥ ಆರ್. ನಾಯ್ಕ್ ಕಾಯಗುಡ್ಡೆ, ರೈತ ಸಂಘ ಸಂಘಟನಾ ಕಾರ್ಯದರ್ಶಿ ರವೀಂದ್ರ ನಾಯ್ಕ್ ಗುಡ್ನಾಪುರ, ಗ್ರಾಮಾಭಿವೃದ್ಧಿ ಅಧ್ಯಕ್ಷ ಮಧುಕೇಶ್ವರ ಬಿ ನಾಯ್ಕ್ ಕಾಯಗುಡ್ಡೆ ಉಪಸ್ಥಿತರಿದ್ದರು.