ಯಲ್ಲಾಪುರ: ಪ್ರತಿಭಾ ವಿಕಾಸಕ್ಕಾಗಿ ಆಯೋಜಿಸುವ ವೇದಿಕೆಗಳಲ್ಲಿ ಮಕ್ಕಳು ಪ್ರಸ್ತುತಪಡಿಸುವ ವಿವಿಧ ಸಾಧನೆಗಳ ಕುರಿತು ಪಾಲಕರಿಗೆ ಅರಿವು ಮೂಡಿಸಲು ಶಿಕ್ಷಣ ಇಲಾಖೆಯ `ಕಲಿಕಾ ಕಾರಂಜಿ’ ನೆರವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಹೇಳಿದರು.
ಅವರು ಶುಕ್ರವಾರದಂದು ತಾಲೂಕಿನ ಮಂಚೀಕೇರಿಯ ಸಮಾಜಮಂದಿರದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಸಮೂಹ ಸಂಪನ್ಮೂಲ ಕೇಂದ್ರ ಮಂಚೀಕೇರಿ ಮತ್ತು ಮಳಲಗಾಂವ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಂಚೀಕೇರಿ ಮತ್ತು ಮಳಲಗಾಂವ ಕ್ಲಸ್ಟರ್‌ಗಳ ವ್ಯಾಪ್ತಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ `ಕಲಿಕಾ ಕಾರಂಜಿ’ ಕಾರ್ಯಕ್ರಮದಲ್ಲಿ ಮಳಲಗಾಂವ ಕ್ಲಸ್ಟರಿನ ವಿದ್ಯಾರ್ಥಿಗಳು ರಚಿಸಿದ `ಕಲಿಕಾ ಚಿಲುಮೆ ಹಸ್ತ ಪ್ರತಿಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಕಂಪ್ಲಿ ಗ್ರಾ.ಪಂ.ಅಧ್ಯಕ್ಷ ವಿನಾಯಕ ನಾಯ್ಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಾಸಣಗಿ ಗ್ರಾ.ಪಂ ಅಧ್ಯಕ್ಷ ಪುರಂದರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಮಳಲಗಾಂವ ಕ್ಲಸ್ಟರಿನ ವಿದ್ಯಾರ್ಥಿಗಳು ರಚಿಸಿದ `ಕಲಿಕಾ ಕಹಳೆ ಹಸ್ತ ಪ್ರತಿಯನ್ನು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರಿಕೊಪ್ಪ ಬಿಡುಗಡೆ ಮಾಡಿದರು. ಕ್ರೀಡಾ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆಮಾಡಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಐವರು ವಿದ್ಯಾರ್ಥಿನಿಯರನ್ನು ಇದೇ ಸಂದರ್ಭದಲ್ಲಿ ಪುರಸ್ಕರಿಸಲಾಯಿತು.
ಮಂಚಿಕೇರಿ ಮಾದರಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಜು ನಾಯ್ಕ ಮಾತನಾಡಿದರು. ವಿವಿಧ ಶಾಲೆಗಳ ಎಸ್‌ಡಿಎಂಸಿ ಅಧ್ಯಕ್ಷ ಶ್ರೀನಿವಾಸ ನಾಯ್ಕ ಚಿಕ್ಕೊತ್ತಿ, ನರಸಿಂಹ ಸಾತೊಡ್ಡಿ ಹುತ್ಕಂಡ, ಉದಯ ಪೂಜಾರಿ ಹಾಸಣಗಿ, ಶಾರದಾ ನಾಯ್ಕ ಸೋಮನಹಳ್ಳಿ, ಶಿಕ್ಷಕಿ ಜಯಶ್ರೀ ಕುರ್ಡೇಕರ್, ಬಿಆರ್‌ಪಿ ಸಂತೋಷ ಜಿಗಳೂರು, ಶಿಕ್ಷಣ ಸಂಯೋಜಕ ಪ್ರಶಾಂತ ಪಟಗಾರ, ಕುಂದರಗಿ ಸಿಆರ್‌ಪಿ ವಿಷ್ಣು ಭಟ್ಟ ಮತ್ತಿತರರು ವೇದಿಕೆಯಲ್ಲಿದ್ದರು. ಸಿಆರ್‌ಪಿ ಕೆ.ಆರ್.ನಾಯ್ಕ ಸ್ವಾಗತಿಸಿದರು. ಶಿರನಾಳ ಸ.ಹಿ.ಪ್ರಾ.ಶಾಲಾ ಶಿಕ್ಷಕ ಸತೀಶ ಶೆಟ್ಟಿ ನಿರ್ವಹಿಸಿದರು. ಹುತ್ಕಂಡ ಸ.ಹಿ.ಪ್ರಾ.ಶಾಲಾ ಶಿಕ್ಷಕ ಸತೀಶ ಶೆಟ್ಟಿ ವಂದಿಸಿದರು.