Slide
Slide
Slide
previous arrow
next arrow

ವಿಶ್ವ ಏಡ್ಸ್ ದಿನಾಚರಣೆ: ವಿಶೇಷ ಉಪನ್ಯಾಸ

300x250 AD

ಶಿರಸಿ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕ ಮತ್ತು ಐ.ಕ್ಯೂ.ಎ.ಸಿ. ಸಹಯೋಗದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಇಲ್ಲಿನ ಸರ್ಕಾರಿ ಆಸ್ಪತ್ರೆ ಆಪ್ತ ಸಮಾಲೋಚಕಿ ಗಿರಿಜಾ ಹೆಗಡೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಏಡ್ಸ್ ಜಾಗೃತೆ ಕುರಿತು ಮಾತನಾಡಿ, ಯುವಜನರಲ್ಲಿ ಹೆಚ್.ಐ.ವಿ. ಸೋಂಕು ಹೆಚ್ಚು ಹರಡುತ್ತದೆ. ಸರ್ಕಾರ ಅರಿವು ಮೂಡಿಸಿದರು ನಿರೀಕ್ಷೆ ಮಟ್ಟದಲ್ಲಿ ನಿವಾರಿಸಲು ಸಾಧ್ಯವಾಗುತ್ತಿಲ್ಲ ಅದಕ್ಕೆ ಮೂಲ ಕಾರಣ ಸೊಂಕಿತರ ಅಸಹಕಾರವಾಗಿದೆ ಇದನ್ನು ನಿವಾರಿಸಿ ಜಾಗೃತಿ ಮೂಡಿಸಿದರೆ ಅದನ್ನು ತಡೆಗಟ್ಟಲು ಸಾಧ್ಯ ಎಂದರು.
ವಿದ್ಯಾರ್ಥಿಗಳಲ್ಲಿನ ಹದಿಹರೆಯದ ವಯಸ್ಸಿನಲ್ಲಿ ಮನಸ್ಸಿನ ನಿಯಂತ್ರಣವಿಲ್ಲದೆ ಆಕರ್ಷಣೆಗೆ ಒಳಗಾಗಿ ಈ ಮಾರಕ ರೋಗಕ್ಕೆ ತುತ್ತಾಗಬಾರದು ಹೆಚ್.ಐ.ವಿ. ಸೋಂಕಿತರ ಅಸಹಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ಅದಕ್ಕೆ ಯುವ ಜನರೂ ಜಾಗೃತರಾಗಿ ಸಮಾಜದಲ್ಲಿ ಏಡ್ಸ್ ಬಗ್ಗೆ ಅರಿವು ಮೂಡಿಸುವುದು ಒಂದೇ ಮಾರ್ಗವಾಗಿದೆ. ಶಿರಸಿ ವಿಭಾಗದಲ್ಲಿ 997 ಹೆಚ್.ಐ.ವಿ. ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರೋಗಪೀಡಿತರಿಗೆ ಸರ್ಕಾರ ಬಿ.ಪಿ.ಎಲ್, ಧನಶ್ರೀ, ಆಶ್ರಯ ಯೋಜನೆ ಹೀಗೆ ಹಲವಾರು ಸೌಲಭ್ಯ ನೀಡಿ ಅದರ ನಿಯಂತ್ರಣಕ್ಕೆ ಕ್ರಮವಹಿಸಿದೆ. ಗರ್ಭಿಣಿ ಸ್ತ್ರೀಯರು, ವಿವಾಹಿತ ಪುರುಷರು ಹೆಚ್.ಐ.ವಿ. ಪರೀಕ್ಷೆ ಮಾಡಿಸುವುದು ಕಡ್ಡಾಯವಾಗಿದೆ. ಪ್ರತಿ ವ್ಯಕ್ತಿಯಲ್ಲೂ ಹೆಚ್.ಐ.ವಿ. ಪರೀಕ್ಷೆ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ರೋಗ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ದಾಕ್ಷಾಯಣಿ ಜಿ.ಹೆಗಡೆ ಮಾತನಾಡಿ, ಇಂದಿನ ದಿನಮಾನದಲ್ಲಿ ಏಡ್ಸ್ ಜಾಗೃತಿ ಅಗತ್ಯವಾಗಿದೆ. ಶಿಸ್ತಿನ ಜೀವನ ಕ್ರಮ ಯುವಜನರಲ್ಲಿ ಮೂಡಿಸಿದಾಗ ಏಡ್ಸ್ ನಿಯಂತ್ರಣ ಸಾಧ್ಯ. ಹದಿಹರಯದ ಆಸೆಗೆ ಬಲಿಯಾಗದೆ ಮನಸ್ಸಿನ ಏಕಾಗ್ರತೆ, ಬದುಕಿನ ಮೌಲ್ಯಗಳನ್ನು ಬೆಳೆಸಿಕೊಂಡು ಏಡ್ಸ್ ನಂತಹ ಭಯಾನಕ ರೋಗದಿಂದ ದೂರವಿರಲು ಸಾಧ್ಯ ಏಡ್ಸ್ ರೋಗದ ಜಾಗೃತಿ ವಿದ್ಯಾರ್ಥಿಗಳಿಂದ ಆರಂಭವಾಗಿ ಸಮಾಜದ ಬದಲಾವಣೆಗೆ ಶಕ್ತಿಯಾಗಿ ಮಾರ್ಪಡಬೇಕು ಯುವ ಜನತೆ ಮನಸ್ಸು ಮಾಡಿದರೆ ಈ ಪಿಡುಗನ್ನು ನಿವಾರಿಸಲು ಸಾಧ್ಯ ಎಂದರು.
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ.ವಸಂತ ಎಸ್.ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕ ವಿಶ್ವಲಿಂಗ ಪ್ರಸಾದ ಬಿ. ಸ್ವಾಗತಿಸಿದರು. ಸಿಂಧು ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪೂಜಾ ಪಿ.ನಾಯ್ಕ ನಿರೂಪಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ.ಸತೀಶ ಎನ್.ನಾಯ್ಕ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top