Slide
Slide
Slide
previous arrow
next arrow

ದೃಢವಾದ ಇಚ್ಛಾಶಕ್ತಿಯೇ ಯಶಸ್ಸಿಗೆ ದಾರಿ: ಕಪ್ಪೆಕೆರೆ ಸುಬ್ರಾಯ ಭಾಗವತ

300x250 AD

ಸಿದ್ದಾಪುರ: ಯಾವುದೇ ರಂಗದಲ್ಲೇ ಆದರೂ ಸದಾ ವಿಭಿನ್ನ ಸವಾಲುಗಳು ಇದ್ದೇ ಇರುತ್ತವೆ. ಆದರೆ ನಮ್ಮ ಕಾರ್ಯಕ್ಷೇತ್ರಗಳಲ್ಲಿ ಬಲವಾದ ಇಚ್ಛಾಶಕ್ತಿಯಿಂದ ಕೆಲಸ ಮಾಡಿದಾಗ ಅದು ಖಂಡಿತಾ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ ಎಂದು ಹಿರಿಯ ಯಕ್ಷಗಾನ ಭಾಗವತ ಕಪ್ಪೆಕೆರೆ ಸುಬ್ರಾಯ ಭಾಗವತ ಹೇಳಿದರು.
ಅವರು ತಾಲೂಕಿನ ಓಜಗಾರದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದಲ್ಲಿ ಹೊಸಗದ್ದೆ ಸರಸ್ವತಿ ಕಲಾ ಟ್ರಸ್ಟ್ ಹಿರಿಯರ ನೆನಪು ಮಾಲಿಕೆಯಲ್ಲಿ ನಡೆಸಿದ ದಿ.ಗೋಪಾಲ ಹೆಗಡೆ ಓಜಗಾರ ಅವರ ಸಂಸ್ಮರಣೆ ಹಾಗೂ ತಾಳಮದ್ದಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಿ. ಗೋಪಾಲ ಹೆಗಡೆಯವರು ಬಡತನ ಸಹಿತ ಹಲವಾರು ಕಷ್ಟ ಅನುಭವಿಸಿದವರು. ಆದರೆ ಅವರ ಬಲವಾದ ಇಚ್ಛಾಶಕ್ತಿ ಹಾಗೂ ಹೃದಯ ಶ್ರೀಮಂತಿಕೆಯಿಂದಾಗಿ ಯಕ್ಷಗಾನ, ಕೃಷಿ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಅವರಿಗೆ ಸಮಾಜದ ಅಪಾರವಾದ ಗೌರವಕ್ಕೆ ಪಾತ್ರರಾಗಿದ್ದರು. ಅವರ ಕುಟುಂಬದ ಇಂದಿನ ಪೀಳಿಗೆಯವರೂ ಯಕ್ಷಗಾನ ಕ್ಷೇತ್ರದಲ್ಲಿರುವುದಕ್ಕೆ ದಿವಂಗತರ ಕೊಡುಗೆ ಹಿರಿದು ಎಂದು ಅವರು ಸ್ಮರಿಸಿದರು.
ತಾಳಮದ್ದಲೆ ಅರ್ಥದಾರಿ ದಿನೇಶ ಹೆಗಡೆ ಹಳ್ಳೀಬೈಲ ಸಂಸ್ಮರಣಾ ಭಾಷಣವನ್ನು ಉತ್ತಮವಾಗಿ ನಡೆಸಿಕೊಟ್ಟರು. ಹಿರಿಯ ಕಲಾವಿದ ಎಮ್.ಪಿ.ಭಟ್ ಹೆಮ್ಮನಬೈಲು ಹಾಗೂ ಎನ್.ಜಿ.ಹೆಗಡೆ ಬೊಗರಿಮಕ್ಕಿಯವರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಸದಸ್ಯ ಹಾಗೂ ಕಲಾವಿದ ದಿವಾಕರ ಹೆಗಡೆ ಕೆರೆಹೊಂಡ ಮಾತನಾಡಿ, ಈ ಹಿರಿಯರ ನೆನಪು ಕಾರ್ಯಕ್ರಮದ ಉದ್ದೇಶವನ್ನು ವಿವರಿಸುತ್ತಾ ಯಾವುದೇ ಕಲಾ ಪ್ರಕಾರವಾದರೂ ತಲೆಮಾರುಗಳವರೆಗೆ ಮುಂದುವರೆಯುವಲ್ಲಿ ಕಲಾವಿದರಷ್ಟೇ ಸಂಘಟಕರೂ ಮುಖ್ಯವಾಗಿರುತ್ತಾರೆ. ನಮಗಿಂತಲೂ ಹಿಂದೆ ಕಲಾಸೇವೆಗೈದ ಹಿರಿಯ ಕಲಾವಿದರು ಹಾಗೂ ಸಂಘಟಕರನ್ನು ನೆನಪಿಸಿಕೊಳ್ಳುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರೆಯಲಿ ಎಂದರು.
ಸರಸ್ವತಿ ಕಲಾ ಟ್ರಸ್ಟ್ ನ ಪ್ರಸನ್ನ ಹೆಗಡೆ ಸ್ವಾಗತಿಸಿದರು. ಕಲಾವಿದ ವೆಂಕಟೇಶ ಬೊಗರಿಮಕ್ಕಿ ನಿರ್ವಹಿಸಿದರು. ನಂತರದಲ್ಲಿ ತ್ರಿಶಂಕು ಚರಿತ್ರೆ ತಾಳಮದ್ದಲೆ ನಡೆಯಿತು.

300x250 AD
Share This
300x250 AD
300x250 AD
300x250 AD
Back to top