Slide
Slide
Slide
previous arrow
next arrow

ಮೂವರು ಅಡಿಕೆ ಕಳ್ಳರ ಬಂಧನ

300x250 AD

ಹೊನ್ನಾವರ: ತಾಲೂಕಿನ ಸರಳಗಿ ಪ್ಲಾಟ್‌ನಲ್ಲಿರುವ ಅಂಗಡಿಯ ಮುಂದಿನ ಬಾಗಿಲಕ್ಕೆ ಹಾಕಿದ್ದ ಬೀಗವನ್ನು ಮೀಟಿ ಒಳಹೊಕ್ಕಿ ಅಂಗಡಿಯೊಳಗೆ ಇಟ್ಟಿದ್ದ ಸುಮಾರು 2 ಲಕ್ಷ ರೂ. ಬೆಲೆಯ 5 ಕ್ವಿಂಟಲ್ ಅಡಿಕೆ ತುಂಬಿದ್ದ 10 ಚೀಲ ಕಳವು ಮಾಡಿದ ಪ್ರಕರಣವನ್ನು ಇಲ್ಲಿನ ಪೊಲೀಸರು ಭೇದಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ಅಡಿಕೆ ಕಳವು ಮಾಡಿಕೊಂಡು ಹೋಗಿರುವ ಕಳ್ಳರನ್ನು ಹಾಗೂ ಕಳ್ಳತನವಾದ ಅಡಿಕೆಯನ್ನು ಪತ್ತೆ ಮಾಡಿ ಕಾನೂನಿನಂತೆ ಕ್ರಮ ಜರುಗಿಸ ಬೇಕು ಎಂದು ಸರಳಗಿಯ ಅಬ್ದುಲ್ ರವೂಪ್ ಶಬ್ಬರ ಸಾಬ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಆಪಾಧಿತರ ಪತ್ತೆ ಕುರಿತು ವಿಶೇಷ ತಂಡವನ್ನು ರಚಿಸಿ ಮಾಹಿತಿ ಆಧಾರದಲ್ಲಿ 3 ಜನ ಆಪಾದಿತರನ್ನು ಬಂಧಿಸಿ ಅವರಿಂದ ಕಳುವಾಗಿದ್ದ ಎರಡು ಲಕ್ಷ ರೂಪಾಯಿ ಮೌಲ್ಯದ 05 ಕ್ವಿಂಟಾಲ್ ಅಡಿಕೆಯನ್ನು ಹಾಗೂ ಆಪಾದಿತರು ಕಳುವು ಮಾಡಲು ಉಪಯೋಗಿಸಿದ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಓಮಿನಿ ವಾಹನ ಜಪ್ತುಪಡಿಸಿಕೊಂಡು, ಆಪಾದಿತರಾದ ಹಳದಿಪುರದ ಇನಾಯತುಲ್ಲಾ ಅಬ್ದುಲ್ ಹಸನ್, ಮೊಹ್ಮದ್ ಹುಸೇನ್ ಅಬ್ದುಲ್ ರವೂಫ್ ಖಾನ್, ಮೊಹಮ್ಮದ್ ಆನಾಸ್ ಮೊಹ್ಮದ್ ಗೌಸ್ ಖಾನ್ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳ, ಸಿಬ್ಬಂದಿಗಳ ಕ್ಷಿಪ್ರ ಕಾರ್ಯಾಚರಣೆಯಿಂದ ಅಡಿಕೆ ಕದ್ದ ಆರೋಪಿಗಳನ್ನು ಹಿಡಿಯಲಾಗಿದ್ದು. ಈ ಪ್ರಕರಣದ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top