ಕಾರವಾರ: ಸದಾಶಿವಗಡ ಐಗಲ್ ಮಾರ್ಷಲ್ ಆರ್ಟ್ಸ್ ಇಂಟರ್‌ನ್ಯಾಶನಲ್ ಕರಾಟೆ-ಡು- ಇಂಡಿಯಾ ಇನ್ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳು ಸ್ಪರ್ಧೆ 3.0 1ನೇ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಾರೆ. ಇದನ್ನು ಕೆನ್-ಇ-ಮಾಬೂನಿ-ಶಿತೋ-ರ್ಯು-ಕರಾಟೆ ಸ್ಕೂಲ್ ಆಫ್ ಇಂಡಿಯಾ, ಉಡುಪಿ ಇತ್ತೀಚಿಗೆ ಆಯೋಜಿಸಿತ್ತು.
ಸದಾಶಿವಗಡದ ಬ್ಲಾಕ್ ಬೆಲ್ಟ್ 7ನೇ ಡ್ಯಾನ್‌ನ ಶಿಹಾನ್ ಸುನಿಲ್ ವಿ ಐಗಳ ಅವರ ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು ಪದಕ ಮತ್ತು ಟ್ರೋಫಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಸೆನ್ಸಾಯಿ ಸಮೀಕ್ಷಾ ಪ್ರಕಾಶ್ ರಾಣೆ 16 ವರ್ಷ, ಮಂಗಳೂರಿನ ಮಹೇಶ್ ಪಿಯು ಕಾಲೇಜಿನಲ್ಲಿ ಓದುತ್ತಿರುವ ಬ್ಲ್ಯಾಕ್ ಬೆಲ್ಟ್ ವಿಭಾಗದಲ್ಲಿ ಕಟ ಮತ್ತು ಕುಮಿಟೆ ಎರಡರಲ್ಲೂ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ವೇದಾಂತ್ ಗುರುಪ್ರಸಾದ್ ಸಾವಂತ್ ಪ್ರಾಯ 8, ಬ್ರೌನ್ ಬೆಲ್ಟ್ ಕಲಿಯುತ್ತಿರುವ 3ನೇ ತರಗತಿಯಲ್ಲಿ ಓದುತ್ತಿರುವ ನೇವಿ ಚಿಲ್ಡ್ರನ್ ಸ್ಕೂಲ್ ವಿದ್ಯಾರ್ಥಿ ಕಟಾ ಮತ್ತು ಕುಮಿಟೆಯಲ್ಲಿ 2ನೇ ಸ್ಥಾನ ಪಡೆದಿರುತ್ತಾರೆ. ಸಿದ್ಧಾಂತ್ ಗುರುಪ್ರಸಾದ್ ಸಾವಂತ್ ಪ್ರಾಯ 8, 3ನೇ ತರಗತಿಯಲ್ಲಿ ಓದುತ್ತಿರುವ ನೇವಿ ಚಿಲ್ಡ್ರನ್ ಸ್ಕೂಲ್ ವಿದ್ಯಾರ್ಥಿ ಬ್ರೌನ್ ಬೆಲ್ಟ್ ಕಲಿಯುತ್ತಿದ್ದು ಕಟಾ ಮತ್ತು ಕುಮಿಟೆಯಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ಮಯೂರೇಶ್ ಎಂ. ಜಥರ್ ವಯಸ್ಸು 11, ಅಮೃತ ವಿದ್ಯಾಲಯದ ಸ್ಕೂಲ್ ವಿದ್ಯಾರ್ಥಿ ಬ್ರೌನ್ ಬೆಲ್ಟ್ ಕಲಿಯುತ್ತಿದ್ದು, ಕಟಾ ಮತ್ತು ಕುಮಿಟೆಯಲ್ಲಿ 3 ನೇ ಸ್ಥಾನವನ್ನು ಪಡೆದಿದ್ದಾರೆ. ವಿವಾನ್ ಚಂದನ್ ಸಾವಂತ್ ವಯಸ್ಸು 12, ಅಮೃತ ವಿದ್ಯಾಲಯದಲ್ಲಿ ಓದುತ್ತಿರುವ ಗ್ರೀನ್ ಬೆಲ್ಟ್ ಕಲಿಯುತ್ತಿದ್ದು ಕಟಾ ಮತ್ತು ಕುಮಿಟೆಯಲ್ಲಿ 3ನೇ ಸ್ಥಾನವನ್ನು ಪಡೆದಿದ್ದಾರೆ.
ಸದಾಶಿವಗಡದ ಬ್ಲಾಕ್ ಬೆಲ್ಟ್ 7ನೇ ಡ್ಯಾನ್ ಶಿಹಾನ್ ಸುನಿಲ್ ವಿ ಐಗಳ ಅವರ ಶಿಷ್ಯರು ತಂದೆ ತಾಯಿ ಹಾಗೂ ಕಾರವಾರಕ್ಕೆ ಹೆಮ್ಮೆ ತಂದಿದ್ದಾರೆ. ಗೌರವವನ್ನು ತಂದು ಕೊಟ್ಟಿರುತ್ತಾರೆ. ಎಲ್ಲ ವಿದ್ಯಾರ್ಥಿಗಳೆಗೆ ಶುಭವಾಗಲಿ ಹಾಗೂ ಇನ್ನು ಹೆಚ್ಚು ಹೆಚ್ಚು ಮಕ್ಕಳು ಈ ಇನ್ಸ್ಟಿಟ್ಯುಟ್‌ನ ಪ್ರಯೋಜನವನ್ನು ಪಡೆಯಲಿ ಎಂದು ಗಣ್ಯರು ಶುಭ ಹಾರೈಸಿದ್ದಾರೆ.