ಕುಮಟಾ: ಕುಮಟಾ ಮೂಲದ ಲೇಖಕ, ತಾಳಮದ್ದಲೆಯ ಪ್ರಸಿದ್ಧ ಅರ್ಥದಾರಿ, ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ ಅವರು ಬರೆದ ‘ಆಯುರ್ವೇದ ಯುಗಬಂಧು ಡಾ. ಗಿರಿಧರ ಕಜೆ’ ಕೃತಿ ಬಿಡುಗಡೆ ಉಡುಪಿ ಜಿಲ್ಲೆಯ ಕಾಂತಾವರದಲ್ಲಿ ಮಂಗಳವಾರ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಞ ಪುನರೂರು ಅಧ್ಯಕ್ಷತೆಯಲ್ಲಿ ನಡೆದ ಕಾಂತಾವರ ಉತ್ಸವದಲ್ಲಿ ಉಡುಪಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಪ್ರೋ.ಬಿ.ಜಗದೀಶ ಶೆಟ್ಟಿ ಕೃತಿ ಅನಾವರಣಗೊಳಿಸಿದರು. ಅತಿಥಿಗಳಾಗಿ ಮೈಸೂರು ವಿವಿಯ ಅಣು ವಿಜ್ಞಾನ ವಿಭಾಗದ ಮುಖ್ಯಸ್ಥ ಗೋಪಾಲ ಮರಾಠೆ ಕೆ. ಉಪಸ್ಥಿತರಿದ್ದರು.
ಈ ವೇಳೆ ಸಾಧಕ ಗಿರಿಧರ ಕಜೆ ಹಾಗೂ ಕೃತಿಕಾರ ಮೋಹನ ಭಾಸ್ಕರ ಹೆಗಡೆ ಅವರನ್ನು ಕನ್ನಡ ಸಂಘದಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು.