Slide
Slide
Slide
previous arrow
next arrow

ASDCಸೊಸೈಟಿ ಪೆಟ್ರೋಲ್ ಬಂಕ್‌ನಲ್ಲಿ ಗ್ರೀನ್ ಡಿಸೈಲ್ ಸೌಲಭ್ಯಕ್ಕೆ

300x250 AD

ಶಿರಸಿ: ನಗರದ ಅಗ್ರಿಕಲ್ಚರಲ್ ಸರ್ವಿಸ್ ಮತ್ತು ಡೆವಲಪ್‌ಮೆಂಟ್ ಕೋ -ಆಪರೇಟಿವ್ ಸೊಸೈಟಿಯ ಪೆಟ್ರೋಲ್ ಬಂಕ್‌ನಲ್ಲಿ ಗ್ರೀನ್ ಡಿಸೈಲ್ ಸೌಲಭ್ಯಕ್ಕೆ ಎಸಿಎಫ್ ಡಿ.ರಘು ರಿಬ್ಬನ್ ಕತ್ತರಿಸುವ ಮೂಲಕ ಶುಕ್ರವಾರ ಚಾಲನೆ ನೀಡಿದರು.
ಡೆವಲಪ್‌ಮೆಂಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಭಾಸ್ಕರ್ ಹೆಗಡೆ ಕಾಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ,ಇದು ಇಂಡಿಯನ್ ಅಯಿಲ್‌ನ ಸತತ ಪರಿಶ್ರಮದ ಆವಿಷ್ಕಾರವಾಗಿದೆ. ಗ್ರಿನ್ ಡಿಸೈಲ್ ಪರಿಸರ ಸ್ನೇಹಿ ಇಂಧನವಾಗಿದ್ದು ಇಂಜೀನ್‌ನ ಸಾಮರ್ಥ್ಯ ವೃದ್ಧಿಸುವುದಲ್ಲದೇ ಪೂರ್ಣ ಪ್ರಮಾಣದ ಶಕ್ತಿಯನ್ನು ನೀಡುತ್ತದೆ. ಇದರಿಂದ ಮಾಲಿನ್ಯ, ಹೊಗೆ ಕಡಿಮೆಯಾಗುತ್ತದೆ. ದರ 3 ಜಾಸ್ತಿ ಎನಿಸಿದರೂ ಮೈಲೆಜ್ ಹೆಚ್ಚಿರುತ್ತದೆ ಎಂದರು.
ವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ ಹೆಬ್ಬಾರ, ಉಷಾ ಕಬ್ಬೇರ, ಸೊಸೈಟಿ ನಿರ್ದೇಶಕರಾದ ಐ.ಎಂ.ಹೆಗಡೆ, ಜಿ.ವಿ.ಜೋಶಿ ಕೊಪ್ಪಲತೋಟ, ಉಮಾ ಆರ್.ನಾಯ್ಕ, ಮುಖ್ಯ ಕಾರ್ಯನಿರ್ವಾಹಕ ಗೋಪಾಲ ಹೆಗಡೆ, ವಿಭಾಗದ ಮುಖ್ಯಸ್ಥ ಶ್ರೀಧರ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top