ಸಿದ್ಧಾಪುರ: ಎನ್. ಬಿ. ಹೆಗಡೆ ಮತ್ತಿಹಳ್ಳಿ ಸನ್ಮಾನ ಸಮಿತಿ ನಾಣಿಕಟ್ಟಾ ಮತ್ತು ಎನ್. ಬಿ. ಹೆಗಡೆ ಅಭಿಮಾನಿ ಬಳಗ ಇವರ ಸಂಯೋಜನೆಯಲ್ಲಿ ಸೇವಾಭಿನಂದನ ಕಾರ್ಯಕ್ರಮದ ಪ್ರಯುಕ್ತ ಯಕ್ಷಗಾನದ ಗಜಗಟ್ಟಿ ಮೇಳ ಎನಿಸಿಕೊಂಡ ಸಾಲಿಗ್ರಾಮ ಮೇಳದ ಪ್ರಧಾನ ಭಾಗವತರಾದ ರಾಮಕೃಷ್ಣ ಹೆಗಡೆ ಹಿಲ್ಲೂರು ಅವರ “ಹಿಲ್ಲೂರು ಯಕ್ಷಮಿತ್ರ ಬಳಗ” ಇವರಿಂದ ಗಾನ-ನೃತ್ಯ ವೈಭವ 13 ಮಂಗಳವಾರ ಮುಸ್ಸಂಜೆ 5:30 ತ್ಯಾಗಲಿ ಸೊಸೈಟಿ ಆವಾರದಲ್ಲಿ ನಡೆಯಲಿದೆ.
ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಅನಿರುದ್ಧ ಹೆಗಡೆ ವರ್ಗಾಸರ, ಪ್ರಸನ್ನ ಹೆಗ್ಗಾರ್ ಮುಮ್ಮೇಳದಲ್ಲಿ ಶಂಕರ ಹೆಗಡೆ ನೀಳ್ಕೊಡು, ಸನ್ಮಯ ಭಟ್ಟ ಮಲವಳ್ಳಿ ಭಾಗವಹಿಸಲಿದ್ದಾರೆ.