ಶಿರಸಿ: ಕಾನಸೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಿಕ್ಷಣ ಪ್ರೇಮಿ ಉಪೇಂದ್ರ ಪೈ ಉದ್ಘಾಟಿಸಿದರು, ಸರ್ಕಾರಿ ಶಾಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಯನ್ನು ದತ್ತು ಸ್ವೀಕರಿಸಿ ಶಾಲೆಯ ಸರ್ವಾಂಗೀಣ ಅಭಿವೃದ್ದಿಗೆ ಪಡಿಸಲು ಮನಸ್ಸಿಗೆ ತುಂಬಾ ನೆಮ್ಮದಿ ಇದೆ ಎಂದು ಶುಭಹಾರೈಸಿದರು, ಈ ಸಂದರ್ಭದಲ್ಲಿ ಶಾಲಾ ಅಬಿವೃದ್ಧಿ ಸಮಿತಿ, ಪಾಲಕರು ಶಿಕ್ಷಕರು ಉಪೇಂದ್ರ ಪೈ ಅವರನ್ನು ಸನ್ಮಾನಿಸಿ ಗೌರವಿಸಿದರು, ಪೈ ಅವರ ನಿರಂತರ ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಯನ್ನು ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾನಸೂರು ಹಾಗೂ ಗೋಳಿಮಕ್ಕಿ ಶಾಲೆ ದತ್ತು ಸ್ವೀಕರಿಸಿ ಶಾಲಾ ಕೊಠಡಿಗೆ ಟೈಲ್ಸ್ ಗಳನ್ನು ಅಳವಡಿಸಿ ಅಭಿವೃದ್ಧಿ ಪಡಿಸುತ್ತಿರುವುದನ್ನು ಈ ಸಂದರ್ಭದಲ್ಲಿ ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸುಭಾಸ ನಾಯ್ಕ ಅವರು ಮಾತನಾಡಿ ಉಪೇಂದ್ರ ಪೈ ಅವರ ಜನಪರ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಕ್ಕಳ ಪ್ರತಿಭೆ ಅನಾವರಣ ವಾಗುವುದ್ದಕ್ಕೆ ವಿಶೇಷ ವೇದಿಕೆಯಾಗಿದ್ದು ಮಕ್ಕಳು ಈ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆ ಬೆಳಗುವಂತಾಗಲಿ ಎಂದು ಶುಭ ಹಾರೈಸಿದರು.
ಶಾಲಾ ಅಭಿವೃದ್ಧಿ ಅಧ್ಯಕ್ಷ ರಾಘವೇಂದ್ರ ಗೋವಿಂದ್ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು . ಈ ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಕಮಿಟಿ ಎಲ್ಲಾ ಅಧ್ಯಕ್ಷರು, ಸದಸ್ಯರು ಶಿಕ್ಷಕರು, ಗ್ರಾಂ ಪಂಚಾಯತ್ ಸದಸ್ಯರು, ಮಕ್ಕಳು, ಪಾಲಕರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.