Slide
Slide
Slide
previous arrow
next arrow

ಹೆಗಡೆಕಟ್ಟಾದಲ್ಲಿ ಪ್ರತಿಭಾಕಾರಂಜಿ, ವೀಣಾ ಭಟ್’ಗೆ ಸನ್ಮಾನ

300x250 AD

ಶಿರಸಿ: ಸಂಪಖಂಡ ವಲಯ ಮಟ್ಟದ ಪ್ರೌಢಶಾಲಾ ಪ್ರತಿಭಾಕಾರಂಜಿ ಕಾರ್ಯಕ್ರಮವು ಸೆ. 6 ರಂದು ಹೆಗಡೆಕಟ್ಟಾದ ಶ್ರೀ ಗಜಾನನ ಸೆಕೆಂಡರಿ ಸ್ಕೂಲಿನಲ್ಲಿ ನೆರವೇರಿತು.

ಗ್ರಾಮ ಪಂಚಾಯತ ಅಧ್ಯಕ್ಷೆ ವೀಣಾ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀಗಜಾನನ ಸೆಕೆಂಡರಿ ಸ್ಕೂಲ್ ನ ಇಂಗ್ಲೀಷ್ ಶಿಕ್ಷಕಿ ಶ್ರೀಮತಿ ವೀಣಾ ಭಟ್ಟ ಅವರನ್ನು ಸೆಕೆಂಡರಿ ಸ್ಕೂಲ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರು ಮತ್ತು ಸದಸ್ಯರು ಸನ್ಮಾನಿಸಿದರು.

ವಿದ್ಯಾರ್ಥಿಗಳಲ್ಲಿರುವ ಸಾಂಸ್ಕೃತಿಕ ಪ್ರತಿಭೆಗಳನ್ನು ಹೊರ ಸೆಳೆಯುವಲ್ಲಿ ಶಿಕ್ಷಕಿ ವೀಣಾ ಭಟ್ಟರ ಪ್ರಯತ್ನ ಪ್ರಮುಖವಾಗಿದೆ ಅದರ ಫಲವಾಗಿ ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದಿದೆ ಅವರಿಂದ ಶಾಲೆಯ ಹೆಸರು ಮತ್ತಷ್ಟು ಎತ್ತರಕ್ಕೆ ಏರುವಂತಾಗಲಿ ಎಂದು ಹಾರೈಸಿದರು. ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ಪ್ರೌಢಶಾಲೆಗಳ ಸ್ಪರ್ಧಾಳುಗಳು ಸ್ಪರ್ಧಾ ಮನೋಭಾವದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು. 

300x250 AD

ಶ್ರೀ ಗಜಾನನ ಪ್ರೌಢಶಾಲೆಯ ಅಧ್ಯಕ್ಷ ಎಂಆರ್ ಹೆಗಡೆ ಹೊನ್ನೇಕಟ್ಟಾ ಮಾತನಾಡಿದರು. ಕ್ರಮವಾಗಿ ಹೆಗಡೆಕಟ್ಟಾ ಪ್ರೌಢಶಾಲೆ 11, ಗೋಳಿ ಪ್ರೌಢಶಾಲೆ 6, ದೇವನಳ್ಳಿ ಪ್ರೌಢಶಾಲೆ2, ಸಂಪಖಂಡ ಪ್ರೌಢಶಾಲೆ 1 ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡವು. ಸಂಸ್ಥೆಯ ಸದಸ್ಯರಾದ ವಿ.ಪಿ.ಹೆಗಡೆ.ಹನುಮಂತಿ ಉಪಾಧ್ಯಕ್ಷರಾದ ವನಿತಾ ಹೆಗಡೆ ಶಾಂತಿಧಾಮ ಮುಖ್ಯಾಧ್ಯಾಪಕರು ಹಾಗೂ ಮಹನೀಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top