ಅಂಕೋಲಾ : ಎಲ್ಲರೊಂದಿಗೆ ಅನ್ನೋನ್ಯತೆಯಿಂದ ಇರುತ್ತಿದ್ದ, ಜನ ಸಾಮಾನ್ಯರ ನೆಚ್ಚಿನ ಸುರೇಶಣ್ಣನಾಗಿ, ಪಾನಪಟ್ಟಿ ಸುರೇಶ ಎಂದೇ ಪ್ರಚಲಿತರಿದ್ದ ಮೊನ್ನೆಯಷ್ಟೇ ತಮ್ಮ ಮನೆಯಲ್ಲಿ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ್ದ ಸುರೇಶ ನಾಯ್ಕ ಸೋಮವಾರ ಮಧ್ಯಾಹ್ನ ಕಾಕರಮಠದ ಸ್ವಗೃಹದಲ್ಲಿ ನಿಧನರಾದರು.
ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾದ ಅನೇಕ ಧಾರ್ಮಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಇವರು ತಮ್ಮ ಸ್ನೇಹ ಸ್ವಭಾವ ಹಾಗೂ ಜನರ ಜೊತೆಗೆ ಆತ್ಮೀಯ ಒಡನಾಡಿಗಳಾಗಿದ್ದರು. ಇವರು ಪಟ್ಟಣದಲ್ಲಿ ಪಾನ್ ಶಾಪ್ ಇಟ್ಟುಕೊಂಡಿದ್ದರು. ಸುರೇಶ ನಾಯ್ಕರ ಅಗಲಿಕೆಗೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ
ಕಳೆದ 35 ವರ್ಷ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಸತತವಾಗಿ ಶಬರಿಮಲೆ ಯಾತ್ರೆ ಕೈಗೊಂಡು ಹಿರಿಯ ವೃತಾಧಾರಿಯಾಗಿ ಕಿರಿಯ ಮಾಲಾಧಾರಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಂಕೋಲಾ ಬಂಡಿಹಬ್ಬದ ಸಂದರ್ಭದಲ್ಲಿ ಬಲಿ ಮಕ್ಕಳ ಹರಕೆ ಕಾರ್ಯಕ್ರಮದ ನೇತೃತ್ವ ವಹಿಸಿತ್ತಿದ್ದ ಇವರು ತಾಲೂಕಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಮುಂಚೂಣಿಯಲ್ಲಿದ್ದು ಶ್ರೀ ದೇವರ ಸೇವಾ ಕಾರ್ಯಕ್ಕೆ ಸಹಕರಿಸುತ್ತಿದ್ದರು. ಸ್ಥಳೀಯರ ಸಹಕಾರದಲ್ಲಿ ಕೆಲ ಅನಾಥ ಶವಗಳ ಸಂಸ್ಕಾರ ನೆರವೇರಿಸುವ ಮೂಲಕ ಮಾನವೀಯ ಸಾಮಾಜಿಕ ಕಳಕಳಿ ತೋರಿ ಮಾದರಿಯಾಗಿದ್ದಾರೆ.