ಶಿರಸಿ: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ವೈದ್ಯಕೀಯ ಪ್ರತಿನಿಧಿಗಳ ಸಂಘವು ಆ.13,ಶನಿವಾರದಂದು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅಬ್ರಿಮನೆಯ ಹತ್ತಿರ ಇರುವ “ಸುಯೋಗ ಧಾಮ” ಆಶ್ರಯಕ್ಕೆ ಅತ್ಯಾವಶ್ಯಕವಾಗಿ ಬೇಕಾಗಿದ್ದ ಖುರ್ಚಿಗಳನ್ನು ನೀಡುವುದರ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿತು.
ಸಂಘದ ಅಧ್ಯಕ್ಷರಾದ ಸಂತೋಷ್ ನಾಯ್ಕರವರು ಈ ಕಾರ್ಯಕ್ಕೆ ತನು, ಮನ, ಧನ ನೀಡಿ ಸಹಕರಿಸಿದವರಿಗೆ ಧನ್ಯವಾದವನ್ನು ಸಲ್ಲಿಸಿದರು ಮತ್ತು ಕಾರ್ಯಒತ್ತಡದ ನಿಮಿತ್ತ ಭಾಗವಹಿಸಲು ಆಗದೆ ಇರವ ಸದಸ್ಯರ ಸಹಕಾರವನ್ನು ಈ ಸಂದರ್ಭದಲ್ಲಿ ಸ್ಮರಿಸಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಸುಯೋಗ ಧಾಮದ ಮುಖ್ಯಸ್ಥೆಯಾದ ಶ್ರೀಮತಿ ಲತಿಕಾ ಮಾತನಾಡಿ, ನಮ್ಮ ಧಾಮಕ್ಕೆ ಅಗತ್ಯ ವಾದ ಖುರ್ಚಿಗಳನ್ನು ನೀಡಿದ್ದಕ್ಕೆ ಧನ್ಯವಾದವನ್ನು ತಿಳಿಸಿದರು ಮತ್ತು ಸಂಘದ ಕಾರ್ಯಚಟುವಟಿಕಗಳ ಬಗ್ಗೆ ತಮ್ಮ ಮೆಚ್ಚುಗೆಯನ್ನು ಸೂಚಿಸಿದರು.
ಈ ಕಾರ್ಯಕ್ರಮದಲ್ಲಿ ಗೌರವ ಅಧ್ಯಕ್ಷ ಸದಾನಂದ ನಾಯ್ಕ್, ಪ್ರ. ಕಾರ್ಯದರ್ಶಿ ಪ್ರಶಾಂತ ನಾಯ್ಕ್, ಉಪಾಧ್ಯಕ್ಷ ವಿವೇಕ್ ಪೂಜಾರಿ, ಹೇಮಂತ ಮಡಿವಾಳ, ಪ್ರದೀಪ್ ಕಬ್ಬೆರ ಮತ್ತು ಪ್ರಮುಖರಾದ ವಿ ಎಸ್ ಹೆಗಡೆ, ಶರತ್ ಮೇಸ್ತ, ನಾಗರಾಜ ಭಟ್ (ABM), ಅನಿಶ್ (RBM), ಚಂದ್ರು ಮಾದನಗೇರಿ, ಪ್ರವೀಣ್ ಮತ್ತು ಗುರುದಾಸ ಶಾನಭಾಗ ಉಪಸ್ಥಿತರಿದ್ದರು.