Slide
Slide
Slide
previous arrow
next arrow

ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ: ಹಲವು ವಿಷಯಗಳ ಕುರಿತು ಚರ್ಚೆ

300x250 AD

ಯಲ್ಲಾಪುರ: ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಸಾಮಾನ್ಯ ಸಭೆ ಅಧ್ಯಕ್ಷೆ ಸುನಂದಾ ದಾಸ್ ಅಧ್ಯಕ್ಷತೆಯಲ್ಲಿ ನಡೆಯಿತು. ನೂತನ ನಗರ ವಾರ್ಡಿನಲ್ಲಿ ಎಲ್ ಇಡಿ ದೀಪ ಅಳವಡಿಸುವ ಸಂಬಂಧ ಕೈಗೊಂಡ ಕಾಮಗಾರಿಯ ಬಿಲ್ ಮಾಡುವಾಗ ಸದಸ್ಯರ ಸಹಿ ಪಡೆದಿಲ್ಲ. ವಾರ್ಡ್ ಸದಸ್ಯರ ಗಮನಕ್ಕೆ ತಾರದೇ ಬಿಲ್ ಮಾಡಿರುವ ಬಗೆಗೆ ಸದಸ್ಯ ಅಬ್ದುಲ್ ಅಲಿ ಆಕ್ಷೇಪ ವ್ಯಕ್ತಪಡಿಸಿದರು.

ಐಬಿ ರಸ್ತೆ ಪಕ್ಕ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿರುವ ಕುರಿತು ಅಬ್ದುಲ್ ಅಲಿ ಆಕ್ಷೇಪಿಸಿದರು. ಈಗಾಗಲೇ ಪಟ್ಟಣದಲ್ಲಿರುವ ಸಾರ್ವಜನಿಕ ಶೌಚಾಲಯಗಳಲ್ಲಿ ಸ್ವಚ್ಛತೆ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಇರುವ ಶೌಚಾಲಯಗಳನ್ನು ಸರಿಯಾಗಿ ನಿರ್ವಹಿಸಲು ಕ್ರಮ ಕೈಗೊಳ್ಳುವುದನ್ನು ಬಿಟ್ಟು ಹೊಸ ಶೌಚಾಲಯಗಳು ಏಕೆ ಎಂದು ಪ್ರಶ್ನಿಸಿದರು. 

ಘನತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣೆಗೆ ಮಾನವ ಶಕ್ತಿ ಪೂರೈಸುವ ಕುರಿತು ಹಾಗೂ ಕಚೇರಿಯ ಡಾಟಾ ಎಂಟ್ರಿ ಆಪರೇಟರ್ ಪೂರೈಸುವ ಕುರಿತು ಟೆಂಡರ್ ಕರೆಯಲು ನಿರ್ಧರಿಸಲಾಯಿತು. 15 ನೇ ಹಣಕಾಸು ಯೋಜನೆಯಡಿ ತಯಾರಿಸಿದ ಕ್ರಿಯಾ ಯೋಜನೆಯಲ್ಲಿ ಅನುಮೋದನೆಯಾಗದೇ ಇರುವ 80 ಲಕ್ಷ ರು ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಪೂರಕ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಯಿತು.

300x250 AD

ಪ.ಪಂ.ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಆದಿತ್ಯ ಗುಡಿಗಾರ, ಮುಖ್ಯಾಧಿಕಾರಿ ಸಂಗನಬಸಯ್ಯ, ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.

Share This
300x250 AD
300x250 AD
300x250 AD
Back to top