ಶಿರಸಿ: ಸಂಸದೀಯ ಪ್ರಜಾಪ್ರಭುತ್ವದ ಅರಿವು ಮೂಡಿಸುವ, ಮತದಾನದ ಮಹತ್ವ ತಿಳಿಸುವ ಹಾಗೂ ನಾಯಕತ್ವದ ಗುಣಬೆಳೆಸುವ ಉದ್ದೇಶದಿಂದ ತಾಲೂಕಿನ ಬೀಳೂರಿನ ಪದವಿಪೂರ್ವ ಕಾಲೇಜಿನಲ್ಲಿ ಕಾಲೇಜಿನ ಚುನಾವಣಾ ಸಾಕ್ಷರತಾ ಸಂಘದ ಮೂಲಕ ವಿದ್ಯಾರ್ಥಿಗಳಿಗೆ ಯುವ ಸಂಸತ್ ಚುನಾವಣೆ ನಡೆಸಲಾಯಿತು.
ರಾಷ್ಟ್ರೀಯ ಚುನಾವಣಾ ಆಯೋಗದ ನಿಯಮ ಮತ್ತು ಭಾರತೀಯ ಸಂಸದೀಯ ಪದ್ಧತಿಯ ನಿಯಮಾನುಸಾರ ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ ನಾಮಪತ್ರ ಹಿಂಪಡೆಯುವುದು, ಚುನಾವಣಾ ಪ್ರಚಾರ, ಮತದಾನ ಪ್ರಕ್ರಿಯೆ ಇತ್ಯಾದಿ ಎಲ್ಲಾ ಚುನಾವಣಾ ಹಂತಗಳನ್ನು ಅನುಸರಿಸಲಾಯಿತು.
ಈ ಯುವ ಸಂಸತ್ ಚುನಾವಣೆಯಲ್ಲಿ ಸಂಸತ್ ಸದಸ್ಯರಾಗಿ ವಿದ್ಯಾರ್ಥಿಗಳಾದ ಶಶಾಂಕ, ಮನೀಷ, ಗಣೇಶ, ರವಿ, ಸುಜಾತಾ, ಹೇಮಾ, ಪಲ್ಲವಿ, ವಂದನಾ ಆಯ್ಕೆಗೊಂಡರು ಮತ್ತು ವಿದ್ಯಾರ್ಥಿಗಳಾದ ಮೇಘನಾ, ಆಶಿತಾ, ಗುತ್ತೆಪ್ಪ, ಜಯಂತ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಪ್ರಾಂಶುಪಾಲರಾದ ನಾಗರಾಜ ಗಾವಂಕರ ನಾಯಕತ್ವದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾದ ಉಮೇಶ ನಾಯ್ಕ ಚುನಾವಣೆಯನ್ನು ಸಂಘಟಿಸಿದ್ದರು ಹಾಗೂ ಎಲ್ಲಾ ಉಪನ್ಯಾಸಕರು ಸಹಕರಿಸಿದರು.