ಕಾರವಾರ: ತಾಲೂಕಿನ ಸದಾಶಿವಗಡದ ಸಿದ್ಧಿವಿನಾಯಕ ಸಭಾಗೃಹದಲ್ಲಿ ಸದಾಶಿವಗಡ ಕಣಸಗಿರಿ ಕ್ಷತ್ರೀಯ ಕೋಮಾರಪಂತ ಸಮಾಜದ ಸಭೆಯನ್ನು ಆಯೋಜಿಸಲಾಗಿತ್ತು.
ಸಮಾಜದ ಅಧ್ಯಕ್ಷ ಸಾಯಿನಾಥ ಮೇತ್ರಿ ಸಮಾಜ ಬಾಂಧವರನ್ನು ಉದ್ದೇಶಿಸಿ ಸಮಾಜದ ಅಭಿವೃದ್ಧಿ ಹಾಗೂ ಮುಂದಿನ ಏಳ್ಗೆಗಾಗಿ ಹಮ್ಮಿಕೊಂಡಿದ್ದ ಚಟುವಟಿಕೆಗಳ ಬಗ್ಗೆ ವಿವರಿಸಿದರು.ಸಮಾಜ ಬಾಂಧವರಿಂದ ಉದ್ದೇಶಿತ ಸಮಾಜ ಭವನವನ್ನು ಕಣಸಗಿರಿಯಲ್ಲಿ ನಿರ್ಮಿಸಲು ಎಲ್ಲರ ಅಭಿಪ್ರಾಯದೊಂದಿಗೆ ಸರ್ವಾನುಮತದಿಂದ ನಿರ್ಧರಿಸಲಾಯಿತು ಹಾಗೂ ಡಿಸೆಂಬರ್ ತಿಂಗಳಿಂದ ಕಟ್ಟಡ ಕೆಲಸ ವನ್ನು ಪ್ರಾರಂಭಿಸಲಾಗುವದೆಂದು ತಿಳಿಸಿ ಹೇಳಿದರಲ್ಲದೇ ಸಮಾಜದ ದಾನಿಗಳಿಂದ ಕಟ್ಟಡ ನಿರ್ಮಾಣಕ್ಕೆ ಸಾಧ್ಯವಾದಷ್ಟು ಮಟ್ಟಿಗೆ ಸಹಾಯ ಮಾಡಬೇಕೆಂದು ಮನವಿ ಮಾಡಿದರು. ಸಭೆಯಲ್ಲಿ ಸಮಾಜದ ಇತರ ಗಣ್ಯ ವ್ಯಕ್ತಿಗಳಾದ ಡಾ. ಗಜೇಂದ್ರ ಕೆ.ನಾಯ್ಕ, ಎಮ್.ಜಿ. ನಾಯ್ಕ, ರಾಮದಾಸ ನಾಯ್ಕ, ದೀಪಕ ನಾಯ್ಕ, ಆನಂದ ನಾಯ್ಕ, ಅಡ್ವಕೇಟ್ ವರದಾ ನಾಯ್ಕ, ಶಾಮಲಾ ನಾಯ್ಕ ಹಾಗೂ ಸಮಾಜದ ಅನೇಕ ಸದಸ್ಯರುಗಳು ಉಪಸ್ಥಿತರಿದ್ದರು.