Slide
Slide
Slide
previous arrow
next arrow

ಪ್ರತಿ ಯುಗಕ್ಕೆ ಒಬ್ಬ ಗುರು,ಶಂಕರಾಚಾರ್ಯರು ಕಲಿಯುಗಕ್ಕೆ ಗುರು: ಸ್ವರ್ಣವಲ್ಲಿ ಶ್ರೀ

300x250 AD

ಶಿರಸಿ: ಕಲಿಯುಗದ ಯುಗ ಗುರುಗಳು ಶ್ರೀ ಶಂಕರಾಚಾರ್ಯರು. ಅವರ ಸ್ಮರಣೆ ಸದಾ ಇಟ್ಟುಕೊಂಡು ಅವರು ಬೋಧಿಸಿದ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಆಶಿಸಿದರು.

ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ಅವರು ತಮ್ಮ 32ನೇ ಚಾತುರ್ಮಾಸ್ಯದ ನಿಮಿತ್ತ ವಿವಿಧೆಡೆಯಿಂದ ಆಗಮಿಸಿದ ಭಂಡಾರಿ ಸಮಾಜದಿಂದ ಸಮರ್ಪಿಸಿದ ವಿವಿಧ ಸೇವೆಗಳನ್ನು ಸ್ವೀಕರಿಸಿ ಆಶೀರ್ವಚನ ನುಡಿದರು.

ಒಂದೊಂದು ಯುಗಕ್ಕೆ ಒಬ್ಬೊಬ್ಬರು ಯುಗ ಗುರುಗಳಿರುತ್ತಾರೆ. ಕೃತಯುಗಕ್ಕೆ ದಕ್ಷಿಣಾಮೂರ್ತಿಗಳು ಯುಗ ಗುರುಗಳಾಗಿದ್ದರು. ತ್ರೇತಾಯುಗದಲ್ಲಿ ದತ್ತಾತ್ರೇಯರು ಹಾಗೂ ದ್ವಾಪರಯುಗದಲ್ಲಿ ಶ್ರೀ ವೇದವ್ಯಾಸರು ಯುಗ ಗುರುಗಳಾಗಿ ಮಾರ್ಗದರ್ಶನ ಮಾಡಿದ್ದಾರೆ. ಹಾಗೆಯೇ ಈ ಕಲಿಯುಗದಲ್ಲಿ ಶ್ರೀ ಶಂಕರಾಚಾರ್ಯರು ಯುಗ ಗುರುಗಳು. ಅವರ ಸ್ಮರಣೆ ನಮಗೆ ಸದಾ ಇರಬೇಕು ಎಂದು ಹೇಳಿದರು.

ನಮ್ಮ ಜೀವನಕ್ಕೊಂದು ಸೂಕ್ತವಾದ ಗುರಿಯನ್ನು ತೋರುವವನೇ ಗುರು. ಭಗವದ್ಗೀತೆಯನ್ನು ಭಗವಂತ ಅರ್ಜುನನಿಗೆ ಹೇಳಿದ. ಅದನ್ನು ಶ್ಲೋಕರೂಪದಲ್ಲಿ ಬರೆದವರು ಶ್ರೀ ವೇದವ್ಯಾಸರು. ಅದಕ್ಕೆ ಮೊಟ್ಟಮೊದಲು ಭಾಷ್ಯ ಬರೆದವರು ಶ್ರೀ ಶಂಕರಾಚಾರ್ಯರು. ಉಪಲಬ್ಧ ಇರುವ ಭಾಷ್ಯಗಳಲ್ಲಿ ಅವರದೇ ಮೊದಲಿನದ್ದು ಎಂದರು.

ಗುರು ಪರಂಪರೆಯಿಂದ ಹರಿದು ಬಂದ ಭಗವದ್ಗೀತೆಯನ್ನು ದಿನಚರಿಯನ್ನಾಗಿಸಿಕೊಳ್ಳಬೇಕು. ಪ್ರತಿ ದಿನ ಭಗವದ್ಗೀತೆಯ ಒಂದು ಅಧ್ಯಾಯವನ್ನು ಓದುವುದರಿಂದ ಜೀವನದಲ್ಲಿ ಅದ್ಭುತವಾದ ಬದಲಾವಣೆಗಳಾಗುತ್ತವೆ. ಗೀತೆ ಜೀವನ ಮಾರ್ಗದರ್ಶಿ. ಸರಳಾನುವಾದದೊಂದಿಗೆ ಗೀತೆಯನ್ನು ಅಧ್ಯಯನದ ಮಾಡಿದರೆ ಉತ್ತಮ ಜೀವನ ನಮ್ಮದಾಗುವುದಲ್ಲದೆ ಕೊನೆಯಲ್ಲಿ ಉತ್ತಮ ಗತಿಯನ್ನು ಪಡೆಯಬಹುದು ಎಂದೂ ಹೇಳಿದರು.

300x250 AD

ಈ ವೇಳೆ ದತ್ತಾತ್ರಯ ಭಂಡಾರಿ, ಪರಶುರಾಮ ಭಂಡಾರಿ ಇತರರು ಇದ್ದರು. ಆರ್.ಎಸ್.ಹೆಗಡೆ ಸ್ವಾಗತಿಸಿದರು.

ಕೋಟ್…

ಮಠದಲ್ಲಿ ಭಂಡಾರಿ ಸಮಾಜದವರ ಪಂಚವಾದ್ಯ ಸೇವೆ ದೇವರಿಗೆ ಉತ್ತಮ ಸೇವೆ. ಅದು ಮನಸ್ಸಿನಲ್ಲಿ ಭಕ್ತಿಯನ್ನು ಉದ್ದೀಪನಗೊಳಿಸುತ್ತದೆ.- ಗಂಗಾಧರೇಂದ್ರ ಸರಸ್ವತಿ, ಸ್ವರ್ಣವಲ್ಲೀ ಶ್ರೀ

Share This
300x250 AD
300x250 AD
300x250 AD
Back to top