ಕುಮಟಾ: ಕರ್ನಾಟಕದ ರಾಜ್ಯದ ಇತಿಹಾಸದಲ್ಲಿ ಒಂದೇ ಸಂಸ್ಥೆಯ 8 ಮಂದಿ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ. ತಾಲೂಕಿನ ದಯಾನಿಲಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಮತ್ತು ತರಬೇತಿ ಸಂಸ್ಥೆಯ ಮೂರು ಮಕ್ಕಳು ಹಾಗೂ 5 ತರಬೇತುದಾರರು ರಾಜ್ಯ ಮಟ್ಟದಲ್ಲಿ ನಡೆದ ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸುತ್ತಿದ್ದಾರೆ.
ಸ್ವಿಮ್ಮಿಂಗ್ ವಿಭಾಗದಲ್ಲಿ ಶ್ರೀವತ್ಸ ಗಂಗಾಧರ್ ಭಟ್ ಮಂಡ್ಯದಲ್ಲಿ ಜುಲೈ 18 ರಿಂದ 23 ರವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡದ ಕ್ರೀಡಾಪಟುವಾಗಿ ಹಾಗೂ ಯಶೋಧಾ ಭಟ್ರವರು ತರಬೇತುದಾರರಾಗಿ ಭಾಗವಹಿಸಲಿದ್ದಾರೆ.
ಟೇಬಲ್ ಟೆನ್ನಿಸ್ ವಿಭಾಗದಲ್ಲಿ ವಿಶ್ಲೇಶ್ – ಲೋಕೇಶ್ವರ ನಾಯ್ಕ ಹರಿಯಾಣದ ಫರೀದಾಬಾದ್ನಲ್ಲಿ ಜುಲೈ 20 ರವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡದ ಕ್ರೀಡಾಪಟುವಾಗಿ ಹಾಗೂ ಸಿರಿಲ್ ಲೋಪಿಸರವರು ತರಬೇತುದಾರರಾಗಿ ಭಾಗವಹಿಸಲಿದ್ದಾರೆ.
ಜೂಡೋ ವಿಭಾಗದಲ್ಲಿ – ನಂದನ್ ನಾರಾಯಣ್ ದೈವಜ್ಞ ಹರಿಯಾಣದ ಸೋನಿಪತ್ ನಲ್ಲಿ ಅಗಸ್ಟ್ 5 ರಿಂದ 10 ರವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡದ ಕ್ರೀಡಾಪಟುವಾಗಿ ಹಾಗೂ ಭುವನೇಶ್ವರಿ ಭಟ್ ಅವರು ತರಬೇತುದಾರರಾಗಿ ಭಾಗವಹಿಸಲಿದ್ದಾರೆ.
ಪವರ್ ಲಿಫ್ಟಿಂಗ್ ವಿಭಾಗದಲ್ಲಿ ಅನೀಲ ನಾಯ್ಕರವರು ಗುಜರಾತಿನ ಗಾಂಧಿನಗರದಲ್ಲಿ ಜುಲೈ 16 ರಂದು ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡದ ತರಬೇತುದಾರರಾಗಿ ಭಾಗವಹಿಸಿದ್ದಾರೆ. ಬ್ಯಾಡ್ಮಿಂಟನ್ ವಿಭಾಗದಲ್ಲಿ ಗಣೇಶ್ ಕಾಮತ್ರವರು ಜಾರ್ಖಂಡ್ನ ಸ್ಟೀಲ್ಸ್ ನಲ್ಲಿ ಕಳೆದ ತಿಂಗಳು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳ ಹಾಗೂ ತರಬೇತುದಾರರ ಸಾಧನೆಗೆ ದಯಾನಿಲಯ ಶಾಲೆಯ ಬಾಲಕೃಷ್ಣ ಕೋರಗಾಂವಕರ್ ಹಾಗೂ ತರಬೇತಿ ನೀಡಿದ ಎಲ್ಲ ಶಿಕ್ಷಕರು ಅಭಿನಂದಿಸಿ, ಹರ್ಷ ವ್ಯಕ್ತ ಪಡಿಸಿದ್ದಾರೆ.