ಹೊನ್ನಾವರ: ಹೆರಂಗಡಿ ಗ್ರಾಮ ಪಂಚಾಯತ ಮೂಡ್ಕಣಿ ವಾರ್ಡ್ ಅಡ್ಕಾರ ಹಿರಿಯ ಪ್ರಾಥಮಿಕ ಶಾಲೆಯ 69 ಮಕ್ಕಳಿಗೆ ಹೆರಂಗಡಿ ಗ್ರಾ.ಪಂ ಮೂಡ್ಕಣಿ ವಾರ್ಡ್ ಸದಸ್ಯರಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಿಸಲಾಯಿತು.
ನೋಟ್ ಬುಕ್ ವಿತರಿಸಿ ಮಾತನಾಡಿದ ವಿನಾಯಕ ನಾಯ್ಕ, ಗ್ರಾ.ಪಂ ನಮಗೆ ನೀಡುವ ಗೌರವ ಧನವನ್ನು ಸಾಮಾಜಿಕ ಕಾರ್ಯಕ್ಕೆ ಬಳಸುವ ಉದ್ದೇಶದೊಂದಿಗೆ ನಾವು ಸದಸ್ಯರು ಸೇರಿ ವಿದ್ಯಾರ್ಥಿಗಳಿಗೆ ನೊಟ್ ಬುಕ್ ವಿತರಿಸುವ ಕಾರ್ಯವನ್ನು ಮಾಡುತ್ತಿದ್ದೇವೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬುವಂತೆ ಪ್ರಾಥಮಿಕ ಹಂತದಲ್ಲಿ ನಾವು ಒಳ್ಳೆಯ ನಡತೆ ಸಂಸ್ಕಾರಗಳನ್ನು ಬೆಳಿಸಿಕೊಂಡು ಹೋದಾಗ ಮುಂದೆ ಉನ್ನತ ಹುದ್ದೆ ಪಡೆಯಬಹುದು. ಕಲಿತ ಶಾಲೆ ಹಾಗೂ ಕಲಿಸಿದ ಗುರುಗಳ ಬಗ್ಗೆ ವಿದ್ಯಾರ್ಥಿಗಳು ಯಾವಾಗಲೂ ಗೌರವದಿಂದ ನಡೆದುಕೊಳ್ಳಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಶಿಕ್ಷಕರೊಂದಿಗೆ ಪಾಲಕರ ಪಾತ್ರ ಅತಿ ಮುಖ್ಯ ಎಂದು ಹೇಳಿದರು.
ಗ್ರಾ.ಪಂ ಉಪಾಧ್ಯಕ್ಷರಾದ ಭಾರತಿ ನಾಯ್ಕ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಬಹಳಷ್ಟು ಯೋಜನೆಗಳು ಇವೆ ಇದನ್ನು ಸದುಪಯೋಗಪಡಿಸಿಕೊಂಡು ಒಳ್ಳೆಯ ಶಿಕ್ಷಣ ಪಡೆಯಿರಿ ಎಂದು ಹೇಳಿದರು.
ಸದಸ್ಯರಾದ ಪ್ರಕಾಶ ನಾಯ್ಕ ಮಾತನಾಡಿ ಈ ಶಾಲೆಯಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಅವರ ಸಹಕಾರದಿಂದ ಮುಂದೆ ಶಾಲೆ ಅಭಿವೃದ್ದಿಗೊಳಿಸೋಣ ಹಾಗೂ ಗ್ರಾ.ಪಂ ಸಹಕಾರ ನೀಡುವುದಾಗಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ.ಡಿ.ಎಮ್.ಸಿ ಅಧ್ಯಕ್ಷರಾದ ರಾಜು ನಾಯ್ಕ ಮಾತನಾಡಿ ದಾನಗಳಲ್ಲಿ ಶ್ರೇಷ್ಟ ದಾನ ವಿದ್ಯಾ ದಾನ ಎನ್ನುವಂತೆ ನಮ್ಮ ಶಾಲೆಯಲ್ಲಿ ಕಳೆದ 9 ವರ್ಷಗಳಿಂದ ವಿನಾಯಕ ನಾಯ್ಕ ನೊಟ್ ಬುಕ್ ವಿತರಿಸುತ್ತಾ ಬಂದಿದ್ದು ಈ ವರ್ಷ 4 ಜನ ಸದಸ್ಯರು ಸೇರಿ ವಿದ್ಯಾರ್ಥಿಗಳಿಗೆ ನೊಟ್ ಬುಕ್ ವಿತರಿಸಿರುವುದು ಸಂತಷ ತಂದಿದೆ ನಿಮ್ಮ ಒಗ್ಗಟ್ಟಿನಿಂದ ನಮ್ಮ ಶಾಲೆಯು ಇನ್ನಷ್ಟು ಅಭಿವೃದ್ದಿ ಹೊಂದಲಿ ಎಂದು ಹೇಳಿದರು.
ವೇದಿಕೆಯಲ್ಲಿ ಗ್ರಾ.ಪಂ ಸದಸ್ಯರಾದ ರೇಖಾ ನಾಯ್ಕ ,ಮುಖ್ಯ ಶಿಕ್ಷಕರಾದ ಎಂ ಎಂ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕರಾದ ದಿನೇಶ ಪಟಗಾರ ಸ್ವಾಗತಿಸಿದರು, ಶಿಕ್ಷಕಿ ಜಯಾ ಶಾನಭಾಗ ವಂದಿಸಿದರು.