ದಾಂಡೇಲಿ: ನಗರದ ಸೈಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಸಂಸ್ಥೆಯ 101ನೇ ಸಂಸ್ಥಾಪನಾ ದಿನಾಚರಣೆಯನ್ನು ಶುಕ್ರವಾರ ಆಚರಿಸಲಾಯಿತು.ಸಂಸ್ಥೆಯ ಸಂಸ್ಥಾಪಕರಾದ ರೆಮೆಂಡ್ ಪ್ರಾನ್ಸೀಸ್ ಮಸ್ಕರೆನ್ಸ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸ್ಥಳೀಯ ಚರ್ಚಿನ ಧರ್ಮಗುರುಗಳಾದ ಮಾರ್ಕ್ ಫರ್ನಾಂಡೀಸ್ ಅವರು ಶೈಕ್ಷಣಿಕ ಕ್ಷೇತ್ರದ ಬಲವರ್ಧನೆಗೆ ರೆಮೆಂಡ್ ಪ್ರಾನ್ಸೀಸ್ ಮಸ್ಕರೆನ್ಸ್ ಅವರ ಕೊಡುಗೆ ಅಪಾರವಾಗಿದೆ. ಅಂದು ಅವರು ವಿಶಿಷ್ಟ ದೂರದೃಷ್ಟಿಯನ್ನಿಟ್ಟುಕೊಂಡು ಕಟ್ಟಿದ ಸೈಂಟ್ ಮೈಕಲ್ ಶಿಕ್ಷಣ ಸಂಸ್ಥೆ ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ ಎಂದರು.
ಮುಖ್ಯ ಅತಿಥಿಗಳಾಗಿ ಉಪ ವಲಯಾರಣ್ಯಾಧಿಕಾರಿ ಭಾರತಿ.ಎಂ.ಚಿಪ್ಪಲಕಟ್ಟಿಯವರು ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಯಿನಿ ಸೆಲ್ವಿ, ಎಸ್.ಡಿ.ಎಂ.ಸಿ ಸದಸ್ಯರುಗಳಾದ ಗುರು ಮಠಪತಿ, ರಮೇಶ ಗುಂಡುಪ್ಕರ್, ರೇಷ್ಮಾ ಕುಮಾರ್, ದೀಪ್ತಿ ನಾಯಕ, ಡೈನಾ ಬೋರ್ಜಸ್, ಶೋಭಾ ರಾಥೋಡ, ಅನುಪಮ ಶೆಟ್ಟಿ, ನುಸರತ್ ಖಾನಪುರಿ, ಅಶ್ವಿನ್ ವಿಷ್ಣುಮೂರ್ತಿ ರಾವ್, ನಿರ್ಮಲಾ ದಂಡಗಲ್, ಮಾರ್ಶಲಿನಾ ಬಳ್ಳಾರಿ, ಲವೀನಾ ಗುರಯ್ಯಾ, ನೀಲಾಲೋಚನಾ ಶಾಬಾದಿ, ಶಾಲೆಯ ಶಿಕ್ಷಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.