• first
  second
  third
  previous arrow
  next arrow
 • ದ್ವಿತೀಯ ಪಿಯು ಫಲಿತಾಂಶ; ಚೈತನ್ಯ ಕಾಲೇಜು 128 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಪಾಸ್

  ಶಿರಸಿ: ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು, ನಗರದ ಎಂ.ಇ.ಎಸ್ ಚೈತನ್ಯ ಪದವಿ ಪೂರ್ವ ಮಹಾವಿದ್ಯಾಲಯ ಶಿರಸಿ ಕಾಲೇಜಿನ 325 ವಿದ್ಯಾರ್ಥಿಗಳಲ್ಲಿ 128 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ 197 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

  ವಿಜ್ಞಾನ ವಿಭಾಗದಲ್ಲಿ 240 ವಿದ್ಯಾರ್ಥಿಗಳು ನೊಂದಾಯಿಸಿದ್ದು, ಅದರಲ್ಲಿ 115 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ 125 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
  ವಾಣಿಜ್ಯ ವಿಭಾಗದಲ್ಲಿ 85 ವಿದ್ಯಾರ್ಥಿಗಳು ನೊಂದಾಯಿಸಿದ್ದು ಅದರಲ್ಲಿ 13 ಉನ್ನತ ಶ್ರೇಣಿಯಲ್ಲ, 75 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
  ವಿಜ್ಞಾನ ವಿಭಾಗದಲ್ಲಿ ಚಿನ್ಮಯ ನಾಗರಾಜ ಹೆಗಡೆ 600/600 ಅಂಕ, ಆಶ್ರೀತ ಭಾರದ್ವಾಜ್ 599/600 ಅಂಕ, ಪ್ರಣವ ವಾಸುದೇವ ಅಂಬಿಗ ಹಾಗೂ ಸುದೀಪ ಸಿ ಎಸ್ 598/600 ಅಂಕಗಳನ್ನು ಪಡೆದು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿರುತ್ತಾರೆ.
  ವಾಣಿಜ್ಯ ವಿಭಾಗದಲ್ಲಿ ವೈಷ್ಣವಿ ಶಾನಭಾಗ ಹಾಗೂ ಅನೀಶ್ ಮಂಗೇಶ್ ದೇಸಾಯಿ 600/600 ಅಂಕ, ಮನೋಜ್ ಆರ್ ಭಟ್ 694/600 ಅಂಕ, ಸುಶಾಂತ ಆರಾಧ್ಯ ಮಠ 587/600 ಅಂಕ ಪಡೆದು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ.

  Share This
  Back to top