Browsing: ಜಿಲ್ಲಾ ಸುದ್ದಿ

ಶಿರಸಿ: ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ, ನಿವೃತ್ತ ಶಿಕ್ಷಕರು ಹಾಗೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 100% ಫಲಿತಾಂಶ ಪಡೆದ ಶಾಲೆಗಳ ಮುಖ್ಯಸ್ಥರನ್ನು ಗೌರವಿಸುವ ಮೂಲಕ…
Read More

ಭಟ್ಕಳ: ಪುರಸಭೆ ಅಂಗಡಿಕಾರರಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಭಟ್ಕಳ ಘಟಕದ ನೇತೃತ್ವದಲ್ಲಿ ಸಂಘಟನೆ ಕಾರ್ಯಕರ್ತರು ಹಾಗೂ ಸಂತ್ರಸ್ಥ ಅಂಗಡಿಕಾರನ್ನೊಳಗೊಂಡಂತೆ ಭಟ್ಕಳದ ಹಳೆ ಬಸ್ ನಿಲ್ದಾಣದಿಂದ ಸಂಶುದ್ದೀನ್…
Read More

ಕಾರವಾರ:ಬಟ್ಟೆ ಒಣಗಿಸಲು ಹೊರ ಬಂದಿದ್ದ ಬಾಲಪರಾಧಿಯೊಬ್ಬ ಜಿಲ್ಲಾ ರಿಮಾಂಡ್‌ ಹೋಂನಿಂದ ಸೋಮವಾರ ಬೆಳಗ್ಗೆ ಪರಾರಿಯಾಗಿದ್ದು ನಗರ ಪೊಲೀಸರು ಬಾಲಕನ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ. ಮುಂಡಗೋಡ ತಾಲೂಕಿನ ಮಳಗಿಯ ನಿವಾಸಿ ಪರಶುರಾಮ್ ಆಲೂರ್…
Read More

ಗೋಕರ್ಣ: ದನಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಹಿರೇಗುತ್ತಿ ಬಳಿ ಪೂಲೀಸರು ತಪಾಸಣೆ ನಡೆಸಿ ವಾಹನ ವಶಕ್ಕೆ ತೆಗೆದುಕೊಂಡ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ.…
Read More

ಕಾರವಾರ: ವಿದ್ಯಾರ್ಥಿ ಮುಖಂಡನ ಮುಖವಾಡ ಹಾಕಿಕೊಂಡಿರುವ ರಾಘು ನಾಯ್ಕ ತನ್ನ ಮೇಲೆಮಾರಮಾರಣಾಂತಿಕ ಹಲ್ಲೆ ನಡೆಸಿ, ಈಗ ತಾವು ಯಾವುದೇ ತಪ್ಪು ಮಾಡಿಲ್ಲ ಎನ್ನುವ ರೀತಿಯಲ್ಲಿಪತ್ರಿಕಾಗೋಷ್ಠಿಗಳನ್ನು ನಡೆಸಿ ನನ್ನ ಹೆಸರು ಕೆಡಿಸುವುದಲ್ಲದೇ ಸಾಕ್ಷಿ ನಾಶ ಮಾಡುತ್ತಿದ್ದಾರೆ. ಈ ಬಗ್ಗೆಕ್ರಮಕೈಗೊಳ್ಳಬೇಕು ಎಂದು ನಗರಸಭೆ ಸದಸ್ಯ ರತ್ನಾಕರ್ ನಾಯ್ಕ ಆಗ್ರಹಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ಸುಖಾಸುಮ್ಮನೆ ಸರಕಾರಿ ನೌಕರ ಹಾಗೂ ಕಾರವಾರಪೊಲೀಸ್ ಅಧಿಕಾರಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ತನ್ನ ಮೇಲೆ ಹಲ್ಲೆನಡೆಸಿದ್ದರಿಂದ ನಗರದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರಿಂದ ಪೊಲೀಸ್ ಅಧಿಕಾರಿಗಳು ರಾಘುನಾಯ್ಕರ ಮೇಲೆ ಪ್ರಕರಣದ ದಾಖಲಿಸಿ ಬಂಧಿಸಿದ್ದರು. ನ್ಯಾಯಾಲಯ ಸುಮಾರು 18 ದಿನ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಆ ನಂತರ ಜಾಮೀನು ಪಡೆದುಕೊಂಡುಬಂಧನದಿಂದ ಹೊರಬರುತ್ತಿದ್ದಂತೆ ರಾಘು ನಾಯ್ಕ ಹಾಗೂ ಸಹಚರರು ಪತ್ರಿಕಾಗೋಷ್ಠಿಗಳನ್ನು ನಡೆಸಿಪ್ರಕರಣ ಸಾಕ್ಷಿ ನಾಶ ಮಾಡಲು ಹೊರಟಿದ್ದಾರೆ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಸೂಕ್ತಕ್ರಮಕೈಗೊಳ್ಳಬೇಕು ಎಂದು ನಗರಸಭೆ ಸದಸ್ಯ ರತ್ನಾಕರ್ ನಾಯ್ಕ ಆಗ್ರಹಿಸಿದ್ದಾರೆ.
Read More

ಯಲ್ಲಾಪುರ: ಪಟ್ಟಣದ ಅಭಿವೃದ್ಧಿಗೆ ಶಾಸಕರಪ್ರಯತ್ನದಿಂದ ಎಸ್‍ಎಫ್‍ಸಿ ಯೋಜನೆಯಡಿರಸ್ತೆಗಳ ಅಭಿವೃದ್ಧಿಗೆ 2.50 ಕೋಟಿ ರೂಅನುದಾನ ಮಂಜೂರಾಗಿದೆ ಎಂದು ಪ.ಪಂಅಧ್ಯಕ್ಷ ಶಿರೀಷ ಪ್ರಭು ಹೇಳಿದರು. ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿ,ಪಟ್ಟಣದ 3, 4, 9, 7, 10 ನೇ ವಾರ್ಡುಗಳಲ್ಲಿಈಗಾಗಲೇ ಶೇ.100 ರಷ್ಟು ಕಾಂಕ್ರೀಟ್ ರಸ್ತೆಆಗಿದೆ. ಉದ್ಯಮನಗರ, ಆಶ್ರಯಕಾಲನಿ,ಕಾಳಮ್ಮನಗರ, ಅಕ್ಬರ್‍ಗಲ್ಲಿಗಳಲ್ಲಿ ಶೇ.60ಕಾಂಕ್ರೀಟ್ ರಸ್ತೆಯಾಗಿದ್ದು, ಈ ಅನುದಾನದಲ್ಲಿಉದ್ಯಮನಗರ, ಆಶ್ರಯಕಾಲನಿಗಳಿಗೆ ಆದ್ಯತೆಮೇರೆಗೆ ಕಾಂಕ್ರೀಟ್ ರಸ್ತೆ ಮಾಡಲಾಗುವುದು.ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆಎಂದರು. ಕಳೆದ ಸಾಲಿಲ್ಲಿ ವಿವಿಧ ಯೋಜನೆಗಳಡಿ 7.5ಕೋಟಿ ಅನುದಾನ ಬಂದಿದ್ದು, ಟೆಂಡರ್ ಮುಗಿದುಕಾಮಗಾರಿ ಹಂತಕ್ಕೆ ಬಂದಿದೆ. ಬರುವಗ್ರಾಮದೇವಿ ಜಾತ್ರೆಯ ಹಿನ್ನೆಲೆಯಲ್ಲಿ ಡಿಟಿ ರಸ್ತೆಯಕಾಂಕ್ರೀಟ್‍ಕರಣಕ್ಕೆ 67.50 ಲಕ್ಷ ರೂಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಪಟ್ಟಣದಲ್ಲಿಅಭಿವೃದ್ಧಿಗೆ ಅನುದಾನದ ಕೊರತೆಯಿಲ್ಲ.ಯಾವುದೇ ವಾರ್ಡ್‍ಗಳಿಗೆ ತಾರತಮ್ಯ ಮಾಡದೇಅಭಿವೃದ್ಧಿ ಹಂಚಿಕೆ ಮಾಡಲಾಗುತ್ತಿದೆ ಎಂದರು. 24*7 ಕುಡಿಯುವ ನೀರಿನ ಕಾಮಗಾರಿ ಸಲುವಾಗಿಒಡೆದ ರಸ್ತೆಗಳನ್ನು 75 ಲಕ್ಷ ರೂ ವೆಚ್ಚದಲ್ಲಿಇಂಟರ್‍ಲಾಕ್ ಹಾಕಿ ಪ್ಯಾಚ್‍ವರ್ಕ್ಮಾಡಲಾಗುವುದು. ಬೆಲ್‍ರಸ್ತೆ ಮತ್ತುಮುಂಡಗೋಡ ರಸ್ತೆ ಪಕ್ಕದ ಗಟಾರ ಕಾಮಗಾರಿವಿಳಂಬವಾಗಿದ್ದು, ಗುತ್ತಿಗೆದಾರರಿಗೆ ಈ ಕುರಿತುನೋಟಿಸ್ ನೀಡಲಾಗಿದೆ ಎಂದರು. ಮೀನು ಮಾರುಕಟ್ಟೆ ಹರಾಜುಕಟ್ಟೆಗೆ ಇ-ಟೆಂಡರ್ಕರೆಯುತ್ತಾರೆಂದು ಬಿಜೆಪಿ ಮುಖಂಡ ಪ್ರಮೋದಹೆಗಡೆ ಆರೋಪಿಸಿದ್ದು, ಅದು ಸತ್ಯಕ್ಕೆದೂರವಾಗಿದೆ. ಸ್ಥಳೀಯ ಅಂಗಡಿಕಾರರ ಹಿತಲಕ್ಷಿಸಿಯೇ ಟೆಂಡರ್ ಕರೆಯಲಾಗುವುದು. ಇ-ಟೆಂಡರ್ ಕರೆಯುವ ಪ್ರಶ್ನೆಯಿಲ್ಲ ಎಂದ ಅವರುಅಭಿವೃದ್ಧಿ ಕಾಮಗಾರಿಗಳಿಂದತೊಂದರೆಯಾಗುತ್ತಿರುವ ಕುರಿತು ಜನರು ಏನೂಮಾತನಾಡುತ್ತಿಲ್ಲ. ಬಿಜೆಪಿ ಮುಖಂಡರೇ ಸುಳ್ಳುಹೇಳಿ ಅಪಪ್ರಚಾರ ನಡೆಸುತ್ತಿದ್ದಾರೆಂದುಆರೋಪಿಸಿದರು. ಖಾದಿ ಮತ್ತು ಗ್ರಾಮೋದ್ಯೋಗಮಂಡಳಿಯ ಸದಸ್ಯ ವಿಜಯ ಮಿರಾಶಿ ಇದ್ದರು.
Read More

ಶಿರಸಿ: ಭಾರತದ ಭವಿಷ್ಯ ಹಳ್ಳಿಗಳಲ್ಲಿ ಇದೆ. ಹಳ್ಳಿಗಳನ್ನು ಅರಸಿ ಮತ್ತೆ ವಿದ್ಯಾವಂತರು, ಕೃಷಿ ಆಸಕ್ತರು ಬಂದೇ ಬರುತ್ತಾರೆ. ಹಳ್ಳಿಗಳ ಭಾರತವೇ ಜಗತ್ತನ್ನು ಉಳಿಸಬಲ್ಲದು ಎಂದು ಭಾರತ ಪರಿಕ್ರಮ ಯಾತ್ರೆಯ ನೇತಾರ…
Read More

ಸಿದ್ದಾಪುರ: ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಹಣಜಿಬೈಲ್ ನೇತೃತ್ವದಲ್ಲಿ ಸಿದ್ದಾಪುರದ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಸಂಸದ ಅನಂತ ಕುಮಾರ ಹೆಗಡೆಯವರು ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ…
Read More

ಶಿರಸಿ: ಬಯಸದೇ ಬಂದ ಅದೃಷ್ಟ ಎನ್ನುವಂತೆ ಪ್ರಧಾನಿ ಮೋದಿ ಮಂತ್ರಿ ಮಂಡಲದಲ್ಲಿ ಸಚಿವರಾಗಿ ಭಾನುವಾರ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗು ಸಂಸದ ಅನಂತ ಕುಮಾರ ಹೆಗಡೆ ರಾಜ್ಯ ಖಾತೆ ಸಚಿವರಾಗಿ…
Read More

ಶಿರಸಿ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗು ಉತ್ತರ ಕನ್ನಡ ಸಂಸದರಾಗಿರುವ ಅನಂತಕುಮಾರ ಹೆಗಡೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ದೊರೆಯುವುದು ಬಹುತೇಕ ಖಚಿತಗೊಂಡಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.…
Read More